For Quick Alerts
  ALLOW NOTIFICATIONS  
  For Daily Alerts

  ರಾಣಿ ಲಕ್ಷ್ಮೀಬಾಯಿ ಎಂದು ಭಾವಿಸಿದ್ದಾರೆಯೇ?: ಕಂಗನಾರನ್ನ ಅಣಕಿಸಿದ ನಟ ಪ್ರಕಾಶ್ ರೈ

  |

  ಶಿವಸೇನೆ ವಿರುದ್ಧ ಸಿಡಿದೆದ್ದಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ನಟ ಪ್ರಕಾಶ್ ರೈ ಅಣಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮೀಮ್ ಒಂದನ್ನು ಶೇರ್ ಮಾಡಿ ಪ್ರಕಾಶ್ ರೈ, ಕಂಗನಾ ಕಾಲೆಳೆದಿದ್ದಾರೆ.

  ಮಹಾರಾಷ್ಟ್ರ ಸರ್ಕಾರ ಮತ್ತು ಕಂಗನಾ ನಡುವೆ ವಾಕ್ಸಮರ ನಡೆಯುತ್ತಿದೆ. ಶಿವಸೇನೆ ವಿರುದ್ಧ ಸಿಡಿದು ನಿಂತಿರುವ ಕಂಗನಾ ಮುಂಬೈ ನಗರವನ್ನು 'ಪಾಕ್ ಆಕ್ರಮಿತ ಕಾಶ್ಮೀರ'ಕ್ಕೆ ಹೋಲಿಸಿ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ನೇರ ನುಡಿಯ ಮೂಲಕ ಅನೇಕರ ಬೆವರಿಳಿಸುತ್ತಿರುವ ಕಂಗನಾಗೆ ಸಾಕಷ್ಟು ಮಂದಿ ಬೆಂಬಲ ನೀಡಿದ್ದಾರೆ. ಆದರೆ ಇನ್ನೂ ಕೆಲವರು ಕಂಗನಾ ಕಾಲೆಳೆಯುತ್ತಿದ್ದಾರೆ. ಮುಂದೆ ಓದಿ...

  ಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿಇಂದು ನನ್ನ ಮನೆ ಮುರಿದಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ: ಉದ್ಧವ್ ಠಾಕ್ರೆಗೆ ವಿರುದ್ಧ ಕಂಗನಾ ಕಿಡಿ

  ಕಂಗನಾ, ಲಕ್ಷ್ಮೀ ಬಾಯಿ ಎಂದು ಭಾವಿಸಿದ್ದಾರೆಯೇ?

  ಕಂಗನಾ, ಲಕ್ಷ್ಮೀ ಬಾಯಿ ಎಂದು ಭಾವಿಸಿದ್ದಾರೆಯೇ?

  ಒಂದು ಸಿನಿಮಾ ಮಾಡಿದ ಕಂಗನಾ ಲಕ್ಷ್ಮೀ ಬಾಯಿ ಎಂದು ಭಾವಿಸಿದ್ದಾರೆಯೇ? ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. ಹಾಗಾದರೆ ಪದ್ಮಾವತ್ ಸಿನಿಮಾ ಮಾಡಿರುವ ದೀಪಿಕಾ ಪಡುಕೋಣೆ, ಅಕ್ಬರ್ ಪಾತ್ರ ಮಾಡಿರುವ ಹೃತಿಕ್ ರೋಷನ್, ಅಶೋಕ ಪಾತ್ರ ಮಾಡಿರುವ ಶಾರುಖ್ ಖಾನ್, ಆಮೀರ್ ಖಾನ್ ಅವರ ಮಂಗಲ್ ಪಾಂಡೆ, ವಿವೇಕ್ ಒಬೆರಾಯ್ ಅವರು ನರೇಂದ್ರ ಮೋದಿಯೇ? ಎಂದು ಟ್ರೋಲ್ ಮಾಡಿರುವ ಪೇಜ್ ಅನ್ನು ಶೇರ್ ಮಾಡಿದ್ದಾರೆ. ಕಂಗನಾ ಅಭಿಮಾನಿಗಳು ಪ್ರಕಾಶ್ ರೈ ವಿರುದ್ಧ ಮುಗಿಬಿದ್ದಿದ್ದಾರೆ.

  ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಕಂಗನಾ ರಣಾವತ್‌ಗೆ ಸುತ್ತಿಕೊಳ್ತು ಉರುಳು!ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಕಂಗನಾ ರಣಾವತ್‌ಗೆ ಸುತ್ತಿಕೊಳ್ತು ಉರುಳು!

  ಕಂಗನಾ ಬಂಗಲೆ ಒಡೆದು ಹಾಕಿದ್ದು ಸರಿಯೇ?

  ಕಂಗನಾ ಬಂಗಲೆ ಒಡೆದು ಹಾಕಿದ್ದು ಸರಿಯೇ?

  ಕಂಗನಾ ಬಂಗಲೆಯನ್ನು ಒಡೆದು ಹಾಕಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕಂಗನಾ ಬಂಗಲೆ ಕೆಡವಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಈ ನಿರ್ಧಾರವನ್ನು ಖಂಡಿಸಿ ಕಂಗನಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು.

  ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಗುಡುಗು

  ಉದ್ಧವ್ ಠಾಕ್ರೆ ವಿರುದ್ಧ ಕಂಗನಾ ಗುಡುಗು

  "ಉದ್ಧವ್ ಠಾಕ್ರೆ, ಏನು ಯೋಚಿಸುತ್ತಿದ್ದೀರಿ. ಫಿಲ್ಮ್ ಮಾಫಿಯಾ ಜೊತೆ ಸೇರಿ, ನನ್ನ ಮನೆ ಕೆಡವಿ, ನನ್ನ ಮೇಲೆ ಸೇಡು ತೀರಿಸಿಕೊಂಡಿದ್ದೀನಿ ಅಂತ ಅನಿಸುತ್ತಿದೆಯಾ? ಇಂದು ನನ್ನ ಮನೆ ನೆಲಸಮಗೊಂಡಿದೆ, ನಾಳೆ ನಿನ್ನ ದುರಹಂಕಾರ ಮುರಿಯಲಿದೆ. ಕಾಲ ಚಕ್ರ ತಿರುಗುತ್ತಲೇ ಇರುತ್ತೆ ನೆನಪಿಟ್ಟುಕೋ, ಇದು ಎಂದಿಗೂ ಒಂದೇ ರೀತಿ ಇರುವುದಿಲ್ಲ." ಎಂದು ಗುಡುಗಿದ್ದಾರೆ.

  ರಾಜ್ಯಪಾಲರನ್ನು ಭೇಟಿಯಾಗುತ್ತಿರುವ ಕಂಗನಾ

  ರಾಜ್ಯಪಾಲರನ್ನು ಭೇಟಿಯಾಗುತ್ತಿರುವ ಕಂಗನಾ

  ಶಿವಸೇನೆ ಮತ್ತು ಕಂಗನಾ ನಡುವಿನ ವಾಕ್ಸಮರ ಹೆಚ್ಚಾಗುತ್ತಿರುವ ನಡುವೆ ಕಂಗನಾ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ. ಮುಂಬೈಯಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗುವ ಮೊದಲು ಕಂಗನಾ ರಾಜ್ಯಪಾಲರನ್ನು ಭೇಟಿಯಾಗುವ ನಿರ್ಧಾರ ಮಾಡಿದ್ದಾರೆ. ಇಂದು 4.30ಕ್ಕೆ ಕಂಗನಾ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದಾರೆ.

  English summary
  Actor Prakash Raj takes a dig Kangana Ranaut by sharing meme She think that she is Rani Laxmi Bai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X