Ileana D'Cruz: ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗೋವಾ ಬ್ಯೂಟಿ? ಇಲಿಯಾನಾ ಮಗುವಿನ ತಂದೆ ಇವರೇನಾ?
ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ತುಂಬು ಗರ್ಭಿಣಿ. ಆದರೆ ಇದೂವರೆಗೂ ತನ್ನ ಮಗುವಿಗೆ ತಂದೆಯಾಗಲಿರೋ ವ್ಯಕ್ತಿ ಯಾರು? ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಆ ಮಿಸ್ಟರಿ ಮ್ಯಾನ್ ಯಾರು ಅನ್ನೋ ರಹಸ್ಯವನ್ನು ಬಿಟ್ಟಿರಲಿಲ್ಲ. ಕೊನೆಗೂ ಈಕೆ ಚಿಕ್ಕದೊಂದು ಹಿಂಟ್ ಅನ್ನು ರಿವೀಲ್ ಮಾಡಿದ್ದಾರೆ.
ಇಲಿಯಾನಾ ಡಿ ಕ್ರೂಸ್ ಮೊದಲ ಮಗವಿಗೆ ತಾಯಿಯಾಗುತ್ತಿದ್ದಾರೆ. ಈ ಖುಷಿಯಲ್ಲಿ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಗಾಗ ಪ್ರತ್ಯಕ್ಷ ಕೊಟ್ಟು ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಿದ್ದರು. ಆದರೂ, ಬಾಯ್‌ಫ್ರೆಂಡ್ ಅನ್ನು ಮಾತ್ರ ರಿವೀಲ್ ಮಾಡಿರಲಿಲ್ಲ.

ಕೊನೆಗೂ ತನ್ನ ಜೀವನದ ಅತೀ ಮುಖ್ಯ ವ್ಯಕ್ತಿ ಯಾರು? ಅನ್ನೋದಕ್ಕೆ ಚಿಕ್ಕದೊಂದು ಹಿಂಟ್ ಕೊಟ್ಟಿದ್ದಾರೆ. ತನ್ನ ಬಾಯ್‌ಫ್ರೆಂಡ್ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೊದಲು ಗೆಳೆಯನ ಬ್ಲರ್ ಫೋಟೊ ಶೇರ್ ಮಾಡಿದ್ದರು. ಅದಾದ ಬಳಿಕ ಈಗ ಮುಖ ತೋರಿಸಿದ್ದಾರೆ.
ಬಾಯ್‌ಫ್ರೆಂಡ್ ಮುಖ ತೋರಿಸಿದ ಇಲಿಯಾನಾ
ಇಲಿಯಾನಾ ಇಟ್ಟ ದಿಟ್ಟ ನಿರ್ಧಾರಕ್ಕೆ ಒಂದು ವರ್ಗ ಮೆಚ್ಚುಗೆ ಸೂಚಿಸಿತ್ತು. ಅದೇ ಇನ್ನೊಂದು ಮಗವಿನ ತಂದೆ ಯಾರು ಅಂತ ಪ್ರಶ್ನೆ ಮಾಡಿತ್ತು. ಆದರೆ, ಇಲಿಯಾನಾ ಇದ್ಯಾವುದರ ಬಗ್ಗೆನೂ ತಲೆಕೆಡಿಸಿಕೊಂಡಿರಲಿಲ್ಲ. ಬಾಯ್‌ಫ್ರೆಂಡ್ ಅನ್ನು ಪರಿಚಯ ಮಾಡಿಸೋ ಗೋಜಿಗೆ ಹೋಗಿರಲಿಲ್ಲ.
