For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಪ್ರಣೀತಾಗೆ ಬಂಪರ್ ಆಫರ್: ಅದೃಷ್ಟ ಅಂದ್ರೆ ಇದು.!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದಿಂದ ಬಣ್ಣದ ಬದುಕಿಗೆ ಕಾಲಿಟ್ಟ ಪ್ರಣೀತಾ ಸುಭಾಷ್ ಸ್ಯಾಂಡಲ್ ವುಡ್ ನಲ್ಲಿ 'ಬ್ರಹ್ಮ', 'ಜಗ್ಗು ದಾದಾ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಡಿಮ್ಯಾಂಡ್ ಹೆಚ್ಚಿಸಿಕೊಂಡರು.

  ಕನ್ನಡದಲ್ಲಿ ಮಾತ್ರ ಅಲ್ಲ.. ನಟಿ ಪ್ರಣೀತಾ ಸುಭಾಷ್ ಗೆ ತೆಲುಗು ಮತ್ತು ತಮಿಳಿನಲ್ಲೂ ಅಷ್ಟೇ ಬೇಡಿಕೆ ಇದೆ. ತೆಲುಗಿನ 'ಅತ್ತಾರಿಂಟಿಕಿ ದಾರೇದಿ', ತಮಿಳಿನ 'ಸಗುನಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿರುವ ಪ್ರಣೀತಾ ಸುಭಾಷ್ ಗೆ ಇದೀಗ ಬಾಲಿವುಡ್ ಜಿಗಿದಿದ್ದಾರೆ.

  ಹೌದು, ನಟಿ ಪ್ರಣೀತಾ ಸುಭಾಷ್ ಗೆ ಬಾಲಿವುಡ್ ನಿಂದ ಬುಲಾವ್ ಬಂದಿದೆ. ಒಟ್ಟೊಟ್ಟಿಗೆ ಎರಡು ಅವಕಾಶಗಳು ನಟಿ ಪ್ರಣೀತಾ ಸುಭಾಷ್ ಮನೆ ಬಾಗಿಲನ್ನು ತಟ್ಟಿವೆ. ಒಂದು ಬಿಗ್ ಬಜೆಟ್ ಚಿತ್ರವಾಗಿದ್ದರೆ, ಮತ್ತೊಂದು ಅಪ್ಪಟ ಕಾಮಿಡಿ ಎಂಟರ್ ಟೈನರ್. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...

  ಅಜಯ್ ದೇವಗನ್ ಚಿತ್ರದಲ್ಲಿ ಪ್ರಣೀತಾ ಸುಭಾಷ್

  ಅಜಯ್ ದೇವಗನ್ ಚಿತ್ರದಲ್ಲಿ ಪ್ರಣೀತಾ ಸುಭಾಷ್

  ದಕ್ಷಿಣ ಭಾರತದ ಸುಂದರಿ ಪ್ರಣೀತಾ ಸುಭಾಷ್ ಗೆ ಮೊದಲು ಆಫರ್ ಕೊಟ್ಟವರು ಬಾಲಿವುಡ್ ನಟ ಅಜಯ್ ದೇವಗನ್. ತಮ್ಮ ಸಿನಿಮಾ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಪ್ರಣೀತಾ ಸುಭಾಷ್ ಗೆ ಅಭಿನಯಿಸುವ ಅವಕಾಶವನ್ನ ಅಜಯ್ ದೇವಗನ್ ನೀಡಿದ್ದಾರೆ. ಅಂದ್ಹಾಗೆ, 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದ ನಿರ್ಮಾಪಕರಲ್ಲಿ ಅಜಯ್ ದೇವಗನ್ ಕೂಡ ಒಬ್ಬರು.

