Adipurush Trailer: "ಜಾನಕಿಯೇ ನನ್ನ ಪ್ರಾಣ.. ಘನತೆ ನನ್ನ ಪ್ರಾಣಕ್ಕಿಂತ ದೊಡ್ಡದು": ಟೀಸರ್‌ಗಿಂತ ಓಕೆ, ಆದ್ರೆ..
ರಾಮಾಯಣ ಕಾವ್ಯ ಆಧರಿಸಿದ ಪೌರಾಣಿಕ ಸಿನಿಮಾ 'ಆದಿಪುರುಷ್' ಟ್ರೈಲರ್ ರಿಲೀಸ್ ಆಗಿದೆ. ಓಂ ರಾವುತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಅಂದಾಜು 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ನಿರಾಸೆ ಮೂಡಿಸಿತ್ತು. ಭಾರೀ ಟೀಕೆಗೂ ಗುರಿಯಾಗಿತ್ತು. ಇದೀಗ ಟ್ರೈಲರ್ ಸದ್ದು ಮಾಡ್ತಿದೆ.
ಮೂರು ನಿಮಿಷಗಳ ಟ್ರೈಲರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದರಲ್ಲಿ ಸೀತೆಯನ್ನು ರಾವಣಾಸುರ ಅಪಹರಿಸಲು ಕಾರಣ, ಮುಂದೆ ಸೀತೆಗಾಗಿ ರಾಮನ ಹೋರಾಡಿದ ದೃಶ್ಯಗಳನ್ನು ತೋರಿಸಲಾಗಿದೆ. ಟೀಸರ್‌ಗೆ ಹೋಲಿಸಿದರೆ ಟ್ರೈಲರ್ ಪರವಾಗಿಲ್ಲ ಎಂದು ಹೇಳಬಹುದು. ಇನ್ನು ಸೀತೆಗಾಗಿ ರಾಮನ ಸಂಘರ್ಷವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ರಾಮನಾಗಿ ಪ್ರಭಾಸ್ ಡೈಲಾಗ್ಸ್ ಕೊಂಚ ನಿರಾಸೆ ಮೂಡಿಸುತ್ತದೆ. ವಾಯ್ಸ್ ಕೂಡ ಅಷ್ಟಾಗಿ ಸೆಟ್ ಆಗಿಲ್ಲ.

"ಇದು ನನ್ನ ಪ್ರಭು ರಾಮನ ಕಥೆ. ಮನುಷ್ಯನಾಗಿ ಹುಟ್ಟಿದವ ದೇವರಾದ ಚರಿತ್ರೆ. ಅವನ ಬದುಕೇ ಘನತೆಯ ಉತ್ಸವ. ಅದಕ್ಕೆ ಅವನ ಹೆಸರು ರಾಘವ. ಅವನ ಧರ್ಮ ಅಧರ್ಮದ ಅಹಂಕಾರವನ್ನೇ ಛಿದ್ರಗೊಳಿಸಿತು. ರಘುನಂದನನ ಈ ಚರಿತೆ ಯುಗಯುಗಗಳ ಆಚೆಗೂ ಜನಮಾನಸದಲ್ಲಿ ಜೀವಂತವಾಗಿರುವ ರಾಮಾಯಣದ ಕಥೆ" ಎನ್ನುವ ಹನುಮನ ಹಿನ್ನೆಲೆ ಧ್ವನಿಯೊಂದಿಗೆ ಟ್ರೈಲರ್ ಶುರುವಾಗುತ್ತದೆ. ಲಕ್ಷ್ಮಣ ರೇಖೆ ದಾಟಿ ಸೀತೆ ಬರುವುದು ರಾವಣ ಸೀತೆಯನ್ನು ಅಪಹರಿಸುವುದು, ಅಲ್ಲಿಂದ ಮುಂದೆ ಶ್ರೀರಾಮ ವಾನರ ಸೈನ್ಯದೊಂದಿಗೆ ಲಂಕೆಗೆ ಪಯಣ ಬೆಳಸಿ ರಾವಣವನ್ನು ಸಂಹಾರ ಮಾಡುವ ರೀತಿಯಲ್ಲಿ ಟ್ರೈಲರ್ ಸಾಗುತ್ತದೆ.

