»   » ಭಟ್ಟರ ಜತೆ ಪ್ರಕಾಶ್ -ಸುರೇಶ್ ಹಿಂದಿ ಚಿತ್ರ

ಭಟ್ಟರ ಜತೆ ಪ್ರಕಾಶ್ -ಸುರೇಶ್ ಹಿಂದಿ ಚಿತ್ರ

By: ಮಲೆನಾಡಿಗ
Subscribe to Filmibeat Kannada

ಕನ್ನಡದಲ್ಲಿ 'ಒಗ್ಗರಣೆ' ಹಾಕಲು ಶುರು ಮಾಡಿದ ನಮ್ಮ ನೆಲದ ಅಪ್ಪಟ ಪ್ರತಿಭೆ ಪ್ರಕಾಶ್ ರೈ ಅವರು ಹಾಲಿವುಡ್ ನ ಖ್ಯಾತ ನಿರ್ದೇಶಕ ಸ್ಟೀವಲ್ ಸ್ಪೀಲ್ ಬರ್ಗ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸಂತೋಷದ ಬೆನ್ನಲ್ಲೇ ಇನ್ನೊಂದು ಸುದ್ದಿ ಹೊರಬಿದ್ದಿದೆ.

ಮುಂಗಾರುಮಳೆ ಖ್ಯಾತಿ ಯೋಗರಾಜ ಭಟ್ಟರ ಜತೆ ಪ್ರಕಾಶ್ ರೈ ಕೈ ಜೋಡಿಸಿದ್ದಾರಂತೆ. ಇಬ್ಬರು ಹಿಂದಿ ಚಿತ್ರವೊಂದಕ್ಕೆ ದುಡಿಯಲಿದ್ದಾರೆ ಎಂಬ ಸುದ್ದಿ ಇದೆ. ಭಟ್ಟರು ಈಗಾಗಲೇ ಸಾಮಾನು ಸರಂಜಾಮುಗಳನ್ನು ಮುಂಬೈಗೆ ಶಿಫ್ಟ್ ಮಾಡಿಕೊಂಡು ಬ್ಯುಸಿಯಾಗಿದ್ದಾರೆ. ಈ ನಡುವೆ ಪ್ರಕಾಶ್ ರೈ ಅವರನ್ನು ಯಾವಾಗ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಯೂ ಇದೆ.

ಪ್ರಕಾಶ್ ಹಾಗೂ ಭಟ್ಟರ ಹಳೆ ಗೆಳೆತನ ಈಗ ಸಿನಿಮಾ ಮಟ್ಟದಲಿ ಮತ್ತೆ ಒಂದಾಗಲು ಕಾಮನ್ ಫ್ರೆಂಡ್ ಬಿ ಸುರೇಶ ಅವರೆ ಕಾರಣ ಎಂಬುದನ್ನು ನೀವು ಊಹಿಸಿರಬಹುದು.

ಮೊದಲ ಹಂತದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಸಲು ಯೋಜಿಸಲಾಗಿದೆ ನಂತರ ಪಂಜಾಬ್ ಗೆ ತೆರಳುತ್ತೇವೆ ಆನಂತರ ಒಂದು ಗಿರಿಧಾಮದಲ್ಲಿ ಕೊನೆ ಹಂತರ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿದ್ದೇವೆ ಎಂದು ನಿರ್ಮಾಪಕ ಬಿ ಸುರೇಶ ಹೇಳಿದ್ದಾರೆ.

Post by Beesu Suresha.

ಭಟ್ಟರ ನಿರ್ದೇಶನದ ಈ ಚಿತ್ರಕ್ಕೆ ಬಾಲಿವುಡ್ ನ ಹೆಸರಾಂತ ನಟರನ್ನು ಹಾಕಿಕೊಳ್ಳುವುದಾಗಿ ಮೊದಲು ಯೋಚಿಸಲಾಗಿತ್ತು ಆದರೆ, ಇನ್ನೂ ತಾರಾಗಣದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಪ್ರಕಾಶ್ ರೈ ಅವರಿಗಂತೂ ಒಂದು ಪ್ರಮುಖ ಪಾತ್ರ ಖಾಯಂ ಎಂಬ ಸುಳಿವನ್ನು ಸುರೇಶ್ ಅವರು ಬಿಟ್ಟು ಕೊಟ್ಟರು.

ಈ ನಡುವೆ ಪ್ರಕಾಶ್ ರೈ ಅವರ ಜತೆ ನಿಮ್ಮ ಗೆಳೆತನ ಯಾವ ಲೆವೆಲ್ ನಲ್ಲಿದೆ ಎಂಬುದಕ್ಕೆ ಫೇಸ್ ಬುಕ್ ಪುಟದಲ್ಲಿ ಹೀಗೆ ಉತ್ತರಿಸಿದ್ದಾರೆ ಚಿತ್ರಕರ್ಮಿ ಸುರೇಶ.. ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಮುಂದೆ ಓದಿ...

