ಹಾಲಿವುಡ್ ರೇಂಜ್ ನಲ್ಲಿದೆ 'ಸಾಹೋ' ಚಿತ್ರದ ಟೀಸರ್

ಭಾರತದ ಬಹುನಿರೀಕ್ಷಿತ ಸಿನಿಮಾ 'ಸಾಹೋ' ಟೀಸರ್ ಇಂದು ಬಿಡುಗಡೆಯಾಗಿದೆ. 11 ಗಂಟೆ 23 ನಿಮಿಷಕ್ಕೆ ಟೀಸರ್ ರಿಲೀಸ್ ಆಗಿದ್ದು, ಯೂ ಟ್ಯೂಬ್ ನಲ್ಲಿ ಸಂಚಲನ ಶುರು ಮಾಡಿದೆ.

ಹಿಂದಿ, ತೆಲುಗು, ಮಲೆಯಾಳಂ, ತಮಿಳು ಭಾಷೆಗಳಲ್ಲಿ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. 'ಬಾಹುಬಲಿ' ಬಳಿಕ ಪ್ರಭಾಸ್ ಸ್ಥಾನ ಯಾವ ಮಟ್ಟಿಗೆ ಇದೆ ಎನ್ನುವುದನ್ನು ಈ ಸಿನಿಮಾ ಹೇಳಲು ಬರುತ್ತದೆ. ಟೀಸರ್ ಯಾವ ಹಾಲಿವುಡ್ ಸಿನಿಮಾಗೆ ಕಡಿಮೆ ಇಲ್ಲದೆ ಇರುವ ರೀತಿ ಇದೆ.

ಟೀಸರ್ ನಲ್ಲಿ ಹೇಳಿರುವ ಹಾಗೆ ಇದು ಭಾರತದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದ ಕ್ವಾಲಿಟಿ, ಆಕ್ಷನ್, ಮೇಕಿಂಗ್ ಸ್ಟೈಲ್, ಲೊಕೇಶನ್, ಹಿನ್ನಲೆ ಸಂಗೀತ, ಅದ್ದೂರಿ ತನ ಎಲ್ಲವನ್ನು ನೋಡುತ್ತಿದ್ದರೆ ಹಾಲಿವುಡ್ ಚಿತ್ರವನ್ನು ವೀಕ್ಷಿಸುತ್ತಿರುವ ಹಾಗೆ ಆಗುತ್ತದೆ.

prabhas starrer Saaho movie teaser released

ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಇರಲಿದ್ದಾರೆ. ಪ್ರಭಾಸ್ ಸ್ಟಾರ್ ಪಟ್ಟವನ್ನು ಈ ಸಿನಿಮಾ ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸೂಚನೆ ನೀಡಿದೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾವಾಗಿದೆ.

ಸುಜಿತ್ ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವಂಶಿ ಮತ್ತು ಪ್ರಮೋದ್ ಚಿತ್ರದ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, 'ಸಾಹೋ' ಆಗಸ್ಟ್ 15 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಸಾಯೋ ಚಿತ್ರದ ಟೀಸರ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ

More from Filmibeat

English summary
Actor Prabhas and Shraddha Kapoor staring 'Saaho' movie teaser released. The movie is producing in hindi telugu tamil. 'Saaho' movie will be will be releasing on august 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X