ಥಿಯೇಟರ್‌ಗಳಲ್ಲಿ 3D ಕನ್ನಡಕದಲ್ಲಿ 'ಆದಿಪುರುಷ್' ಟ್ರೈಲರ್ ನೋಡುವ ಛಾನ್ಸ್: ಯಾವಾಗ, ಎಲ್ಲಿ ಇಲ್ಲಿದೆ ಲಿಸ್ಟ್
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಟ್ರೈಲರ್ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ಈ ಸಿನಿಮಾ ಕಟ್ಟಿಕೊಟ್ಟಿದ್ದು ಶ್ರೀರಾಮನಾಗಿ ಪ್ರಭಾಸ್ ನಟಿಸಿರೋದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಟ್ರೈಲರ್‌ನ ಥಿಯೇಟರ್‌ಗಳಲ್ಲಿ ಪ್ರದರ್ಶಿಸುವ ಪ್ರಯತ್ನ ನಡೀತಿದೆ. ದೊಡ್ಡ ಪರದೆ ಮೇಲೆ ತ್ರೀಡಿಯಲ್ಲಿ ಸಣ್ಣ ಝಲಕ್ ನೋಡಿ ಥ್ರಿಲ್ ಆಗುವ ಅವಕಾಶ ಸಿಗುತ್ತಿದೆ.
ಆಧುನಿಕ ತಂತ್ರಜ್ಞಾನ ಬಳಸಿ ಬಹುಕೋಟಿ ವೆಚ್ಚದಲ್ಲಿ 'ಆದಿಪುರುಷ್' ಸಿನಿಮಾ ನಿರ್ಮಾಣ ಮಾಡಲಾಗಿದೆ. ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿಸಿಂಗ್, ರಾವಣನಾಗಿ ಸೈಫ್ ಅಲಿಖಾನ್ ನಟಿಸಿದ್ದು ಜೂನ್ 16ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ಇದು ತ್ರೀಡಿಗಾಗಿ ಮಾಡಿರುವ ಸಿನಿಮಾ. ಮೊಬೈಲ್, ಟಿವಿಯಲ್ಲಿ ನೋಡಿದರೆ ಮಜಾ ಇರಲ್ಲ. ಥಿಯೇಟರ್‌ನಲ್ಲಿ ತ್ರೀಡಿ ಕನ್ನಡದಲ್ಲೇ ನೋಡಬೇಕು ಎಂದು ಕೆಲವರು ಹೇಳಿದ್ದರು. ಇದೀಗ ಟ್ರೈಲರ್‌ನ ಅದೇ ರೀತಿ ಥಿಯೇಟರ್‌ಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ಮೇ 9ರಂದು ಸಂಜೆ 5.30ಕ್ಕೆ ಥಿಯೇಟರ್‌ಗಳಲ್ಲಿ 'ಆದಿಪುರುಷ್' ಟ್ರೈಲರ್ ಪ್ರದರ್ಶನ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆಂಧ್ರ, ತೆಲಂಗಾಣದಲ್ಲಿ ಎಲ್ಲೆಲ್ಲಿ ಟ್ರೈಲರ್ ಪ್ರದರ್ಶನ ಮಾಡುತ್ತಾರೆ ಎನ್ನುವ ಥಿಯೇಟರ್‌ಗಳ ಲಿಸ್ಟ್ ಕೂಡ ಸಿಕ್ಕಿದೆ. ಪ್ರಭಾಸ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಟೀ- ಸೀರಿಸ್ ಹಾಗೂ ರೆಟ್ರೋಪ್ಲಿಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿರುವುದಾಗಿ ಹೇಳಲಾಗುತ್ತಿದೆ.

ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದ 'ಆದಿಪುರುಷ್' ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ಚಿತ್ರದಲ್ಲಿ ರಾಮಾಯಣದ ಪಾತ್ರಗಳನ್ನು ತಪ್ಪಾಗಿ ತೋರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಸಂಬಂಧ ಕೆಲವರು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಸಿನಿಮಾ ಬಿಡುಗಡೆಗೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಚಿತ್ರದ ಪೋಸ್ಟರ್‌ಗಳು ಕೂಡ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಆದರೆ ಇತ್ತೀಚೆಗೆ ಬಂದ ಪೋಸ್ಟರ್‌ಗಳು ಗಮನ ಸೆಳೆದಿದೆ. ಚಿತ್ರದ ಮ್ಯೂಸಿಕ್ ಬಗ್ಗೆ ಕೂಡ ಕುತೂಹಲ ಇದೆ.

ಬರೀ ಆಂಧ್ರ, ತೆಲಂಗಾಣ ಮಾತ್ರವಲ್ಲ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 'ಆದಿಪುರುಷ್' ಟ್ರೈಲರ್ ಪ್ರದರ್ಶನವಾಗಲಿದೆ. ಬೆಂಗಳೂರಿನಲ್ಲಿ ಓರಾಯನ್ ಮಾಲ್, ಊವರ್ಶಿ ಥಿಯೇಟರ್ ಸೇರಿದಂತೆ ಹಲವು ಥಿಯೇಟರ್‌ಗಳಲ್ಲಿ ಟ್ರೈಲರ್ ಪ್ರದರ್ಶನಕ್ಕೆ ಸಿದ್ಧತೆ ನಡೀತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಟ್ರೈಲರ್ ನೋಡಿದವರು ಮೆಚ್ಚಿಕೊಂಡಾಡುತ್ತಿದ್ದಾರೆ. 3 ನಿಮಿಷಗಳ ಸಣ್ಣ ಝಲಕ್‌ನ ಚಿತ್ರತಂಡ ಕಟ್ ಮಾಡಿದೆ. ತ್ರಿಡಿಯಲ್ಲಿ ಇದು ಸಖತ್ ಕಿಕ್ ಕೊಡುತ್ತದೆ ಎನ್ನುವ ನಿರೀಕ್ಷೆಯಿದೆ.
ಜೂನ್ 16ಕ್ಕೆ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಈಗಾಗಲೇ ಆ ಶೋಗಳ ಟಿಕೆಟ್ಸ್ ಸೋಲ್ಡ್‌ಔಟ್ ಆಗೋಗಿದೆ. ಪ್ರಭಾಸ್ ಹೀರೊ ಆಗಿ ನಟಿಸಿರುವುದರಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಟ್ರೈಲರ್ ರಿಲೀಸ್ ಮಾಡಿ ಪ್ರಚಾರಕ್ಕೆ ತಂಡ ಚಾಲನೆ ಕೊಡಲಿದೆ. ತಿರುಪತಿಯಲ್ಲಿ ಜೂನ್ ಮೊದಲ ವಾರ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ದೇಶದ ವಿವಿಧ ನಗರಗಳಿಗೆ ಹೋಗಿ ಚಿತ್ರತಂಡ ಪ್ರಚಾರ ನಡೆಸಲಿದೆ. ಇನ್ನು ಸಿನಿಮಾ ಕಾಲಾವಧಿ 2 ಗಂಟೆ 54 ನಿಮಿಷ ಎನ್ನುವುದು ಗೊತ್ತಾಗಿದೆ.


Click it and Unblock the Notifications