ಚಿತ್ರ, ಚಿತ್ರ ತಂಡದ ಬಗ್ಗೆ ಸುರೇಶ್

'ಯೋಗರಾಜ ನಮ್ಮ ಕಂಪೆನಿಗೆ ಸಿನಿಮಾ ನಿರ್ದೇಶಿಸುತ್ತಾ ಇದ್ದಾರೆ. ಅದು ಹಿಂದಿ ಭಾಷೆಯಲ್ಲಿ ಮಾತ್ರ ತಯಾರಾಗುತ್ತದೆ. ಪ್ರಖ್ಯಾತ ನಾಟಕಕಾರ ಶಫಾತ್ ಖಾನ್ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಾ ಇದ್ದಾರೆ. ಹರಿಕೃಷ್ಣ ಸೇರಿದಂತೆ ನಾಲ್ವರು ಸಂಗೀತ ನಿರ್ದೇಶಕರು. ಮೈಕೆಲ್ ಮುಷಾಂಪ್ ಎಂಬ ಮಲೇಶಿಯಾದ ಛಾಯಾಗ್ರಾಹಕರು.

ಚಿತ್ರೀಕರಣ ಯಾವಾಗ?

ನವೆಂಬರ್ ಅಂತ್ಯದಿಂದ ಚಿತ್ರೀಕರಣ ಎಂದು ನಿಗದಿ ಮಾಡಲಾಗಿದೆ. ಇನ್ನೂ ಎಲ್ಲಾ ಕಲಾವಿದರ ದಿನಾಂಕಗಳ ಹೊಂದಾಣಿಕೆ ಆಗಿಲ್ಲ. ಅದು ಅಕ್ಟೋಬರ್ ಅಂತ್ಯದ ಒಳಗೆ ಆಗುತ್ತದೆ. ಅದಕ್ಕಾಗಿ ತಂಡ ಕೆಲಸ ಮಾಡುತ್ತಾ ಇದೆ. ಇದು ನಮ್ಮ ಸಂಸ್ಥೆಯ ಮೊದಲ ಹಿಂದಿ ಸಿನಿಮಾ ಎಂದು ನಿರ್ಮಾಪಕ ಬಿ.ಸುರೇಶ ಅವರು ಒನ್ ಒಂಡಿಯಾಗೆ ತಿಳಿಸಿದರು.

ಮೊದಲ ಹಂತದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಸಲು ಯೋಜಿಸಲಾಗಿದೆ ನಂತರ ಪಂಜಾಬ್ ಗೆ ತೆರಳುತ್ತೇವೆ ಆನಂತರ ಒಂದು ಗಿರಿಧಾಮದಲ್ಲಿ ಕೊನೆ ಹಂತರ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿದ್ದೇವೆ ಎಂದು ನಿರ್ಮಾಪಕ ಬಿ ಸುರೇಶ ಹೇಳಿದ್ದಾರೆ.

ಚಿತ್ರಕ್ಕೆ ಏನು ಹೆಸರು?

ಬಾಡಾ ದೇ, ಜಿಂದಗಿ ಟೆಟೆಟೆ ಬೆಬ್ಬೆ ಅಥವಾ ಹೆಲ್ಮೆಟ್ ಎಂಬ ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಮೂರು ಕೂಡಾ ಈಗ ಚಿತ್ರದ ಕಥೆಗೆ ಹೊಂದಾಣಿಕೆಯಾಗುವಂತೆ ತೋರುತ್ತಿಲ್ಲ. ಹೊಸ ಹೆಸರಿನಲ್ಲಿ ಚಿತ್ರ ಸೆಟ್ಟೇರುವ ನಿರೀಕ್ಷೆಯಿದೆ

ಭಟ್ ಜತೆ ಪ್ರಕಾಶ್- ಸುರೇಶ್

ಕಾಲ ಮುಂದೆ ನಾವು ಹಿಂದೆ ಜೂಟಾಟ ಜೂಟಾಟ ಎಂಬ ಹಂಸಲೇಖರ ಹಾಡು ಇದ್ದ ಅದ್ಭುತ ಧಾರಾವಾಹಿ 'ಸಾಧನೆ' ಯಲ್ಲಿ ಬಿ.ಸುರೇಶ, ಯೋಗರಾಜ್ ಭಟ್ ಒಟ್ಟಿಗೆ ದುಡಿದಿದ್ದರು. ಈಗ ಮತ್ತೊಮ್ಮೆ ಗೆಳೆಯ ಪ್ರಕಾಶ್ ಜತೆ ಸೇರಿ ಭಟ್ ನಿರ್ದೇಶನದಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಚಿತ್ರ ನಿರ್ಮಿಸುವ ಸಾಹಸಕ್ಕೆ ಚಿತ್ರಕರ್ಮಿ ಸುರೇಶ್ ಕೈ ಹಾಕಿದ್ದಾರೆ.

