ಹೀಗಿದೆ ನೋಡಿ ಪ್ರಿನ್ಸ್-ಯುವಿಕಾ ಮದುವೆಯ ಆಹ್ವಾನ ಪತ್ರಿಕೆ.!
Recommended Video

ಕನ್ನಡದ 'ಮಳೆಯಲಿ ಜೊತೆಯಲಿ' ಸೇರಿದಂತೆ ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿರುವ ಚೆಲುವೆ ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಮದುವೆ ದಿನಾಂಕ ನಿಗದಿ ಆಗಿದೆ.
ಅಕ್ಟೋಬರ್ 12 ರಂದು ಯುವಿಕಾ ಚೌಧರಿ-ಪ್ರಿನ್ಸ್ ನರುಲಾ ಮದುವೆ ಮುಂಬೈನಲ್ಲಿ ನಡೆಯಲಿದೆ. ಅಕ್ಟೋಬರ್ 10 ರಂದು ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ನೆರವೇರಲಿದ್ದು, ಅಂದಿನಿಂದಲೇ ಸೆಲೆಬ್ರೇಷನ್ ಜೋರಾಗಿರಲಿದೆ.
ರಿಯಾಲಿಟಿ ಶೋಗಳ ಸರದಾರ ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿಯ ಮದುವೆಯ ಆಹ್ವಾನ ಪತ್ರಿಕೆಯ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಫ್ಯಾನ್ಸಿ ಡಿಸೈನರ್ ಬಾಕ್ಸ್ ಹಾಗೂ ಫೋಟೋ ಫ್ರೇಮ್ ಹೊಂದಿರುವ ಮದುವೆಯ ಆಹ್ವಾನ ಪತ್ರಿಕೆ ಯುವಿಕಾ ಚೌಧರಿಯ ಇಚ್ಛೆಯಂತೆ ತಯಾರು ಮಾಡಲಾಗಿದೆ. ಸದ್ಯಕ್ಕೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಮದುವೆಗಾಗಿ ಆಹ್ವಾನ ನೀಡುವಲ್ಲಿ ಪ್ರಿನ್ಸ್ ಹಾಗೂ ಯುವಿಕಾ ಬಿಜಿಯಾಗಿದ್ದಾರೆ.
ಅಂದ್ಹಾಗೆ, ಈ ಜೋಡಿ ನಡುವೆ ಪ್ರೀತಿ ಮೊಳಕೆಯೊಡೆದಿದ್ದು 'ಬಿಗ್ ಬಾಸ್' ಮನೆಯಲ್ಲಿ. 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಪ್ರಿನ್ಸ್ ನರುಲಾ ಹಾಗೂ ಯುವಿಕಾ ಚೌಧರಿ ಸ್ಪರ್ಧಿಸಿದ್ದರು. ಇಲ್ಲೇ ಇಬ್ಬರಿಗೂ ಪ್ಯಾರ್ ಆಯ್ತು. ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ಕಾತರರಾಗಿದ್ದಾರೆ.

ಎಂಟಿವಿ ರೋಡೀಸ್, ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ ಹಾಗೂ 'ಬಿಗ್ ಬಾಸ್' ರಿಯಾಲಿಟಿ ಶೋಗಳನ್ನ ಗೆದ್ದಿರುವ ಪಂಜಾಬಿ ಹುಡುಗ ಪ್ರಿನ್ಸ್ ನರುಲಾ ಇದೀಗ 'ನಾಗಿನ್' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











