For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಅನ್ನು ಖರೀದಿಸಿದ ಪ್ರೀತಿ ಜಿಂಟಾ ಖುಷಿಗೆ ಪಾರವಿಲ್ಲ!

  |

  ನಟಿ, ಉದ್ಯಮಿ ಪ್ರೀತಿ ಜಿಂಟಾ ಹಾಗೂ ಶಾರುಖ್ ಖಾನ್ ಅವರುಗಳು ಬಹಳ ಉತ್ತಮ ಗೆಳೆಯರು. ಪ್ರೀತಿ ಜಿಂಟಾ ಮೊದಲ ಸಿನಿಮಾ ಮಾಡಿದ್ದು ಶಾರುಖ್ ಖಾನ್ ಜೊತೆಗೆ, ಆ ನಂತರ ಈ ಜೋಡಿ ಹಲವು ಹಿಟ್ ಸಿನಿಮಾಗಳನ್ನು ಬಾಲಿವುಡ್‌ಗೆ ನೀಡಿದೆ.

  ಇದೀಗ ನಟಿ ಪ್ರೀತಿ ಜಿಂಟಾ, ಶಾರುಖ್ ಖಾನ್ ಅನ್ನು ಖರೀದಿಸಿದ್ದಾರೆ. ಹೌಹಾರಬೇಡಿ, ಪ್ರೀತಿ ಖರೀದಿಸಿರುವುದು ನಟ ಶಾರುಖ್ ಖಾನ್ ಅನ್ನು ಅಲ್ಲ ಕ್ರಿಕೆಟಿಗ ಶಾರುಖ್ ಖಾನ್ ಅನ್ನು.

  ನಿನ್ನೆ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಪಂಜಾಜ್ ಕಿಂಗ್ಸ್ ತಂಡದ ಒಡತಿ ಪ್ರೀತಿ ಜಿಂಟಾ, ಹರಾಜು ಪ್ರಕ್ರಿಯೆಯಲ್ಲಿ ಶಾರುಖ್ ಖಾನ್ ಎಂಬ ಆಟಗಾರನ್ನು ಹರಾಜಿನಲ್ಲಿ ಖರೀದಿಸಿದರು. ಈ ವೇಳೆ ಅವರ ಟೇಬಲ್‌ನ ಪಕ್ಕದಲ್ಲಿಯೇ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡದ ಸದಸ್ಯರು ಕೂತಿದ್ದರು. ಅದರಲ್ಲಿ ಶಾರುಖ್ ಖಾನ್ ದೊಡ್ಡ ಮಗ ಆರ್ಯನ್ ಖಾನ್ ಸಹ ಇದ್ದರು.

  ಕ್ರಿಕೆಟಿಗ ಶಾರುಖ್ ಖಾನ್ ಅನ್ನು ಖರೀದಿಸಿದ ಕೂಡಲೇ ಕೆಕೆಆರ್ ತಂಡದ ಕಡೆ ತಿರುಗಿ, ಆರ್ಯನ್ ಖಾನ್ ಅನ್ನು ಉದ್ದೇಶಿಸಿ, 'ನಾವು ಶಾರುಖ್ ಖಾನ್ ಅನ್ನು ಕೊಂಡು ಕೊಂಡು ಬಿಟ್ಟೆವು' ಎಂದು ಹಾಸ್ಯ ಚಟಾಕಿ ಹಾರಿಸಿ, ತಮ್ಮ ಪಂಜಾಬ್ ತಂಡದ ಸದಸ್ಯರ ಕೈತಟ್ಟಿ ಸಂಭ್ರಮ ಆಚರಿಸಿದರು.

  ದರ್ಶನ್ ಸಿನಿ ಜರ್ನಿಯ ಎವರ್ಗ್ರೀನ್ ಮತ್ತು ಫೇವರೈಟ್ ಚಿತ್ರಗಳು | Filmibeat Kannada

  ಪ್ರೀತಿ ಜಿಂಟಾರ ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿ ಸಣ್ಣಗೆ ನಕ್ಕರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಶಾರುಖ್ ಖಾನ್ ಕೆಕೆಆರ್ ತಂಡದ ಮಾಲೀಕರಾಗಿದ್ದು ಅವರ ಗೆಳತಿ ಜೂಹಿ ಚಾವ್ಲಾ ಸಹ ಮಾಲಕಿ ಆಗಿದ್ದಾರೆ. ನಿನ್ನೆಯ ಹರಾಜು ಪ್ರಕ್ರಿಯೆಯಲ್ಲಿ ಜೂಹಿ ಚಾವ್ಲಾ ಪುತ್ರಿ ಜಾಹ್ನವಿ ಸಹ ಭಾಗವಹಿಸಿದ್ದರು. ಇಬ್ಬರು ಮಾಲೀಕರ ಮಕ್ಕಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

  English summary
  Actress Preity Zinta teases Shah Rukh Khan's son Aryan Khan in IPL auction after she purchased a player named Shah Rukh Khan in auction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X