ಟೀಕೆ.. ಬೇಸರ.. ಟ್ರೋಲ್.. ಆಕ್ರೋಶ..ಬ್ಯಾನ್‌ಗೆ ಕರೆ: ಒಂದೇ ದಿನಕ್ಕೆ ಮುಗೀತಾ ರಾಘವನ ಆಟ? ಶನಿವಾರದ ಗಳಿಕೆ ಎಷ್ಟು?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಆರ್ಭಟ ಮುಂದುವರೆದಿದೆ. ಟೀಕೆ, ಟ್ರೋಲ್, ಬ್ಯಾನ್‌ಗೆ ಕರೆ ನಡುವೆಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಶ್ರೀರಾಮನಾಗಿ ಪ್ರಭಾಸ್ ಆರ್ಭಟಕ್ಕೆ ಹಳೇ ದಾಖಲೆಗಳು ಪುಡಿಪುಡಿ ಆಗ್ತಿದೆ. ಮೊದಲ ದಿನ ಸಿನಿಮಾ 140 ಕೋಟಿ ರೂ. ಗಳಿಸಿರುವುದಾಗಿ ಚಿತ್ರತಂಡವೇ ಘೋಷಿಸಿತು. ಇದೀಗ 2ನೇ ದಿನದ ಕಲೆಕ್ಷನ್ ಬಗ್ಗೆ ಚರ್ಚೆ ನಡೀತಿದೆ.
ಟೀ ಸೀರಿಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ 'ಆದಿಪುರುಷ್' ಚಿತ್ರವನ್ನು ನಿರ್ಮಾಣ ಮಾಡಿವೆ. ಬರೋಬ್ಬರಿ 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಸನ್ನಿಸಿಂಗ್, ಸೀತೆಯಾಗಿ ಕೃತಿ ಸನೂನ್, ಹನುಮಂತನಾಗಿ ದೇವದತ್ತ, ರಾವಣನಾಗಿ ಸೈಫ್ ಅಲಿಖಾನ್ ಬಣ್ಣ ಹಚ್ಚಿದ್ದಾರೆ. ಬಹುತೇಕ ಗ್ರೀನ್‌ಮ್ಯಾಟ್‌ನಲ್ಲೇ ಸಿನಿಮಾ ಚಿತ್ರೀಕರಣ ನಡೆದಿದ್ದು ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ದೃಶ್ಯವೈಭವ ತುಂಬಲಾಗಿದೆ.

