ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್‌ಡೇಟ್
ನಟ ಪ್ರಭಾಸ್ ಮೇಲೆ ಈಗ ಇಡೀ ಭಾರತೀಯ ಚಿತ್ರರಂಗದ ಕಣ್ಣು ನೆಟ್ಟಿದೆ. ಬಾಹುಬಲಿ ಮೂಲಕ ಅಂತರರಾಷ್ಟ್ರೀಯ ಆಗಿಹೋಗಿರುವ ಪ್ರಬಾಸ್ ಮೇಲೆ ಭಾರತ ಸಿನಿಮಾರಂಗ ಕಣ್ಣಿದೆ. ಪ್ರಭಾಸ್ ನಟನೆಯ ಪ್ರತಿ ಸಿನಿಮಾಗಳೂ ಭಾರಿ ಸುದ್ದಿಯನ್ನೇ ಮಾಡುತ್ತಿವೆ.
ಭಾರತದ ಅತಿ ದೊಡ್ಡ ಬಜೆಟ್ ನ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಸಿನಿಮಾಕ್ಕೆ 'ಆದಿಪುರುಷ್' ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಘೋಷಣೆ ಆಗಿ ಹಲವು ತಿಂಗಳೇ ಆಗಿವೆ. ಆದರೆ ಸಿನಿಮಾದ ಬಗ್ಗೆ ಯಾವುದೇ ಹೊಸ ಮಾಹಿತಿ ಹೊರ ಬಿದ್ದಿರಲಿಲ್ಲ. ಆದರೆ ಈಗ ಸಿನಿಮಾದ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ.
ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಯಾವಾಗಿನಿಂದ ಪ್ರಾರಂಭವಾಗಲಿದೆ ಎಂದು ದಿನಾಂಕ ಘೋಷಿಸಿದೆ ಚಿತ್ರತಂಡ. ಫೆಬ್ರವರಿ 02 ನೇ ತಾರೀಖಿನಂದು ಆದಿಪುರುಷ್ ಸಿನಿಮಾದ ಮುಹೂರ್ತ ನಡೆಯಲಿದೆ.

ಮೋಷನ್ ಕ್ಯಾಪ್ಚರ್ ಈಗಾಗಲೇ ಆರಂಭವಾಗಿದೆ
ವಿಶೇಷವೆಂದರೆ ಸಿನಿಮಾದ ಪೋಷನ್ ಕ್ಯಾಪ್ಚರ್ ಇಂದಿನಿಂದಲೇ ಆರಂಭವಾಗಿದೆ. ಸಿನಿಮಾದಲ್ಲಿ ಭಾರಿ ಮಾದರಿಯಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನವಿದ್ದು, ಮೋಷನ್ ಕ್ಯಾಪ್ಚರ್, ಗ್ರೀನ್ ಮ್ಯಾಟ್, ಸಿಜಿಐ ಇನ್ನೂ ಹಲವು ಮಾದರಿಗಳಲ್ಲಿ ಚಿತ್ರೀಕರಣ ನಡೆಸಲಿದೆ ತಂಡ.

ಭಾರತದ ಅತಿ ಹೆಚ್ಚು ಬಜೆಟ್‌ನ ಸಿನಿಮಾ 'ಆದಿಪುರುಷ್'
ಸಿನಿಮಾವನ್ನು ಟಿ-ಸೀರೀಸ್ ನ ಭೂಷಣ್ ಕುಮಾರ್ ನಿರ್ಮಿಸಲಿದ್ದು, ಸಿನಿಮಾಕ್ಕೆ 500 ಕೋಟಿ ಖರ್ಚು ಮಾಡಲಿದ್ದಾರೆ. ಸಿನಿಮಾವನ್ನು ಓಮ್ ರಾವತ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾವು ರಾಮಾಯಣದ ಕತೆಯನ್ನು ಆಧರಿಸಿದ್ದಾಗಿದ್ದು, ರಾಮನಾಗಿ ಪ್ರಭಾಸ್, ರಾವಣನಾಗಿ ಸೈಫ್ ಅಲಿ ಖಾನ್ ನಟಿಸಲಿದ್ದಾರೆ.

ಫೆಬ್ರವರಿ 2 ರಂದು 'ಆದಿಪುರುಷ್' ಮುಹೂರ್ತ
ಫೆಬ್ರವರಿ 02 ರ ಮಂಗಳವಾರದಂದು ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು. ಮುಹೂರ್ತಕ್ಕೆ ಪ್ರಭಾಸ್, ಸೈಫ್ ಅಲಿ ಖಾನ್ ಸೇರಿದಂತೆ, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ತಾರೆಯರು ನೆರೆಯುವ ಸಂಭವ ಇದೆ. ಆದಿಪುರುಷ್ ಸಿನಿಮಾ ಒಟ್ಟಿಗೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
Recommended Video

ಸಲಾರ್ ಸಿನಿಮಾದ ಮುಹೂರ್ತ ಆಗಿದೆ
ಪ್ರಭಾಸ್ ನಟಿಸಲಿರುವ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದ ಮುಹೂರ್ತ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ಇದೇ ಮೊದಲ ಬಾರಿಗೆ ಪ್ರಭಾಸ್ ಎರಡು ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅದುವೇ ಸಲಾರ್ ಹಾಗೂ ಆದಿಪುರುಷ್. ಈ ಎರಡೂ ಸಿನಿಮಾಗಳ ನಂತರ ದೀಪಿಕಾ ಪಡುಕೋಣೆ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ.


Click it and Unblock the Notifications











