For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಅನ್ನು ಹೊಗಳಿದ ನರೇಂದ್ರ ಮೋದಿ!

  |

  ನಿರ್ದೇಶಕ ಕರಣ್ ಜೋಹರ್ ಅನ್ನು ನೆಟ್ಟಿಗರು ಗುರಿ ಮಾಡಿಕೊಂಡಿದ್ದಾರೆ. ಸುಶಾಂತ್ ಸಾವಿನ ನಂತರ ಕರಣ್ ಮೇಲೆ ಸತತ ವಾಗ್ದಾಳಿಗಳು ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿದೆ.

  ಟಿವಿ ಮಾಧ್ಯಮಗಳು, ಕಂಗನಾ ರಣೌತ್ ಹಾಗೂ ಇನ್ನಿತರೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಸಹ ಕರಣ್ ಜೋಹರ್ ಅವರ 'ಸ್ವಜನಪಕ್ಷಪಾತ'ದ ವಿರುದ್ಧ ಕಠಿಣ ಶಬ್ದಗಳಲ್ಲಿ ಮಾತನ್ನಾಡಿದ್ದರು.

  ಇದರಿಂದ ಬೇಸರಗೊಂಡಿದ್ದ ಕರಣ್ ಜೋಹರ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಉಳಿದುಬಿಟ್ಟಿದ್ದರು. ಟ್ವಿಟ್ಟರ್‌ನಲ್ಲಿ ಸಹ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದರು. ಆದರೆ ನಿನ್ನೆ ಏಕಾ-ಏಕಿ ಪ್ರಧಾನಿ ಮೋದಿ ಅವರೇ ಕರಣ್ ಜೋಹರ್ ಅನ್ನು ಹೊಗಳಿಬಿಟ್ಟಿದ್ದಾರೆ. ಇದು ಕರಣ್ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

  ಕರಣ್ ಜೋಹರ್ ಅನ್ನು ಹೊಗಳಿದ ಮೋದಿ

  ಕರಣ್ ಜೋಹರ್ ಅನ್ನು ಹೊಗಳಿದ ಮೋದಿ

  ನಿನ್ನೆ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಹಲವು ಸೆಲೆಬ್ರಿಟಿಗಳು ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ್ದರು. ಕರಣ್ ಜೋಹರ್ ಸಹ ಪ್ರಧಾನಿ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಕರಣ್ ಜೋಹರ್ ಅನ್ನು ಹೊಗಳಿದ್ದಾರೆ.

  'ನಿಮ್ಮೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದು ನನ್ನ ಅದೃಷ್ಟ'

  'ನಿಮ್ಮೊಂದಿಗೆ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದು ನನ್ನ ಅದೃಷ್ಟ'

  ಸಿನೆಮಾ ಪ್ರೀತಿ ಮತ್ತು ನಮ್ಮ ಸಿನೆಮಾಗಳು ಜಗತ್ತಿನಾದ್ಯಂತ ಬೀರುತ್ತಿರುವ ಪ್ರಭಾವದ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ಸಿಕ್ಕ ಅವಕಾಶ ನನ್ನ ಅದೃಷ್ಟ. ನಿಮ್ಮ ಪ್ರೀತಿ, ಹೃದಯವಂತಿಕೆ ಸದಾ ನಮಗೆ ಬೆಳಕು ತೋರುತ್ತದೆ ಎಂದು ಕರಣ್ ಜೋಹರ್ ಶುಭಾಶಯ ಕೋರಿದ್ದರು.

  ಕರಣ್ ಸಿನಿಮಾ ಪ್ರೀತಿಯನ್ನು ಹೊಗಳಿದ ಮೋದಿ

  ಕರಣ್ ಸಿನಿಮಾ ಪ್ರೀತಿಯನ್ನು ಹೊಗಳಿದ ಮೋದಿ

  ಇದಕ್ಕೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ, 'ಸಿನಿಮಾ ಬಗೆಗಿನ ನಿಮ್ಮ ಪ್ರೀತಿ ಗೌರವಕ್ಕೆ ಅರ್ಹ, ನಿಮ್ಮ ಹಾರೈಕೆಗೆ ಧನ್ಯವಾದ' ಎಂದು ಪ್ರತಿಕ್ರಿಯಿಸಿದ್ದಾರೆ ಮೋದಿ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಹಲವು ಸ್ಟಾರ್ ನಟರಿಗೆ ಪ್ರತಿಕ್ರಿಯಿಸಿದ್ದಾರೆ

  ಹಲವು ಸ್ಟಾರ್ ನಟರಿಗೆ ಪ್ರತಿಕ್ರಿಯಿಸಿದ್ದಾರೆ

  ಪ್ರಧಾನಿ ಮೋದಿ ಅವರು ಹಲವು ಸಿನಿಮಾ ತಾರೆಯರ ಶುಭಾಶಯಗಳಿಗೆ ಪ್ರತಿಕ್ರಿಯಿಸಿದ್ದಾರೆ. ಕಂಗನಾ ರಣೌತ್, ಹೃತಿಕ ರೋಷನ್, ವಿಕ್ಕಿ ಕೋಶಲ್, ಲಕ್ಷ್ಮಿ ಮಂಚು, ಇನ್ನೂ ಹಲವಾರು ಸ್ಟಾರ್ ನಟರ ಶುಭಾಶಯಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  English summary
  Prime Minister Narendra Modi praises director Karan Johar's loe for movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X