ಮುಂದಿನ ತಿಂಗಳು ನಡೆಯಲಿದೆ ಯುವಿಕಾ ಚೌಧರಿ-ಪ್ರಿನ್ಸ್ ನರುಲಾ ಮದುವೆ
ರಿಯಾಲಿಟಿ ಶೋಗಳ ಕಿಂಗ್ ಪ್ರಿನ್ಸ್ ನರುಲಾ ಹಾಗೂ ನಟಿ ಯುವಿಕಾ ಚೌಧರಿ ವಿವಾಹ ಮಹೋತ್ಸವ ಮುಂದಿನ ತಿಂಗಳು ನಡೆಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 12 ರಂದು ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಪಂಜಾಬಿ ಸಂಪ್ರದಾಯದಂತೆ ಪ್ರಿನ್ಸ್ ನರುಲಾ-ಯುವಿಕಾ ಚೌಧರಿ ಹೊಸ ಜೀವನಕ್ಕೆ ಅಡಿಯಿಡಲಿದ್ದಾರೆ. ಮೂರು ದಿನಗಳ ಕಾಲ ಮದುವೆ ನಡೆಯಲಿದ್ದು, ಅಕ್ಟೋಬರ್ 10 ರಿಂದಲೇ ಸೆಲೆಬ್ರೇಷನ್ ಶುರುವಾಗಲಿದೆ. ಮುಂಬೈನ ಜುಹುನಲ್ಲಿರುವ ಹೋಟೆಲ್ ಸನ್ ಅಂಡ್ ಸ್ಯಾಂಡ್ ನಲ್ಲಿ ಜೋಡಿಯ ಆರತಕ್ಷತೆ ನಡೆಯಲಿದೆ.
ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ಆಗುತ್ತಿದೆ. ಆದ್ರೆ, ಮದುವೆ ದಿನಾಂಕದ ಬಗ್ಗೆ ಇನ್ನೂ ಯುವಿಕಾ ಚೌಧರಿ ಆಗಲಿ, ಪ್ರಿನ್ಸ್ ಆಗಲಿ ಕನ್ಫರ್ಮ್ ಮಾಡಿಲ್ಲ.

ಎಂ.ಟಿ.ವಿ ರೋಡೀಸ್ ಹಾಗೂ ಸ್ಪ್ಲಿಟ್ಸ್ ವಿಲ್ಲಾ ರಿಯಾಲಿಟಿ ಶೋಗಳನ್ನು ಗೆದ್ದಿದ್ದ ಪ್ರಿನ್ಸ್ 'ಬಿಗ್ ಬಾಸ್' ಮನೆ ಪ್ರವೇಶಿಸಿದರು. ಇದೇ 'ಬಿಗ್ ಬಾಸ್' ಮನೆಯಲ್ಲಿ ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನಡುವೆ ಪ್ರೀತಿ ಮೊಳಕೆಯೊಡೆಯಿತು. ತಮ್ಮ ಪ್ರೀತಿಗೆ ಇದೀಗ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಜೋಡಿ ಮುಂದಾಗಿದೆ.


Click it and Unblock the Notifications