ಟೀಸರ್ ರಿಲೀಸ್ ಆಗಿದ್ದಾಗಲೇ 'ಆದಿಪುರುಷ್' ಸಿನಿಮಾ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ರಾಮ, ರಾವಣ, ಹನುಮಂತನ ಲುಕ್, ಕಾಸ್ಟ್ಯೂಮ್ ಬಗ್ಗೆ ಚಕಾರ ಎತ್ತಿದ್ದರು. ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಸಿನಿಮಾ ನಿರ್ಮಿಸಿದ್ದಾರೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರತಂಡದ ವಿರುದ್ಧ ದೂರು ಸಹ ದಾಖಲಾಗಿತ್ತು. ನಂತರ 6 ತಿಂಗಳ ಕಾಲಾವಕಾಶ ಪಡೆದು ಚಿತ್ರವನ್ನು ತಿಡ್ಡಿ ತೀಡಿರುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಗ್ರಾಫಿಕ್ಸ್ ಬಿಟ್ಟರೆ ಬೇರೆನೂ ಬದಲಾವಣೆ ಆಗಿಲ್ಲ. ಇದೇ ಕಾರಣಕ್ಕೆ ಸಿನಿಮಾ ನೋಡಿದವರು ಬೇಸರಕೊಂಡಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.
2ನೇ ದಿನ 80 ಕೋಟಿ ಗಳಿಕೆ?
ಸದ್ಯ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರದ ಪ್ರಕಾರ 2ನೇ ದಿನ ಸಿನಿಮಾ ಅಂದಾಜು 80 ಕೋಟಿ ರೂ. ಗಳಿಕೆ ಕಂಡಿದೆ. ಆ ಮೂಲಕ ಅನಾಯಾಸವಾಗಿ 2 ದಿನಕ್ಕೆ 'ಆದಿಪುರುಷ್' 200 ಕೋಟಿ ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ. ಅಷ್ಟೆಲ್ಲಾ ಟೀಕೆ, ಟ್ರೋಲ್ ನಡುವೆಯೂ ಸಿನಿಮಾ 2ನೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿರೋದು ಸುಳ್ಳಲ್ಲ. 2ನೇ ದಿನ ಸಿನಿಮಾ ಕಲೆಕ್ಷನ್ ಕುಗ್ಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರಾಮಾಯಣ ಕಥೆ ಹಾಗೂ ಪ್ರಭಾಸ್ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.
ಒಟ್ಟು 220 ಕೋಟಿ. ರೂ ಗಳಿಕೆ
ಮೊದಲ ದಿನ 140 ಕೋಟಿ ರೂ. ಕಲೆಕ್ಷನ್ ಮಾಡಿರೋದಾಗಿ ಚಿತ್ರತಂಡ ಘೋಷಿಸಿತ್ತು. 'ಆದಿಪುರುಷ್' ಡಿವೈನ್ ಹಿಟ್ ಎಂದು ಹೇಳಿತ್ತು. ಇದೀಗ 2ನೇ ದಿನ 80 ಕೋಟಿ ಬಾಚಿ ಒಟ್ಟು 120 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಇಂದು ಭಾನುವಾರ ಆಗಿರುವುದರಿಂದ ಬುಕ್ಕಿಂಗ್ ಜೋರಾಗಿದೆ. 3ನೇ ದಿನವೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಇಷ್ಟೆಲ್ಲಾ ಟೀಕೆ, ಟ್ರೋಲ್ ನೋಡಿದ ಮೇಲೆ ಕೆಲವರು ಸಿನಿಮಾ ನೋಡದಿರಲು ನಿರ್ಧರಿಸಿದ್ದಾರೆ.

ರಾಮಾಯಣ ಅಲ್ಲ ಎಂದ ಸಂಭಾಷಣೆಕಾರ
ಸಿನಿಮಾ ನೋಡಿದವರೆಲ್ಲಾ ರಾಮಾಯಣವನ್ನು ಓಂ ರಾವುತ್ ತನಗೆ ಇಷ್ಟಬಂದಂತೆ ತೆರೆಗೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪಾತ್ರಗಳ ವೇಷಭೂಷಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಇದೆಲ್ಲದರ ನಡುವೆ ಚಿತ್ರದ ಹಿಂದಿ ಸಂಭಾಷಣೆಕಾರ ಮನೋಜ್ ಮುಂತಶೀರ್ ಶುಕ್ಲಾ ಉಲ್ಟಾ ಹೊಡೆದಿದ್ದಾರೆ. ನಾವು ರಾಮಾಯಣ ಸಿನಿಮಾ ಮಾಡಿಲ್ಲ, 'ಆದಿಪುರುಷ್' ಸಿನಿಮಾ ಮಾಡಿದ್ದೀವಿ. ಬರೀ ರಾಮಾಯಣದಿಂದ ಸ್ಪೂರ್ತಿ ಪಡೆದುಕೊಂಡಿದ್ದೇವೆ ಅಷ್ಟೇ ಎಂದಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋಮವಾರ ಅಸಲಿ ಆಟ
ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾ ಬಂದರೂ ಮೊದಲ 3 ದಿನ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಆ ಚಿತ್ರ ನಿಜವಾದ ತಾಕತ್ತು ಗೊತ್ತಾಗುವುದು ಫಸ್ಟ್ ವೀಕೆಂಡ್ ಬಿಟ್ಟು ಮೊದಲ ಸೋಮವಾರ ಶುರುವಾದಾಗ. ಮೊದಲ ಎರಡು ದಿನ 'ಆದಿಪುರುಷ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. 3ನೇ ದಿನವೂ ಗೆಲ್ಲಲಿದೆ. ಆದರೆ ನಾಳೆ ಚಿತ್ರದ ಭವಿಷ್ಯ ಏನಾಗುತ್ತದೆ ಎನ್ನುವುದರ ಸುಳಿವು ಸಿಗುತ್ತದೆ.


Click it and Unblock the Notifications











