'ಆದಿಪುರುಷ್' ಭರ್ಜರಿ ಪ್ಯಾನ್ ಇಂಡಿಯಾ ಪ್ರಮೋಷನ್: ದೇಶದ ಮೂಲೆ ಮೂಲೆಯಲ್ಲಿ ಜೈ ಶ್ರೀರಾಮ್
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನು 25 ದಿನ ಬಾಕಿಯಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಸಾಂಗ್ಸ್ ಝಲಕ್ ರಿಲೀಸ್ ಆಗಿ ಸದ್ದು ಮಾಡ್ತಿದೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ರಾಮಾಯಣ ಕಾವ್ಯ ಆಧರಿಸಿ ತ್ರಿಡಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಜೂನ್ 16ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.
ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಬಣ್ಣ ಹಚ್ಚಿದ್ದಾರೆ. ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಹಾಗೂ ಹನುಮಂತನಾಗಿ ದೇವದತ್ತ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೀಸರ್ ಟೀಕೆಗೆ ಒಳಗಾಗಿದ್ದು ಗೊತ್ತೇಯಿದೆ. ಇತ್ತೀಚೆಗೆ ಬಂದ ಟ್ರೈಲರ್ ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ. ಟೀ ಸೀರಿಸ್ ಹಾಗೂ ರೆಟ್ರೊಪ್ಲಿಲ್ಸ್ ಸಂಸ್ಥೆ ಈ ಅದ್ಧೂರಿ ಸಿನಿಮಾ ನಿರ್ಮಾಣ ಮಾಡಿದೆ. ತ್ರಿಡಿಯಲ್ಲಿ ರಾಮಾಯಣ ಸಿನಿಮಾ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಟೀಕೆಗಳ ನಡುವೆಯೂ ಟೀಸರ್ ಹಾಗೂ ಸಾಂಗ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಯೋಧ್ಯಯಲ್ಲಿ ಬಿಡುಗಡೆಯಾಗಿದ್ದ ಟೀಸರ್ ಕೆಲವೇ ಗಂಟೆಗಳಲ್ಲಿ 100 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿತ್ತು. ಇತ್ತೀಚೆಗೆ ಬಂದ 'ಜೈ ಶ್ರೀರಾಮ್' ಸಾಂಗ್ ಕೂಡ ಎಲ್ಲಾ ಭಾಷೆ ಸೇರಿ 100 ಮಿಲಿಯನ್ ಗಡಿ ದಾಟಿದೆ. ಬಾಹುಬಲಿ ಪ್ರಭಾಸ್ ಕ್ರೇಜ್ ಏನು ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ.

ಜೂನ್ 6ಕ್ಕೆ ಪ್ರೀ ರಿಲೀಸ್ ಈವೆಂಟ್
ಹೇಳಿಕೇಳಿ 'ಆದಿಪುರುಷ್' ಬಹಳ ದೊಡ್ಡ ಸಿನಿಮಾ. 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಅಯೋಧ್ಯೆಯಲ್ಲಿ ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು. ಇದೀಗ ಜೂನ್ 6ಕ್ಕೆ ತಿರುಪತಿಯಲ್ಲಿ ಬಹಳ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡಲಾಗ್ತಿದೆ. ದೊಡ್ಡ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ಮೇ 29ಕ್ಕೆ ಸಾಂಗ್ ರಿಲೀಸ್
'ಆದಿಪುರುಷ್' ಬಿಜಿಎಂ, 'ಜೈ ಶ್ರೀರಾಮ್' ಸಾಂಗ್ ಕೇಳುತ್ತಿದ್ದರೆ ಇದೊಂದು ಮ್ಯೂಸಿಕಲ್ ಸಿನಿಮಾ ಆಗುವುದರಲ್ಲೂ ಅನುಮಾನ ಇಲ್ಲ. ಅಜಯ್ ಅತುಲ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಮೊದಲ ಹಾಡು ಸೂಪರ್ ಹಿಟ್ ಆಗಿತ್ತು. ಇದೀಗ 'ರಾಮ್ ಸಿಯಾ ರಾಮ್' ಹಾಡನ್ನು ರಿಲೀಸ್ ಮಾಡಲು ತಯಾರಿ ಶುರುವಾಗಿದೆ. ಮೇ 29ಕ್ಕೆ ಆ ಸಾಂಗ್ ಸದ್ದು ಮಾಡಲಿದೆ.
ವಿವಿಧ ನಗರಗಳಲ್ಲಿ ಪ್ರಚಾರ
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬಹಳ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಲಾಗುತ್ತದೆ. ಈ ಹಿಂದೆ ಬಾಹುಬಲಿ ಸೇರಿದಂತೆ ಇತ್ತೀಚಿನ ತಮ್ಮ ಸಿನಿಮಾಗಳನ್ನು ಪ್ರಭಾಸ್ ಇದೇ ರೀತಿ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಮುಂಬೈನಲ್ಲಿ ಇತ್ತೀಚೆಹೆ ಟ್ರೈಲರ್ ರಿಲೀಸ್ ಈವೆಂಟ್ ನಡೆದಿತ್ತು. ಇನ್ನು ಬೆಂಗಳೂರು, ಚೆನ್ನೈ, ತಿರುವಂತಪುರಂನಲ್ಲೂ ದೊಡ್ಡಮಟ್ಟದಲ್ಲಿ ಪ್ರಮೋಷನ್ ಪ್ಲ್ಯಾನ್ ನಡೀತಿದೆ.
ಜೂನ್ 16ಕ್ಕೆ ಸಿನಿಮಾ ರಿಲೀಸ್
4 ದಿನ ಮೊದಲೇ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅದಕ್ಕಾಗಿ ಟಿಕೆಟ್ ಕೂಡ ಸೋಲ್ಡೌಟ್ ಆಗಿತ್ತು. ಆದರೆ ದಿಢೀರನೆ ಚಿತ್ರತಂಡ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಜೂನ್ 16ಕ್ಕೆ ಏಕಕಾಲಕ್ಕೆ ವಿಶ್ವದಾದ್ಯಂತ 'ಆದಿಪುರುಷ್' ಆಗಮನ ಆಗಲಿದೆ.


Click it and Unblock the Notifications











