'ಪಂಕಜಾ' ಶೆಫಾಲಿ ಸಾವಿನ ಬಗ್ಗೆ ಊಹಾಪೋಹ; ಕೊನೆಗೂ ಆಕೆಯ ಪತಿ ಪ್ರತಿಕ್ರಿಯೆ
ಬಾಲಿವುಡ್ ನಟಿ ಶೆಫಾಲಿ ಜರಿವಾಲಾ 3 ತಿಂಗಳ ಹಿಂದೆ ನಿಧರಾಗಿದ್ದರು. ಕನ್ನಡದ 'ಹುಡಗರು' ಚಿತ್ರದ ಹಾಡಿಗೆ ಆಕೆ ಹೆಜ್ಜೆ ಹಾಕಿದ್ದರು. 'ತೊಂದ್ರೆ ಇಲ್ಲಾ ಪಂಕಜಾ' ಹಾಡಿನಲ್ಲಿ ಮಿಂಚಿದ್ದರು. ಆಕೆಯ ಅಗಲಿಕೆ ಬಗ್ಗೆ ಸಾಕಷ್ಟು ವದಂತಿ ಹರಿದಾಡಿತ್ತು. ಆಕೆ ಯಂಗ್ ಆಗಿ ಕಾಣಲು ತೆಗೆದುಕೊಳ್ಳುತ್ತಿದ್ದ ಮೆಡಿಸಿನ್ ಕಾರಣ ಎಂದು ಗುಲ್ಲಾಗಿತ್ತು. ಈ ಬಗ್ಗೆ ಆಕೆಯ ಪತಿ ಪ್ರಯಾಗ್ ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.
"ಲೋ ಬಿಪಿ, ಹೃದಯಾಘಾತ ಮತ್ತು ಭಾರೀ ಗ್ಯಾಸ್ಟ್ರಿಕ್ ಸ್ಥಿತಿ" ಕಾರಣದಿಂದ ನಟಿ ಶೆಫಾಲಿ ನಿಧನ ಹೊಂದಿದ್ದರು ಎಂದು ವರದಿ ಆಗಿತ್ತು. ಪತ್ನಿಯ ಸಾವಿನ ಬಗ್ಗೆ ತಮ್ಮದೇ ಯೂಟ್ಯೂಬ್ ಸಂದರ್ಶನದಲ್ಲಿ ಪ್ರಯಾಗ್ ತ್ಯಾಗಿ ಮಾತನಾಡಿದ್ದಾರೆ. ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. " ಇದೆಲ್ಲಾ ಅರ್ಧಬರ್ಧ ತಿಳ್ಕೊಂಡವರ ಮಾತು. ಇವುಗಳಲ್ಲಿ ಯಾವುದು ಯಂಗ್ ಆಗಿ ಕಾಣಲು ಬಯಸುವ ಔಷಧಿಗಳು ಹೇಳಿ? ಶೆಫಾಲಿ ಪ್ರತಿದಿನ ಮಲ್ಟಿವಿಟಾಮಿನ್‌ಗಳನ್ನು ತೆಗೆದುಕೊಳ್ಳತ್ತಿರಲಿಲ್ಲ. ಕಾರಣ ಅದನ್ನು ಮರೆತುಬಿಡುತ್ತಾಳೆ, ಹಾಗಾಗಿ ತಿಂಗಳಿಗೊಮ್ಮೆ IV ಡ್ರಿಪ್ ಮೂಲಕ ಅವುಗಳನ್ನು ತೆಗೆದುಕೊಳ್ಳುತ್ತಿದ್ದಳು. ಇವುಗಳಲ್ಲಿ ಮಲ್ಟಿವಿಟಾಮಿನ್‌ಗಳು, ವಿಟಮಿನ್ ಸಿ, ಕಾಲಜನ್ ಮತ್ತು ಗ್ಲುಟಾಥಿಯೋನ್ ಸೇರಿವೆ. ಇದೆಲ್ಲಾ ಒಳ್ಳೆ ಆಂಟಿಆಕ್ಸಿಡೆಂಟ್‌ಗಳು ಎಂದಿದ್ದಾರೆ.