ಈಗ ಕೊನೆಗೂ ತನ್ನ ಅಭಿಮಾನಿಗಳಿಗೆ ಚಿಕ್ಕದೊಂದು ಹಿಂಟ್ ಕೊಟ್ಟಿದ್ದಾರೆ. ಮಗುವಿನ ತಂದೆ ಹೆಸರನ್ನು ಹೇಳದೇ ಹೋದರೂ, ಮುಖವನ್ನು ತೋರಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ಫೋಟೊ ವೈರಲ್ ಆಗುತ್ತಿದೆ. ಆದರೂ, ಇಲಿಯಾನಾ ಸಂಪೂರ್ಣ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಗರ್ಭಿಣಿ ಇಲಿಯಾನಾ ಫುಲ್ ಹ್ಯಾಪಿ
ಇಲಿಯಾನಾ ಡಿಕ್ರೂಸ್ ಅಮ್ಮನಾಗುವ ನಿರೀಕ್ಷೆಯಲ್ಲಿದ್ದಾರೆ. ಈ ಹಂತದ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಪ್ರೆಗ್ನೆನ್ಸಿ ಜರ್ನಿಯನ್ನು ಅದೃಷ್ಟ ಎಂದು ಭಾವಿಸಿದ್ದಾರೆ. ತನ್ನ ಲೈಫ್ ಪಾರ್ಟ್ನರ್ ಬಗ್ಗೆನೂ ಖುಷಿ ವ್ಯಕ್ತ ಪಡಿಸಿದ್ದಾರೆ.
" ಕೆಲವು ದಿನಗಳಿಂದ ನನ್ನ ಬಗ್ಗೆ ನಾನು ಯೋಚನೆ ಮಾಡುವುದನ್ನೇ ಮರೆತಿದ್ದೇನೆ. ಆದರೆ, ಈ ವ್ಯಕ್ತಿ ಬಂಡೆಯ ಹಾಗೆ ನನ್ನ ಜೊತೆಗಿದ್ದಾರೆ. ನನ್ನ ಜೊತೆಗೆ ನಿಂತಿದ್ದಾರೆ. ನನ್ನ ಕಣ್ಣೀರನ್ನು ಒರೆಸಿದ್ದಾರೆ. ನನ್ನನ್ನು ನಗಿಸಲು ಜೋಕ್ ಕ್ರ್ಯಾಕ್ ಮಾಡಿದ್ದಾರೆ. ನನಗೆ ಏನು ಅಂತ ಅನ್ನೋದನ್ನು ಅರ್ಥ ಮಾಡಿಕೊಂಡು ಅಪ್ಪಿಕೊಳ್ಳುತ್ತಾರೆ." ಎಂದು ಇಲಿಯಾನಾ ಹೇಳಿದ್ದಾರೆ.
ಕತ್ರಿನಾ ಕೈಫ್‌ಗೆ ಬರ್ತ್‌ಡೇಗೆ ವಿಶ್
ಇಲಿಯಾನಾ ಡಿಕ್ರೂಸ್ ತನ್ನ ಬಾಯ್‌ಫ್ರೆಂಡ್ ಫೋಟೊವನ್ನು ರಿವೀಲ್ ಮಾಡಿದ್ದಾರೆ. ಆದರೆ, ಆತನ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಬಾಯ್‌ಫ್ರೆಂಡ್ ಜೊತೆಗಿನ 'ನೈಟ್ ಡೇಟ್' ಹೋಗಿದ್ದ ಇಲಿಯಾನಾ ಅಲ್ಲಿನ ಫೋಟೊವನ್ನು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿನ್ನೆ (ಜುಲೈ 16) ಕತ್ರಿನಾ ಕೈಫ್ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈವೇಳೆ ಕತ್ರಿನಾಗೂ ವಿಶ್ ಮಾಡಿದ್ದರು. ಇಲಿಯಾನಾ ಗರ್ಭಿಣಿ ಅಂತ ಅನೌನ್ಸ್ ಮಾಡುತ್ತಿದ್ದಂತೆ ಕತ್ರಿಕಾ ಕೈಫ್ ಸಹೋದರನೇ ಬಾಯ್‌ಫ್ರೆಂಡ್ ಇರಬಹುದು ಎಂದು ಗುಲ್ಲೆದ್ದಿತ್ತು. ಅದಕ್ಕೀಗ ಮತ್ತೆ ಪುಷ್ಠಿ ಕೊಟ್ಟಂತಾಗಿದೆ.


Click it and Unblock the Notifications











