ಮದುವೆ ಆಗಿ 12 ವರ್ಷಗಳ ಬಳಿಕ ಖ್ಯಾತ ನಟಿ ಗರ್ಭಿಣಿ; 'ನಿಮಗೆ ಮದ್ವೆ ಆಗಿದ್ಯಾ' ಎಂದ ನಟ್ಟಿಗರು?
ಸಾಮಾನ್ಯವಾಗಿ ಕೆಲ ನಟಿಯರು ಮದುವೆ, ಮಗು ಆದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಇಂಡಸ್ಟ್ರಿ ಬಿಟ್ಟು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗುತ್ತಾರೆ. ಆದರೆ ಬಾಲಿವುಡ್ ಬೆಡಗಿಯರು ಮದುವೆ, ಮಕ್ಕಳು ಆದರೂ ಚಿತ್ರರಂಗದಿಂದ ಹೆಚ್ಚು ಬಿಡುವು ಪಡೆಯಲ್ಲ. ಕೆಲವೇ ತಿಂಗಳಲ್ಲಿ ವಾಪಸ್ ಆಗುತ್ತಾರೆ.
ಸಿನಿಮಾ ಕಲಾವಿದರು ಮದುವೆ ಆಗಿದ್ದರೂ ಮಕ್ಕಳ ವಿಚಾರದಲ್ಲಿ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ. ಮೊದಲು ಕರಿಯರ್ ಬಳಿಕ ಮಕ್ಕಳು ಎಂದು ತೀರ್ಮಾನಿಸುತ್ತಾರೆ. ಬಿಟೌನ್ ಬ್ಯೂಟಿ ದೀಪಿಕಾ ಪಡುಕೋಣೆ ಮದುವೆ ಆಗಿ 6 ವರ್ಷಗಳ ಬಳಿಕ ಗರ್ಭಿಣಿ ಆಗಿದ್ದರು. ಇತ್ತೀಚೆಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮತ್ತೊಬ್ಬ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಗರ್ಭಿಣಿ ಆಗಿರುವ ವಿಚಾರ ಹೊರಬಿದ್ದಿದೆ.

ಮದುವೆ ಆಗಿ ಬರೋಬ್ಬರಿ 12 ವರ್ಷಗಳ ಬಳಿಕ ರಾಧಿಕಾ ಆಪ್ಟೆ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಆಕೆಯ ಬೇಬಿ ಬಂಪ್ ಫೋಟೊಗಳು ವೈರಲ್ ಆಗುತ್ತಿದೆ. BFI ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಕೆ ಭಾಗಿ ಆಗಿದ್ದು ಆ ಫೋಟೊಗಳಲ್ಲಿ ಆಕೆ ಗರ್ಭಿಣಿ ಆಗಿರುವ ವಿಚಾರ ಬಹಿರಂಗವಾಗಿದೆ.
ರಾಧಿಕಾ ಆಪ್ಟೆಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಆದಷ್ಟು ಬೇಗ ಮುದ್ದಾದ ಮಗು ನಿಮ್ಮ ಮಡಿಲಲ್ಲಿ ಕಿಲ ಕಿಲ ನಗು ಬೀರಲಿ ಎಂದು ಹಾರೈಸುತ್ತಿದ್ದಾರೆ. ಕೆಲವರು ಮೇಡಂ ನಿಮಗೆ ಮದುವೆ ಆಗಿದ್ಯಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಜನರಿಗೆ ಆಕೆ ಮದುವೆ ಆಗಿರುವ ವಿಚಾರವೇ ಗೊತ್ತಿರಲಿಲ್ಲ. ಹಾಗಾಗಿ ಇಂತಾದೊಂದು ಕಾಮೆಂಟ್ ಬರ್ತಿದೆ. BFI ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿ ಆಗಿದ್ದ ಕೆಲ ಫೋಟೊಗಳನ್ನು ಆಕೆ ಹಂಚಿಕೊಂಡಿದ್ದಾರೆ.
2012ರಲ್ಲಿ ಲಂಡನ್ ಮೂಲದ ಮ್ಯೂಜಿಷಿಯನ್ ಬೆನೆಡಿಕ್ ಟೇಲರ್ ಎಂಬುವವರ ಜೊತೆ ರಾಧಿಕಾ ಆಪ್ಟೆ ಮದುವೆ ಆಗಿ ಆಗಿತ್ತು. ತಮ್ಮ ಬೋಲ್ಡ್ ಪಾತ್ರಗಳಿಂದ ಆಕೆ ಸದಾ ಸುದ್ದಿಯಲ್ಲಿ ಇರುತ್ತಾರೆ. 2005ರಲ್ಲಿ 'ವಾಹ್! ಲೈಫ್ ಹೋ ತೋ ಐಸಿ' ಎನ್ನುವ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. 'ರಕ್ತಚರಿತ್ರ' ಸರಣಿ ಸಿನಿಮಾಗಳಲ್ಲಿ ಮಿಂಚಿದ್ದರು. ಹಿಂದಿ ಬಳಿಕ ಕೆಲ ತೆಲುಗು ಚಿತ್ರಗಳಲ್ಲಿ ರಾಧಿಕಾ ಆಪ್ಟೆ ಬಣ್ಣ ಹಚ್ಚಿದ್ದರು.
ಇದೇ ವರ್ಷ ಬಂದ 'ಮೆರಿ ಕ್ರಿಸ್ಮಸ್' ಚಿತ್ರದಲ್ಲಿ ಕೊನೆಯ ಬಾರಿ ರಾಧಿಕಾ ಆಪ್ಟೆ ನಟಿಸಿದ್ದರು. ವಿಜಯ್ ಸೇತುಪತಿ ಹಾಗೂ ಕತ್ರೀನಾ ಕೈಫ್ ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಿಸ್ಟರ್ 'ಮಿಡ್‌ನೈಟ್' ಹಾಗೂ 'ಲಾಸ್ಟ್ ಡೇಸ್' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ತಡವಾಗುತ್ತಿದೆ. ಹಿಂದಿ, ತೆಲುಗು ಮಾತ್ರವಲ್ಲದೇ ಕೆಲ ಇಂಗ್ಲೀಷ್ ಸಿನಿಮಾಗಳಲ್ಲಿ ಬೆಡಗಿ ಮಿಂಚಿದ್ದಾರೆ.
ತಮಿಳುನಾಡಿನ ವೆಲ್ಲೋರ್‌ನಲ್ಲಿ ಮರಾಠಿ ಕುಟುಂಬದಲ್ಲಿ ರಾಧಿಕಾ ಆಪ್ಟೆ ಹುಟ್ಟಿ ಬೆಳೆದರು. ಕಥಕ್ ಕಲಿಯಲು ಆರಂಭಿಸಿದ ಆಕೆ ಬಳಿಕ ಪುಣೆಗೆ ತೆರಳಿ ರಂಗಭೂಮಿಯಲ್ಲಿ ನಟಿಸಲು ಮುಂದಾದರು. ಹೀಗೆ ಬಣ್ಣದಲೋಕಕ್ಕೆ ಬರುವಂತಾಯಿತು. ಕಾಂಟೆಂಪರರಿ ಡ್ಯಾನ್ಸ್ ಕಲಿಯಲು ರಾಧಿಕಾ ಲಂಡನ್‌ಗೆ ಹೋದಾಗ ಬೆನೆಡಿಕ್ ಟೇಲರ್ ಪರಿಚಯವಾಗಿತ್ತು. ಬಳಿಕ ಕೆಲ ದಿನಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. 2013ರಲ್ಲಿ ಮದುವೆಗೂ ಮುನ್ನ ಇಬ್ಬರ ರಿಜಿಸ್ಟರ್ ಮ್ಯಾರೇಜ್ ನಡೆದಿತ್ತು.
ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ನಟಿ ರಾಧಿಕಾ ಆಪ್ಟೆ ದನಿ ಎತ್ತಿದ್ದರು. ಮೀಟು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇನ್ನು ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೂ ಆಗಾಗ್ಗೆ ಸಂಕಷ್ಟಕ್ಕೆ ಸಿಲುಕಿದ್ದು ಇದೆ.


Click it and Unblock the Notifications