ಶೆಫಾಲಿ ಆ ದಿನ ಊಟ ಮಾಡಿರಲಿಲ್ಲ. ಡಯೆಟ್ ಕಾರಣಕ್ಕೆ ಊಟ ಮಾಡದೇ ಈ ಔಷಧಿಗಳನ್ನು ತಗೊಂಡಿದ್ದೇ ಸಾವಿಗೆ ಕಾರಣ ಎನ್ನುವ ಚರ್ಚೆ ಕೂಡ ನಡೆದಿತ್ತು. ಈ ಬಗ್ಗೆ ತ್ಯಾಗಿ ಪ್ರತಿಕ್ರಿಯಿಸಿ "ಇದನ್ನು ಅಲ್ಲಗಳೆದ ಪರಾಗ್, "ನಾವು ಆ ಔಷಧಿಗಳನ್ನು ತೆಗೆದುಕೊಂಡಿದ್ದೆವು. ಆ ದಿನ ಅವಳು ಅದನ್ನು ಸೇವಿಸಿದ್ಲು. ಆ ದಿನ ಆಕೆ ಊಟ ಮಾಡಲಿಲ್ಲ ಅಂತ ಅಲ್ಲ. ಆ ದಿನ ಉಪವಾಸ ಇರುತ್ತಿದ್ದಳು, ಪೂಜೆ ಮಾಡಿದ ಬಳಿಕ ಊಟ ಮಾಡಿ ಮಲಗಿದ್ದಳು. ಒಮ್ಮೆ ಎದ್ದು ಮತ್ತೆ ಊಟ ಮಾಡಿದಳು. ಯಂಗ್ ಆಗಿ ಕಾಣುವ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಆದರೆ ಕಠಿಣ ಪರಿಶ್ರಮದಿಂದ ಅವಳಿಗೆ ವಯಸ್ಸಾದಂತೆ ಕಾಣುತ್ತಿರಲಿಲ್ಲ. ಬರೀ ಮೆಡಿಸಿನ್ ಅಂದುಕೊಳ್ಳಬೇಡಿ ಎಂದು ತ್ಯಾಗಿ ಹೇಳಿದ್ದಾರೆ.
"ಶೆಫಾಲಿ ಡಯೆಟ್ ಮಾಡುತ್ತಿದ್ದಳು. ಹಾಗಂತ ಊಟ ಮಾಡ್ತಿರ್ಲಿಲ್ಲ ಅಂತ ಅಲ್ಲ. ಅವಳ ಬಳಿ 1/2 ಕೆಜಿ ಐಸ್‌ಕ್ರೀಮ್ ಇರ್ತಿತ್ತು. ತಿಂದ ಬಳಿಕ ಡಯೆಟ್ ಮಾಡಿ ಅದನ್ನು ಕರಗಿಸುತ್ತಿದ್ದಳು. ಭಾನುವಾರ ಚೈನೀಸ್ ಆಹಾರ ಸೇರಿದಂತೆ ಬೇರೆ ಏನಾದರೂ ಇಷ್ಟಪಟ್ಟು ತಿನ್ನುತ್ತಿದ್ದಳು. ಅವಳು ಯಾವತ್ತೂ ಯಾವುದನ್ನು ಬಿಡಲಿಲ್ಲ. ಈ ಉಪವಾಸದ ವಿಚಾರ ಎಲ್ಲಿಂದ ಬಂತೋ, ಹೇಗೆಲ್ಲಾ ಅದನ್ನು ತೊಳ್ಕೊಂಡ್ರೋ, ಸರಿಯಾಗಿ ತಿಳ್ಕೊಂಡು ಮಾತಾಡಿ ಎಂದು ಶೆಫಾಲಿ ಪತಿ ತ್ಯಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಹುಟ್ಟಿ ಬೆಳೆದಿದ್ದ ಶೆಫಾಲಿ ಬಳಿಕ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದರು. 'ಕಾಂಟ ಲಗಾ' ರೀಮಿಕ್ಸ್ ಆಲ್ಬಮ್ ಸಾಂಗ್‌ಗೆ ಹೆಜ್ಜೆ ಹಾಕಿ ಮೋಡಿ ಮಾಡಿದ್ದರು. ಬಳಿಕ ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ, ಆಲ್ಬಮ್ ಸಾಂಗ್‌ಗಳಲ್ಲಿ ಶೆಫಾಲಿ ಮಿಂಚಿದ್ದರು. 'ಮುಜ್ಸೆ ಶಾದಿ ಕರೋಗಿ' ಚಿತ್ರದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಕೆ. ಮಾದೇಶ್ ನಿರ್ದೇಶನದ 'ಹುಡುಗರು' ಚಿತ್ರದ ಸ್ಪೆಷಲ್ ಸಾಂಗ್‌ಗೆ ಶೆಫಾಲಿ ಆಯ್ಕೆ ಆಗಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ಚಿತ್ರದಲ್ಲಿ ಪುನೀತ್ ರಾಜ್‌ಕುಮಾತ್ ಜೊತೆಗೆ ಶ್ರೀನಗರ ಕಿಟ್ಟಿ, ಲೂಸ್ ಮಾದ ಯೋಗಿ ನಟಿಸಿದ್ದರು. 'ಕಾಂಟ ಲಗಾ' ಸಾಂಗ್ ನೋಡಿ ಇಮ್ರಾನ್ ಸರ್ದಾರಿಯಾ ಮಾಸ್ಟರ್ ಆಯ್ಕೆ ಮಾಡಿದ್ದರು. ಹರಿಕೃಷ್ಣ ಸಂಗೀತದಲ್ಲಿ ಸಾಂಗ್ ಹಿಟ್ ಆಗಿತ್ತು. ಪಂಕಜಾ ಆಗಿ ಶೆಫಾಲಿ ಬಿಂದಾಸ್ ಆಗಿ ಕುಣಿದು ರಂಜಿಸಿದ್ದರು.


Click it and Unblock the Notifications











