ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ಪ್ರತೀಕ್ ಬಬ್ಬರ್
ಬಾಲಿವುಡ್ ನಲ್ಲಂತೂ ಮದುವೆ ಸೀಸನ್ ಜೋರಾಗಿದೆ. ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್, ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಇದೇ ಸರದಿಗೆ ಬಾಲಿವುಡ್ ನಟ ಪ್ರತೀಕ್ ಬಬ್ಬರ್ ಸೇರ್ಪಡೆಗೊಂಡಿದ್ದಾರೆ.
ನಿನ್ನೆ.. ಅಂದ್ರೆ ಜನವರಿ 23 ರಂದು ಪ್ರತೀಕ್ ಬಬ್ಬರ್ ಮತ್ತು ಸಾನ್ಯ ಸಾಗರ್ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಲಕ್ನೋದಲ್ಲಿ ಮಹಾರಾಷ್ಟ್ರ ಸಂಪ್ರದಾಯದಂತೆ ಪ್ರತೀಕ್ ಬಬ್ಬರ್-ಸಾನ್ಯ ಸಾಗರ್ ವಿವಾಹ ಮಹೋತ್ಸವ ನಡೆಯಿತು.
ಒಂಬತ್ತು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಯ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಕಳೆದ ವರ್ಷದ ಜನವರಿ ತಿಂಗಳಲ್ಲಿ ಪ್ರತೀಕ್ ಬಬ್ಬರ್-ಸಾನ್ಯ ಸಾಗರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಹೊಸ ಜೀವನ ಆರಂಭಿಸಿದ್ದಾರೆ.

ಅಂದ್ಹಾಗೆ, ಬಾಲಿವುಡ್ ನ ಖ್ಯಾತ ನಟ ರಾಜ್ ಬಬ್ಬರ್ ಮತ್ತು ಸ್ಮಿತಾ ಪಾಟೀಲ್ ಪುತ್ರ ಪ್ರತೀಕ್ ಬಬ್ಬರ್. 'ಜಾನೆ ತು ಯಾ ಜಾನೆ ನಾ', 'ಧೋಬಿ ಘಾಟ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರತೀಕ್ ಬಬ್ಬರ್ ಅಭಿನಯಿಸಿದ್ದಾರೆ.


Click it and Unblock the Notifications










