#ಮೀಟೂ ಬಗ್ಗೆ ಕಾಮೆಂಟ್: ಪ್ರೀತಿ ಜಿಂಟಾ ಬಗ್ಗೆ ಟ್ವೀಟಿಗರು ಗರಂ
#ಮೀಟೂ ಅಭಿಯಾನದ ಅಡಿ ಹಲವು ನಾಯಕಿಯರು ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. #ಮೀಟೂ ಅಭಿಯಾನದಿಂದಾಗಿ ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ.
ಇದೀಗ ಇದೇ ಅಭಿಯಾನದ ಬಗ್ಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ''ಕೆಲಸ ಮಾಡಲು ಬಾಲಿವುಡ್ ಇಂಡಸ್ಟ್ರಿ ತುಂಬಾ ಸೇಫ್. ಕೆಲ ನಟಿಯರು #ಮೀಟೂ ಅಭಿಯಾನವನ್ನ ವೈಯುಕ್ತಿಕ ದ್ವೇಷ ಮತ್ತು ಪಬ್ಲಿಸಿಟಿಗಾಗಿ ಬಳಸುತ್ತಿದ್ದಾರೆ. ನನಗೆ ಯಾವತ್ತೂ ಅಂತಹ ಅನುಭವ ಆಗಿಲ್ಲ'' ಎಂದು ಸಂದರ್ಶನದಲ್ಲಿ ಪ್ರೀತಿ ಜಿಂಟಾ ಹೇಳಿಕೆ ನೀಡಿದ್ದಾರೆ.
''ಇವತ್ತಿನ ಸ್ವೀಟು ನಾಳಿನ ಮೀಟೂ ಆಗಬಹುದು'' ಅಂತ ಯಾರೋ ಒಬ್ಬರು ಹೇಳಿದ್ದನ್ನ ನಗುನಗುತ್ತಾ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ ಪ್ರೀತಿ ಜಿಂಟಾ. ಇದನ್ನೆಲ್ಲ ಗಮನಿಸಿದ ಟ್ವೀಟಿಗರು ಪ್ರೀತಿ ಜಿಂಟಾ ವಿರುದ್ಧ ಗರಂ ಆಗಿದ್ದಾರೆ.
ನೆಸ್ ವಾಡಿಯಾ ವಿರುದ್ಧ ಕಿರುಕುಳದ ಕೇಸ್ ಹಾಕಿದ್ದ ಪ್ರೀತಿ ಜಿಂಟಾ #ಮೀಟೂ ಮೊಮೆಂಟ್ ನ ಎದುರಿಸಿಲ್ಲ ಅಂತ ಹೇಗೆ ಹೇಳಿದರು.? ಮಹಿಳೆಯಾಗಿ #ಮೀಟೂ ಬಗ್ಗೆ ಪ್ರೀತಿ ಜಿಂಟಾ ಇಷ್ಟು ಬಾಲಿಶ ಹೇಳಿಕೆ ನೀಡಬಾರದಿತ್ತು ಎಂಬುದು ಟ್ವೀಟಿಗರ ಅಭಿಪ್ರಾಯವಾಗಿದೆ. ಮುಂದೆ ಓದಿರಿ...
ಅವಮಾನಕರ ಸಂದರ್ಶನ
''ಪ್ರೀತಿ ಜಿಂಟಾ ನೀಡಿರುವ ಸಂದರ್ಶನ ನೋಡಿ ಅವಮಾನ ಆಗಿದೆ. 2014 ರಲ್ಲಿ ಆಕೆ ನೆಸ್ ವಾಡಿಯಾ ವಿರುದ್ಧ ಕಿರುಕುಳದ ಕೇಸ್ ಫೈಲ್ ಮಾಡಿದರು. ಆದರೂ, ನನಗೆ ಕರಾಳ ಅನುಭವ ಆಗಿಲ್ಲ ಎಂದು ಹೇಗೆ ಹೇಳಿದರು'' ಎಂದು ಟ್ವೀಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ನಿರೀಕ್ಷೆ ಮಾಡಿರಲಿಲ್ಲ
''ಪ್ರೀತಿ ಜಿಂಟಾರಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇಂತಹ ಕ್ರಾಂತಿಕಾರಕ ಚಳುವಳಿ ಬಗ್ಗೆ ಮಹಿಳೆಯಾಗಿ ಹಾಸ್ಯಾಸ್ಪದ ಹೇಳಿಕೆ ನೀಡಬಾರದು'' ಎನ್ನುತ್ತಿದ್ದಾರೆ ಟ್ವೀಟಿಗರು.
ಗೌರವ ಕಳೆದುಕೊಂಡಿದ್ದೀರಾ...
''ನಾವು ಇಟ್ಟಿದ್ದ ಅಪಾರವಾದ ಗೌರವವನ್ನು ಪ್ರೀತಿ ಜಿಂಟಾ ಕಳೆದುಕೊಂಡಿದ್ದಾರೆ'' ಅಂತ ಕೆಲವರು ಟ್ವೀಟ್ ಮಾಡಿದ್ದಾರೆ.
ಪ್ರೀತಿ ಜಿಂಟಾ ಕೊಟ್ಟ ಪ್ರತಿಕ್ರಿಯೆ ಏನು.?
ಟ್ವಿಟ್ಟರ್ ನಲ್ಲಿ ಜನ ಬೇಸರ ವ್ಯಕ್ತಪಡಿಸುತ್ತಿದ್ದಂತೆಯೇ ಎಚ್ಚರಗೊಂಡ ಪ್ರೀತಿ ಜಿಂಟಾ, ಸಂದರ್ಶನವನ್ನು ಎಡಿಟ್ ಮಾಡಿರುವ ರೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ''ನಾನು ಕೊಟ್ಟಿರುವ ಹೇಳಿಕೆಗಳನ್ನು ಬಾಲಿಶವಾಗಿ ತೋರಿಸಲಾಗಿದೆ'' ಎಂದು ಪ್ರೀತಿ ಜಿಂಟಾ ಟ್ವೀಟ್ ಮಾಡಿದ್ದಾರೆ.


Click it and Unblock the Notifications