ಕನ್ನಡದತ್ತ ಪ್ರಕಾಶ್

2010ರಲ್ಲಿ ಬಿಡುಗಡೆಯಾದ ನಾನು ನನ್ನ ಕನಸು ಚಿತ್ರದಲ್ಲಿ ಪ್ರಕಾಶ್ ರೈ, ಅಮೂಲ್ಯ, ಸಿತಾರ ಪ್ರಮುಖ ಭೂಮಿಕೆಯಲ್ಲಿದ್ದರು. ತಮಿಳಿನ ರಿಮೇಕ್ ಚಿತ್ರವಾದರೂ ಕನ್ನಡದ ನೆಟಿವಿಟಿಗೆ ತಕ್ಕಂತೆ ಚಿತ್ರವನ್ನು ಪ್ರಕಾಶ್ ರೈ ನಿರ್ದೇಶಿಸಿದ್ದರು. ಸುರೇಶ್ ನಿರ್ಮಿಸಿದ್ದರು.

2011ರಲ್ಲಿ ಬಿಡುಗಡೆಯಾದ ಬಿ ಸುರೇಶ್ ನಿರ್ದೇಶನದ ಚಿತ್ರ ಪುಟ್ಟಕ್ಕನ ಹೈವೇಯಲ್ಲಿ ಶೃತಿ, ಪ್ರಕಾಶ್ ರೈ ಪ್ರಮುಖ ಭೂಮಿಕೆಯಲ್ಲಿದ್ದರು. ಈ ಚಿತ್ರದ ನಿರ್ಮಾಪಕರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರಾಗಿದ್ದರು. ಈಗ ಒಗ್ಗರಣೆ ಎಂಬ ಚಿತ್ರವನ್ನು ಕನ್ನಡದಲ್ಲಿ ಈ ಜೋಡಿ ತರುತ್ತಿದೆ.

ಹಾಲಿವುಡ್ ನಲ್ಲಿ ಪ್ರಕಾಶ್

ಕನ್ನಡದ ಅಪ್ಪಟ ಪ್ರತಿಭೆ ಪ್ರಕಾಶ್ ರೈ ಈಗಾಗಲೆ ತಾವೇನು ಎಂಬುದನ್ನು ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗಗಳಲ್ಲಿ ತೋರಿಸಿಯಾಗಿದೆ. ಈಗ ಹಾಲಿವುಡ್ ನತ್ತ ಅವರ ಚಿತ್ತ ಹರಿದಿದೆ. ಎರಡು ಹಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಒಂದು ಸುಪ್ರಸಿದ್ಧ ನಿರ್ದೇಶಕ ಸ್ಟೀವಲ್ ಸ್ಪೀಲ್ ಬರ್ಗ್ ಜೊತೆಗಿನದು. 'ಸಿಕ್ಸ್ ಸಸ್ಪೆಕ್ಟ್ ಎಂಬ ಚಿತ್ರದಲ್ಲಿ ಪ್ರಕಾಶ್ ಕಾಣಿಸಲಿದ್ದಾರೆ

ಭಟ್ಟರ ಹೊಸ ಡ್ರಾಮಾ

ಭಟ್ಟರು ಹಿಂದಿ ಚಿತ್ರರಂಗದ ಹೊಸ ಮುಖಗಳಿಗೆ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಅಮಿತಾಬ್ ಬಚ್ಚನ್ ಅವರಿಗೆ ಪ್ರಧಾನ ಪಾತ್ರ( ಭಟ್ಟರ ಪಂಚರಂಗಿಯ ಅನಂತ್ ನಾಗ್ ಪಾತ್ರದಂತೆ) ನೀಡುವ ಸಾಧ್ಯತೆ ಬಗ್ಗೆ ಸುದ್ದಿ ಹರಡಿತ್ತು.

ಬಿಗ್ ಬಿ ಜೊತೆಗೆ ಡೈಲಾಗ್ ಕಿಂಗ್ ನಾನಾ ಪಾಟೇಕರ್ ಅವರನ್ನು ತಾರಾಗಣದಲ್ಲಿ ಸೇರಿಸಿಕೊಳ್ಳಲಾಗಿದೆಯಂತೆ ಎನ್ನಲಾಗಿತ್ತು. ಅದರೆ, ಯಾವುದೂ ಫೈನಲೈಸ್ ಆಗಿಲ್ಲ ಎಂದು ನಿರ್ಮಾಪಕ ಸುರೇಶ್ ಹೇಳಿದ್ದಾರೆ

English summary
South actor Prakash Raj and Kannada famous director Yogaraj Bhat of Mungaru Male fame have joined their hands for a Hindi flick produced by B Suresha. It is said that director has already moved to Mumbai few months ago to warm up for the Hindi film.
Please Wait while comments are loading...