»   » ಈ ನಟಿ ಕಂಡ್ರೆ 'ಬಾಹುಬಲಿ' ಪ್ರಭಾಸ್ ಗೆ ಸಖತ್ ಇಷ್ಟವಂತೆ.!

ಈ ನಟಿ ಕಂಡ್ರೆ 'ಬಾಹುಬಲಿ' ಪ್ರಭಾಸ್ ಗೆ ಸಖತ್ ಇಷ್ಟವಂತೆ.!

Posted By:
Subscribe to Filmibeat Kannada
ಬಾಹುಬಲಿ ಪ್ರಭಾಸ್ ಗೆ ಈ ಮುದ್ದು ನಟಿ ಮೇಲೆ ಕ್ರಶ್ ಆಗಿತ್ತಂತೆ | Filmibeat Kannada

'ಬಾಹುಬಲಿ' ಸಿನಿಮಾ ಸೂಪರ್ ಡ್ಯೂಪರ್ ಹಿಟ್ ಆದ ಬಳಿಕ ಇಡೀ ಭಾರತದಲ್ಲಿ ಪ್ರಭಾಸ್ ಸೆನ್ಸೇಷನಲ್ ಸ್ಟಾರ್ ಆಗ್ಬಿಟ್ಟಿದ್ದಾರೆ. ಪ್ರಭಾಸ್ ಕಂಡ್ರೆ ಪ್ರಾಣ ಬಿಡುವ ಹುಡುಗಿಯರಂತೂ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ.

ಹರೆಯದ ಹುಡುಗಿಯರ ಹೃದಯ ಕದ್ದಿರುವ ಪ್ರಭಾಸ್ ಹಾಗೂ ಬೆಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ ಕೂಡ ಆಗಾಗ ಕೇಳಿ ಬರುತ್ತಲೇ ಇದೆ.

ನಟಿ ಅನುಷ್ಕಾ ಶೆಟ್ಟಿ ಕಂಡ್ರೆ 'ಡಾರ್ಲಿಂಗ್' ಪ್ರಭಾಸ್ ಗೆ ಇಷ್ಟ ಇದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, 'ಈ' ನಟಿ ಅಂದ್ರೆ ಪ್ರಭಾಸ್ ಗೆ ಸಿಕ್ಕಾಪಟ್ಟೆ ಇಷ್ಟ. ಯಾರು ಆ ನಟಿ ಅಂದ್ರಾ.? ಈ ಸ್ಟೋರಿ ನೋಡಿ....

ಈಕೆಯೇ 'ಆ' ನಟಿ

ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಅಂದ್ರೆ ಪ್ರಭಾಸ್ ಗೆ ಅಚ್ಚುಮೆಚ್ಚು. ಪ್ರಭಾಸ್ ಪಾಲಿಗೆ ರವೀನಾ ಟಂಡನ್ ಫೇವರೆಟ್ ನಟಿ. ಅಷ್ಟೇ ಅಲ್ಲ, ರವೀನಾ ಟಂಡನ್ ಮೇಲೆ ಪ್ರಭಾಸ್ ಗೆ ಕ್ರಷ್ ಕೂಡ ಇತ್ತಂತೆ. ಹಾಗಂತ ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ಬಾಹುಬಲಿ' ಜೋಡಿಯ ರಿಯಲ್ ಪ್ರೇಮ್ ಕಹಾನಿಗೆ ಸಾಕ್ಷಿ ಸಿಕ್ಕಿದೆ.!

ದೊಡ್ಡ ಫ್ಯಾನ್

'ಅಂದಾಝ್ ಅಪ್ನಾ ಅಪ್ನಾ' ಸಿನಿಮಾ ನೋಡಿದ ಮೇಲೆ ರವೀನಾ ಟಂಡನ್ ರವರ ದೊಡ್ಡ ಫ್ಯಾನ್ ಆದರಂತೆ ನಟ ಪ್ರಭಾಸ್.

ಕೊನೆಗೂ ಮದುವೆ-ಅನುಷ್ಕಾ ಲವ್ ರೂಮರ್ಸ್ ಬಗ್ಗೆ ಬಾಯ್ಬಿಟ್ಟ ಪ್ರಭಾಸ್!

ರವೀನಾ ಟಂಡನ್ ಜೊತೆ ಸೆಲ್ಫಿ

ತಮ್ಮ ನೆಚ್ಚಿನ ನಟಿ ರವೀನಾ ಟಂಡನ್ ಜೊತೆ ಪ್ರಭಾಸ್ ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿ ಇದು.

ಪ್ರಭಾಸ್ ಮುಂದಿನ ಸಿನಿಮಾಗಳು

ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ರೆಡಿ ಆಗುತ್ತಿರುವ 'ಸಾಹೋ' ಚಿತ್ರದಲ್ಲಿ ಸದ್ಯ ಪ್ರಭಾಸ್ ಬಿಜಿಯಾಗಿದ್ದಾರೆ.

English summary
Tollywood Actor Prabhas has secret crush on Bollywood Actress Raveena Tandon.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada