»   » ಪ್ರಭಾಸ್ ಸಂಭಾವನೆ ಕೇಳಿ ಸಿನಿಮಾ ಡ್ರಾಪ್ ಮಾಡ್ತಿದ್ದಾರಂತೆ ಕರಣ್ ಜೋಹರ್.!

ಪ್ರಭಾಸ್ ಸಂಭಾವನೆ ಕೇಳಿ ಸಿನಿಮಾ ಡ್ರಾಪ್ ಮಾಡ್ತಿದ್ದಾರಂತೆ ಕರಣ್ ಜೋಹರ್.!

Posted By:
Subscribe to Filmibeat Kannada

'ಬಾಹುಬಲಿ' ಚಿತ್ರದ ನಂತರ ನಟ ಪ್ರಭಾಸ್ ಅವರನ್ನ ಬಾಲಿವುಡ್ ನಲ್ಲಿ ಲಾಂಚ್ ಮಾಡುವ ಯೋಚನೆ ಮಾಡಿದ್ದರು ನಿರ್ಮಾಪಕ ಕರಣ್ ಜೋಹರ್. ಆದ್ರೀಗ, ಪ್ರಭಾಸ್ ಸಂಭಾವನೆ ಕೇಳಿ ಕರಣ್ ಆಶ್ಚರ್ಯವಾಗಿದ್ದು, ಈ ಸಿನಿಮಾವನ್ನ ಡ್ರಾಪ್ ಮಾಡ್ತಿದ್ದಾರಂತೆ

ಹೌದು, 'ಬಾಹುಬಲಿ-2' ಚಿತ್ರದ ಹಿಂದಿ ವಿತರಣ ಹಕ್ಕು ಪಡೆದುಕೊಂಡಿದ್ದ ಕರಣ್, ಸಿನಿಮಾದ ಸಕ್ಸಸ್ ನೋಡಿ ತಮ್ಮದೇ ಸ್ವಂತ ಬ್ಯಾನರ್ 'ಧರ್ಮ ಪ್ರೊಡಕ್ಷನ್'ನಲ್ಲಿ ಪ್ರಭಾಸ್ ಅವರನ್ನ ಬಾಲಿವುಡ್ ಗೆ ಪರಿಚಯಿಸಲು ನಿರ್ಧರಿಸಿದ್ದರು. ಇದೀಗ, ತಮ್ಮ ಚೊಚ್ಚಲ ಚಿತ್ರಕ್ಕೆ ಪ್ರಭಾಸ್ ಅತಿ ಹೆಚ್ಚು ಮೊತ್ತವನ್ನ ಸಂಭಾವನೆ ಆಗಿ ಕೇಳುತ್ತಿರುವ ಹಿನ್ನಲೆ ಈ ಯೋಜನೆಯನ್ನ ಕೈಬಿಡಲು ಚಿಂತಿಸಿದ್ದಾರೆ ಎನ್ನಲಾಗಿದೆ.

ಹುಟ್ಟುಹಬ್ಬದ ದಿನವೇ ಪ್ರಭಾಸ್ ಚಿತ್ರದ ಮೇಲೆ ಕೇಳಿ ಬಂದ ಆರೋಪವಿದು!

Prabhas demanded 20 crore for his Bollywood debut

ಪ್ರಭಾಸ್ ದಕ್ಷಿಣ ಭಾರತದ ಸ್ಟಾರ್ ನಟ. ಇದವರೆಗೂ ಸೂಪರ್ ಸ್ಟಾರ್ ರಜನಿಕಾಂತ್ ಗೂ ಕೂಡ ಇಷ್ಟೊಂದು ಮೊತ್ತ ಹಿಂದಿಯಲ್ಲಿ ನೀಡಿಲ್ಲ. ಹಾಗಾಗಿ, ಡೆಬ್ಯೂ ಸಿನಿಮಾಗೆ ಇಷ್ಟೊಂದು ಸಂಭಾವನೆ ಕೇಳಿರುವುದು ಈಗ ಬಾಲಿವುಡ್ ನಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಸೌತ್ ಸಿನಿಲೋಕದಲ್ಲಿ ಯಾವ ನಟನ ಎತ್ತರ ಎಷ್ಟಿದೆ?

ಸದ್ಯ, ಪ್ರಭಾಸ್ 'ಸಾಹೋ' ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ತೆಲುಗು ಸೇರಿದಂತೆ ತಮಿಳು, ಹಿಂದಿಯಲ್ಲೂ ಬಿಡುಗಡೆಯಾಗಲಿದೆ. ಸೌತ್ ನಟನ ಸಿನಿಮಾ ಹೀಗೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬೇಡಿಕೆ ಹೆಚ್ಚಿಸುವಂತೆ ಮಾಡಿರುತ್ತೆ.

English summary
Is Karan Johar not launching Baahubali Prabhas in Bollywood because of his hefty fee?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada