ಯೂಟ್ಯೂಬ್‌ಗೆ ಮುಂಚೆಯೇ ಹಿಂದಿ ಸಿನಿಮಾ ಜೊತೆ ಬಿಡುಗಡೆ ಆಗಲಿದೆ ಪ್ರಭಾಸ್ ಸಿನಿಮಾ ಟೀಸರ್

ಪ್ರಭಾಸ್ ನಟನೆಯ ಈ ಹಿಂದಿನ ಎರಡು ಸಿನಿಮಾಗಳು ಪ್ರೇಕ್ಷಕರನ್ನು ತೃಪ್ತಿಪಡಿಸಲು ವಿಫಲವಾಗಿವೆ. ಹಾಗಾಗಿ ಪ್ರಭಾಸ್‌ರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ದುಪ್ಪಟ್ಟು ಕಾತರದಿಂದ ಎದುರು ನೋಡುತ್ತಿದ್ದಾರೆ.

ಪ್ರಭಾಸ್‌ ಸದ್ಯಕ್ಕೆ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ಓಂ ರಾವತ್ ನಿರ್ದೇಶನದ 'ಆದಿಪುರುಷ್', ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮೂವರಲ್ಲಿ 'ಆದಿಪುರುಷ್' ಸಿನಿಮಾ ಮೊದಲು ಬಿಡುಗಡೆ ಆಗಲಿದೆ.

'ಆದಿಪುರುಷ್' ಸಿನಿಮಾದ ಚಿತ್ರೀಕರಣ ಡಬ್ಬಿಂಗ್ ಎರಡೂ ಮುಗಿದಿದ್ದು, ಇತರೆ ಕೆಲವು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಸಿನಿಮಾದ ಪ್ರಚಾರವನ್ನು ಭರ್ಜರಿ ಟೀಸರ್ ಬಿಡುಗಡೆ ಮೂಲಕ ಆರಂಭಿಸಲು ಚಿತ್ರತಂಡ ಯೋಜಿಸಿದ್ದು, ಶೀಘ್ರದಲ್ಲಿಯೇ ಟೀಸರ್ ಬಿಡುಗಡೆ ಆಗಲಿದೆ. ಅದಕ್ಕೆ ದಿನಾಂಕವೂ ನಿಗದಿಯಾಗಿದೆ.

Prabhas Starrer Adipurush Movie Teaser Releasing With Vikram Vedha Movie

ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಹಿಂದಿ ಸಿನಿಮಾ 'ವಿಕ್ರಂ-ವೇದ' ಸಿನಿಮಾದ ಜೊತೆ 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದೆ. 'ವಿಕ್ರಂ ವೇದ' ಸಿನಿಮಾವು ಸೆಪ್ಟೆಂಬರ್ 03ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಇಂಟರ್ವಲ್ ವೇಳೆಯಲ್ಲಿ ಪ್ರಭಾಸ್ ನಟನೆ 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಪ್ರದರ್ಶನಗೊಳ್ಳಲಿದೆ.

ಹಿಂದಿಯ 'ವಿಕ್ರಂ-ವೇದಾ' ಸಿನಿಮಾಕ್ಕೆ ಭೂಷಣ್ ಕುಮಾರ್‌ರ ಟಿ-ಸೀರೀಸ್ ಬಂಡವಾಳ ಹೂಡಿದೆ. ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾಕ್ಕೂ ಟಿ-ಸೀರೀಸ್ ಸಹ ನಿರ್ಮಾಣ ಸಂಸ್ಥೆ ಹಾಗಾಗಿ 'ವಿಕ್ರಂ-ವೇದ' ಸಿನಿಮಾದ ನಡುವಲ್ಲಿ 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ. ಇದು ಎರಡೂ ಸಿನಿಮಾಕ್ಕೆ ಪರಸ್ಪರ ಪ್ರಚಾರ ನೀಡಿದಂತಾಗಿದೆ. ಪ್ರಭಾಸ್ ಅಭಿಮಾನಿಗಳು 'ಆದಿಪುರುಷ್' ಸಿನಿಮಾದ ಟೀಸರ್ ನೋಡಲಾದರೂ 'ವಿಕ್ರಂ-ವೇದ' ಸಿನಿಮಾಕ್ಕೆ ಬರುತ್ತಾರೆಂಬುದು ನಿರ್ಮಾಣ ಸಂಸ್ಥೆಯ ಯೋಜನೆ.

ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 30ರಂದೇ ಪ್ರದರ್ಶನಗೊಳ್ಳಲಿರುವ ಟೀಸರ್, ಯೂಟ್ಯೂಬ್‌ನಲ್ಲಿ ಮೂರು ದಿನಗಳ ಬಳಿಕ ಅಂದರೆ ಅಕ್ಟೋಬರ್ 03 ರಂದು ಬಿಡುಗಡೆ ಆಗಲಿದೆ.

'ಆದಿಪುರುಷ್' ಸಿನಿಮಾ ರಾಮಾಯಣದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವು ಭಾರತದ ಈವರೆಗೆ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿದೆ. ಸುಮಾರು 300 ರಿಂದ 500 ಕೋಟಿ ಬಜೆಟ್ ಈ ಸಿನಿಮಾಕ್ಕೆ ವಿನಿಯೋಗಿಸಲಾಗಿದೆ ಎನ್ನಲಾಗುತ್ತಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನೂ ಇನ್ನೂ ಘೋಷಿಸಲಾಗಿಲ್ಲ.

'ಆದಿಪುರುಷ್' ಸಿನಿಮಾದ ಬಳಿಕ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಸಿನಿಮಾದ ನಾಯಕಿಯ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ. ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ಇದ್ದಾರೆ. ಆ ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಹೆಸರಿಡದ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ಸಹ ಇದ್ದಾರೆ. ಆ ಸಿನಿಮಾದ ಬಳಿಕ 'ಅರ್ಜುನ್ ರೆಡ್ಡಿ' ಖ್ಯಾತಿಯ ನಿರ್ದೇಶನದ ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರಿಟ್' ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ.

More from Filmibeat

English summary
Prabhas starrer Adipurush movie teaser releasing with Vikram-Vedha movie. Hindi Vikram Vedha movie releasing in theater on September 30.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X