ರಾಮಾಯಣ ಕಾವ್ಯ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಅದನ್ನು ಯಾವ ರೀತಿ ಹೇಳಿದ್ದಾರೆ ಎನ್ನುವುದನ್ನು ನೋಡುವುದಕ್ಕೆ ಸಿನಿರಸಿಕರು ಕಾಯುತ್ತಿದ್ದಾರೆಜಾನಕಿಯನ್ನು ರಾವಣ ಅಪಹರಿಸುವುದು, ಶ್ರೀರಾಮ ಶಬರಿಯ ಎಂಜಲು ತಿನ್ನುವುದು, ಹನುಂತ ಸಂಜೀವಿನಿ ಪರ್ವತ ಹೊತ್ತು ತರುವುದು, ಲಂಕೆಯನ್ನು ತನ್ನ ಬಾಲದಿಂದ ಸುಡುವುದು, ಸಮುದ್ರದಲ್ಲಿ ಕಲ್ಲುಗಳನ್ನು ಹಾಕಿ ಲಂಕೆಗೆ ಸೇತುವೆ ಕಟ್ಟವಂತಹ ರಾಮಾಯಣದ ಪ್ರಮುಖ ಸನ್ನಿವೇಶಗಳ ಝಲಕ್ ಅನ್ನು 'ಆದಿಪುರುಷ್' ಟ್ರೈಲರ್‌ನಲ್ಲಿ ನೋಡಬಹುದು.
ಟ್ರೈಲರ್‌ನ ನೋಡ್ತಿದ್ರೆ ರಾಯಾಯಣಂ ಪ್ರಮುಖ ಘಟ್ಟವಾದ ಸೀತಾಪರಣದ ನಂತರದ ಕಥೆಯನ್ನು ಹೇಳುತ್ತಿರುವಂತೆ ಕಾಣುತ್ತಿದೆ. ಸಂಪೂರ್ಣ ರಾಮಾಯಣ ಕಥೆಯನ್ನು ಎರಡೂವರೆ ಗಂಟೆ ಸಿನಿಮಾದಲ್ಲಿ ತೋರಿಸುವುದು ಕಷ್ಟ. ಹಾಗಾಗಿ ಸೀತೆಯ ಅಪಹರಣ, ರಾಮ ಲಂಕೆಗೆ ಹೋಗಿ ರಾವಣ ಸಂಹಾರ ಮಾಡಿ ಸೀತೆಯನ್ನು ವಾಪಸ್ ಕಡೆದುಕೊಂಡು ಬರುವ ಅಂಶವನ್ನು ಕೇಂದ್ರವಾಗಿಟ್ಟುಕೊಂಡು 'ಆದಿಪುರುಷ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಇನ್ನು ಚಿತ್ರತಂಡವೇ ಹೇಳುವಂತೆ ಇದು ತ್ರೀಡಿಗಾಗಿ ಮಾಡಿರುವ ಸಿನಿಮಾ. ದೊಡ್ಡ ಪರದೆಯಲ್ಲಿ ತ್ರೀಡಿ ಕನ್ನಡಕದಲ್ಲಿ ನೋಡಿದರೆ ಚೆನ್ನಾಗಿರುತ್ತದೆ. ಯೂಟ್ಯೂಬ್‌ನಲ್ಲಿ ಅಷ್ಟಾಗಿ ಮಜಾ ಕೊಡುವುದಿಲ್ಲ.
ಆಧುನಿಕ ತಂತ್ರಜ್ಞಾನ ಬಳಸಿ ಬಹಳ ರೋಷಕವಾಗಿ 'ಆದಿಪುರುಷ್' ಸಿನಿಮಾ ಕಟ್ಟುಕೊಡುವ ಪ್ರಯತ್ನ ನಡೆದಿದೆ. ಈ ಹಿಂದೆ 'ತಾನಾಜಿ' ಸಿನಿಮಾ ಮಾಡಿ ಗೆದ್ದಿದ್ದ ಓಂ ರಾವುತ್ ಮೇಲೆ ಭಾರೀ ನಿರೀಕ್ಷೆಯಿದೆ. ಟೀಸರ್‌ಗಿಂತ ಟ್ರೈಲರ್ ಚೆನ್ನಾಗಿದೆ ಎನ್ನುವ ಅಭಿಪ್ರಾಯ ಸಿನಿರಸಿಕರಿಂದ ವ್ಯಕ್ತವಾಗುತ್ತಿದೆ. ವಿಷ್ಯುವಲಿ ಅದ್ಭುತ ಎನ್ನುವಂತಿದೆ. ಆದರೆ ಗ್ರಾಫಿಕ್ಸ್ ಗುಣಮಟ್ಟ ಅಷ್ಟಾಗಿ ಚೆನ್ನಾಗಿಲ್ಲ. ಇನ್ನು ಜಾನಕಿಯಾಗಿ ಕೃತಿ ಸನೂನ್, ಲಕ್ಮಣನಾಗಿ ಸನ್ನಿಸಿಂಗ್, ಹನುಮಂತನಾಗಿ ದೇವದತ್ತ ಹಾಗೂ ರಾವಣನಾಗಿ ಸೈಫ್ ಅಲಿಖಾನ್ ಆಯಾ ಪಾತ್ರಗಳಿಗೆ ಸೂಟ್ ಆಗಿದ್ದಾರೆ.
ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನವಾಗಲಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಪ್ರಭಾಸ್ ಅಭಿಮಾನಿಗಳಂತೂ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