  ಬಾಲಿವುಡ್ ನಟ ಅಜಯ್ ದೇವಗನ್ ಪತ್ನಿಯಾದ ಕನ್ನಡತಿ ಪ್ರಣೀತಾಬಾಲಿವುಡ್ ನಟ ಅಜಯ್ ದೇವಗನ್ ಪತ್ನಿಯಾದ ಕನ್ನಡತಿ ಪ್ರಣೀತಾ

  ನೈಜ ಘಟನೆ ಆಧಾರಿತ ಚಿತ್ರ

  ನೈಜ ಘಟನೆ ಆಧಾರಿತ ಚಿತ್ರ

  1971 ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧದ ಸುತ್ತ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದ ಕಥೆ ಹೆಣೆಯಲಾಗಿದೆ. ಯುದ್ಧದ ಸಮಯದಲ್ಲಿ ಗುಜರಾತ್ ನ ಭುಜ್ ಏರ್ ಬೇಸ್ ನಾಶಗೊಂಡಿತ್ತು. ಅದನ್ನ ಮರುನಿರ್ಮಾಣ ಮಾಡಲು ಭಾರತೀಯ ವಾಯುಸೇನೆಗೆ ಅಲ್ಲಿನ ಮುನ್ನೂರು ಮಹಿಳೆಯರು ಸಹಾಯ ಮಾಡಿದ್ದರು. ಈ ಘಟನೆಯನ್ನು ಇಟ್ಟುಕೊಂಡು ಅಭಿಶೇಕ್ ಧುಧೇಯಾ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸ್ಕ್ವಾಡ್ರನ್ ಲೀಡರ್ ವಿಜಯ್ ಕಾರ್ಣಿಕ್ ಆಗಿ ಅಜಯ್ ದೇವಗನ್ ನಟಿಸುತ್ತಿದ್ದಾರೆ.

  ನಟಿ ಪ್ರಣೀತಾ ಸುಭಾಷ್ ಮನೆಗೆ ಬಂತು ಹೊಸ ಕಾರು.!ನಟಿ ಪ್ರಣೀತಾ ಸುಭಾಷ್ ಮನೆಗೆ ಬಂತು ಹೊಸ ಕಾರು.!

  ದೊಡ್ಡ ತಾರಾಬಳಗ

  ದೊಡ್ಡ ತಾರಾಬಳಗ

  'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಚಿತ್ರದಲ್ಲಿ ಸಂಜಯ್ ದತ್, ಸೋನಾಕ್ಷಿ ಸಿನ್ಹ, ರಾನಾ ದಗ್ಗುಬಾಟಿ, ವಿಕ್ಕಿ ಪೂಜಾರಿ ಸೇರಿದಂತೆ ಹಲವು ನಟಿಸುತ್ತಿದ್ದಾರೆ. ಇವರೆಲ್ಲರ ಜೊತೆಗೆ ಪ್ರಣೀತಾ ಸುಭಾಷ್ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ. ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ಈ ಚಿತ್ರ ತಯಾರಾಗಲಿದೆ. 2020 ಆಗಸ್ಟ್ 14 ರಂದು ಈ ಸಿನಿಮಾ ತೆರೆಗೆ ಬರಲಿದೆ.

  ಹಂಗಾಮ-2 ಚಿತ್ರದಲ್ಲಿ ಪ್ರಣೀತಾ

  ಹಂಗಾಮ-2 ಚಿತ್ರದಲ್ಲಿ ಪ್ರಣೀತಾ

  ಇನ್ನೂ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ' ಜೊತೆಗೆ 'ಹಂಗಾಮ-2' ಚಿತ್ರದಲ್ಲಿ ನಟಿಸಲು ಪ್ರಣೀತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2003 ರಲ್ಲಿ ತೆರೆಕಂಡ ಕಾಮಿಡಿ ಚಿತ್ರ 'ಹಂಗಾಮ' ಹಿಟ್ ಆಗಿತ್ತು. ಇದೀಗ ಅದರ ಮುಂದುವರಿದ ಭಾಗ 'ಹಂಗಾಮ-2' ತಯಾರಾಗುತ್ತಿದೆ. ಪ್ರಿಯದರ್ಶನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಮೀಝಾನ್ ಜೆಫ್ರಿ ಮತ್ತು ಪ್ರಣೀತಾ ನಟಿಸುತ್ತಿದ್ದಾರೆ. ಒಟ್ಟೊಟ್ಟಿಗೆ ಎರಡು ಬಾಲಿವುಡ್ ಸಿನಿಮಾದಲ್ಲಿ ಬಿಜಿಯಾಗಿರುವ ಪ್ರಣೀತಾ ಸುಭಾಷ್ ಲಕ್ಕಿನೇ.!

  English summary
  Pranitha Subhash signs two movies in Bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X