'ಬಿಗ್ ಬಾಸ್' ಪ್ರೇಮಿಗಳ ಬಗ್ಗೆ ಹೀಗೊಂದು ಸುಳ್ಳು ಸುದ್ದಿ, ಸುಳ್ಳು ಸಾಕ್ಷಿ.!
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಮಳೆಯಲಿ ಜೊತೆಯಲಿ' ಸಿನಿಮಾದಲ್ಲಿ ಮಿಂಚಿದ್ದ ನಟಿ ಯುವಿಕಾ ಚೌಧರಿ ನಿಮಗೆ ನೆನಪಿದ್ದಾರೆ ತಾನೇ.? ಕನ್ನಡ, ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದಿರುವ ಯುವಿಕಾ ಚೌಧರಿ 'ಬಿಗ್ ಬಾಸ್-9' ಕಾರ್ಯಕ್ರಮದಲ್ಲಿ ಸ್ಪರ್ಧಿ ಆಗಿ ಭಾಗವಹಿಸಿದ್ದರು.
ಇದೇ 'ಬಿಗ್ ಬಾಸ್-9' ಕಾರ್ಯಕ್ರಮದಲ್ಲಿ ನಟಿ ಯುವಿಕಾ ಚೌಧರಿಗೆ ಸಿಕ್ಕವರು ಪ್ರಿನ್ಸ್ ನರುಲಾ. ಅದಾಗಲೇ, 'ಎಂ.ಟಿ.ವಿ ರೋಡೀಸ್' ಹಾಗೂ 'ಸ್ಪ್ಲಿಟ್ಸ್ ವಿಲ್ಲಾ' ರಿಯಾಲಿಟಿ ಶೋಗಳನ್ನು ಗೆದ್ದು ಬಂದಿದ್ದ ಪ್ರಿನ್ಸ್ ನರುಲಾ, ಯುವಿಕಾ ಚೌಧರಿಯ ಮನವನ್ನೂ ಗೆದ್ದು ಬಿಟ್ಟರು.
'ಬಿಗ್ ಬಾಸ್' ಮನೆಯಲ್ಲಿ ಬಂಧಿ ಆಗಿರುವಾಗಲೇ, ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ನಡುವೆ ಪ್ರೇಮಾಂಕುರವಾಯಿತು. ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಈ ಜೋಡಿ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಯುವಿಕಾ-ಪ್ರಿನ್ಸ್ ವಿವಾಹ ಮಹೋತ್ಸವ ನಡೆಯಲಿದೆ.
ಹೀಗಿರುವಾಗಲೇ, ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ, ಅದೆಲ್ಲ ನಮ್ಮ ಮದುವೆಯದ್ದಲ್ಲ ಎಂದು ಜೋಡಿ ಸ್ಪಷ್ಟನೆ ನೀಡಿದೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಲೀಕ್ ಆಗಿದೆ ಪ್ರಿನ್ಸ್-ಯುವಿಕಾ ವೆಡ್ಡಿಂಗ್ ಕಾರ್ಡ್
ಸೋಷಿಯಲ್ ಮೀಡಿಯಾದಲ್ಲಿ ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ವೆಡ್ಡಿಂಗ್ ಕಾರ್ಡ್ ಹರಿದಾಡುತ್ತಿದೆ. ಈ ವೆಡ್ಡಿಂಗ್ ಕಾರ್ಡ್ ಪ್ರಕಾರ, ಅಕ್ಟೋಬರ್ 12, 2018 ರಂದು ಮುಂಬೈನ ಜುಹುನಲ್ಲಿರುವ ಸನ್ ಅಂಡ್ ಸ್ಯಾಂಡ್ ಹೋಟೆಲ್ ನಲ್ಲಿ ಯುವಿಕಾ-ಪ್ರಿನ್ಸ್ ಮದುವೆ ನಡೆಯಲಿದೆ.

ಸುಳ್ಳು ಸುದ್ದಿ ಎಂದ ಯುವಿಕಾ-ಪ್ರಿನ್ಸ್
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್ ನಮ್ಮದಲ್ಲ. ''ಇದು ಫೇಕ್ ಕಾರ್ಡ್, ಫೇಕ್ ನ್ಯೂಸ್'' ಎಂದು ಯುವಿಕಾ ಚೌಧರಿ ಹಾಗೂ ಪ್ರಿನ್ಸ್ ನರುಲಾ ಸ್ಪಷ್ಟ ಪಡಿಸಿದ್ದಾರೆ.

ನಮ್ಮ ವೆಡ್ಡಿಂಗ್ ಕಾರ್ಡ್ ಅಲ್ಲ.!
''ಇದು ನನ್ನ-ಪ್ರಿನ್ಸ್ ಮದುವೆಯ ಆಹ್ವಾನ ಪತ್ರಿಕೆ ಅಲ್ಲ. ಯಾರೋ, ಇದನ್ನ ಬೇಕು ಅಂತ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ'' ಎಂದಿದ್ದಾರೆ ನಟಿ ಯುವಿಕಾ ಚೌಧರಿ.

ಮದುವೆ ದಿನಾಂಕ ನಿಗದಿ ಆಗಿಲ್ಲ.!
''ಇದೇ ವರ್ಷ ನಾನು-ಪ್ರಿನ್ಸ್ ಮದುವೆ ಆಗುತ್ತಿರುವುದು ನಿಜ. ಆದ್ರೆ, ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಮದುವೆಗೆ ತಯಾರಿ ನಡೆಯುತ್ತಿದೆ. ಡೇಟ್ ಫೈನಲ್ ಆದ ಕೂಡಲೆ ನಿಮಗೆ ತಿಳಿಸುವೆ'' ಅಂತಾರೆ ನಟಿ ಯುವಿಕಾ ಚೌಧರಿ.


Click it and Unblock the Notifications











