For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರಿಮೇಕ್ ಆಗುತ್ತಿದೆ 'ಛತ್ರಪತಿ' ಸಿನಿಮಾ; ಪ್ರಭಾಸ್ ಪಾತ್ರದಲ್ಲಿ ಖ್ಯಾತ ನಟ

  |

  ತೆಲುಗು ಸಿನಿಮಾರಂಗದ ಖ್ಯಾತ ನಟ ಪ್ರಭಾಸ್ ಇದೀಗ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಸೂಪರ್ ಹಿಟ್ ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಪ್ರಭಾಸ್ ಅಭಿನಯದ ಸಿನಿಮಾಗಳಿಗೂ ಈಗ ಬೇಡಿಕೆ ಹೆಚ್ಚಾಗಿದೆ.

  ಬಾಹುಬಲಿ ನಟ ಅಭಿನಯದ ಸೂಪರ್ ಹಿಟ್ ಛತ್ರಪತಿ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ಪ್ರಭಾಸ್ ಸಾರಥ್ಯದಲ್ಲಿ ಬಂದಿರುವ ಛತ್ರಪತಿ ಸಿನಿಮಾ ರಿಲೀಸ್ ಆಗಿ 15 ವರ್ಷಗಳಾಗಿದೆ. ಈಗ ಈ ಸಿನಿಮಾ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

  ಪ್ರಭಾಸ್ ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ!

  ಛತ್ರಪತಿ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುವ ಮೂಲಕ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮತ್ತು ನಿರ್ದೇಶಕ ವಿವಿ ವಿನಾಯಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕರು, 'ಛತ್ರಪತಿ ಒಂದು ಉತ್ತಮವಾದ ಕಥೆ. ಈ ಸಿನಿಮಾವನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡಲು ದಕ್ಷಿಣ ಭಾರತದ ನಟನೇ ಬೇಕು ಎಂದು ಬೆಲ್ಲಂಕೊಂಡ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದ್ದೇವೆ. ಈ ಪಾತ್ರಕ್ಕೆ ಫಿಟ್ ಆಗಿದ್ದಾರೆ. ಈ ಸಿನಿಮಾ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ಬಾಲಿವುಡ್ ಗೆ ಸರಿಹೊಂದುವ ರೀತಿಯಲ್ಲಿ ಕಥೆಯನ್ನು ನವೀಕರಿಸಿದ್ದೇವೆ' ಎಂದು ಹೇಳಿದ್ದಾರೆ.

  ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್ ಶಿವಾಜಿ ಎನ್ನುವ ಪಾತ್ರವನ್ನು ನಿರ್ವಹಿಸಿದ್ದರು. ಶಿವಾಜಿ ಚಿಕ್ಕ ವಯಸ್ಸಿನಲ್ಲೇ ತಾಯಿ ಮತ್ತು ಸಹೋದರನಿಂದ ಬೇರೆಯಾಗಿ ಕುಗ್ರಾಮಕ್ಕೆ ಬಂದು ಜನರ ಮಧ್ಯೆ ಬೆಳೆಯುತ್ತಾನೆ. ತಾಯಿಯನ್ನು ಹುಡುವುದು, ಆಕ್ಷನ್ ಸೇರಿದಂತೆ ಸಿನಿಮಾ ಅನೇಕ ತಿರುವುಗಳಿಂದ ಕುತೂಹಲ ಮೂಡಿಸಿತ್ತು.

  ನನ್ನ ಟೀಮ್ ಮೇಲೆ ನನಗೆ ಭರವಸೆ ಜಾಸ್ತಿ. | Filmibeat Kannada

  ಛತ್ರಪತಿ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದರು. ಇದೀಗ 15 ವರ್ಷಗಳ ಬಳಿಕ ಹಿಂದಿಯಲ್ಲಿ ರಿಮೇಕ್ ಆಗುತ್ತಿರುವ ಈ ಸಿನಿಮಾವನ್ನು ಬಾಲಿವುಡ್ ಮಂದಿ ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕು.

  English summary
  Prabhas starrer chatrapathi movie to be remade in hindi. Sai Shreenivas to star in Hindi remake of chatrapathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X