ಮಳೆಯಲಿ ಜೊತೆಯಲಿ ನಟಿಯ ದಾಂಪತ್ಯದಲ್ಲಿ ಬಿರುಕು ? ಬಿಗ್ ಬಾಸ್‌ನಲ್ಲಿ ಅರಳಿದ ಪ್ರೀತಿ, ವಿಚ್ಛೇದನದಲ್ಲಿ ಅಂತ್ಯ?
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಚಿತ್ರರಂಗದ ತಾರೆಯರ ಸಂಬಂಧಕ್ಕೆ ಕೈಗನ್ನಡಿ ಹಿಡಿಯಲು ಸಾಮಾಜಿಕ ಜಾಲತಾಣವೊಂದೇ ಸಾಕು. ಲವ್-ಬ್ರೇಕಪ್ ಇಷ್ಟೇ ಯಾಕೆ ಅನೈತಿಕ ಸಂಬಂಧದ ಕುರುಹು ಈಗ ಹಲವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಸಿಕ್ಕಿ ಬಿಡುತ್ತೆ. ಯಾರನ್ನು ಯಾರು ಫಾಲೋ ಮಾಡುತ್ತಿದ್ದಾರೆ, ಯಾರ ಪೋಸ್ಟ್‌ಗೆ ಯಾರು ಲೈಕ್ ಒತ್ತಿದ್ದಾರೆ ಎನ್ನುವುದೇ ಬ್ರೇಕಿಂಗ್ ನ್ಯೂಸ್ ಆಗಿರುವ ಕಾಲ ಇದು.
ಇಂತಹ ಕಾಲದಲ್ಲಿ ಗಂಡ ಹೆಂಡ್ತಿ ಪರಸ್ಪರ ಅನ್‌ಫಾಲೋ ಮಾಡಿದರೆ, ಇಬ್ಬರ ಸಂಬಂಧ ಮುರಿದು ಬಿದ್ದಿದೆ ಎಂದೇ ಅರ್ಥ. ಮೌನಿ ರಾಯ್-ಸೂರಜ್ ನಂಬಿಯಾರ್.. ಹನ್ಸಿಕಾ ಮೋಟ್ವಾನಿ -ಸೊಹೇಲ್ ಖತುರಿಯಾ.. ನಾಗ ಚೈತನ್ಯ-ಸಮಂತಾ.. ಹೀಗೆ ಹಲವರ ದಾಂಪತ್ಯ ಜೀವನ ಹಳಿ ತಪ್ಪಿರುವ ಸುಳಿವು ಹಲವರಿಗೆ ಸಿಕ್ಕಿದ್ದು ಇವರ ಇನ್‌ಸ್ಟಾಗ್ರಾಮ್ ಮೂಲಕವೇ. ಸದ್ಯ ಈ ಸಾಲಿನಲ್ಲಿ ಯುವಿಕಾ ಚೌಧರಿ ಮತ್ತು ಪ್ರಿನ್ಸ್ ನರುಲಾ ಕೂಡ ಸೇರುತ್ತಾರಾ..? ಎನ್ನುವ ಆತಂಕ ಹಲವರನ್ನು ಈಗ ಕಾಡುತ್ತಿದೆ.

ಹೌದು, ಯುವಿಕಾ ಚೌಧರಿ.. ಅಂದಕಾಲತ್ತಿಲ್‌ನ ಬಾಲಿವುಡ್ ಚೆಲುವೆ. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ''ಮಳೆಯಲಿ ಜೊತೆಯಲಿ'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದ ಸುಂದರಿ. ತಮ್ಮ 25 ವರ್ಷಗಳ ವೃತ್ತಿ ಬದುಕಿನಲ್ಲಿ ಹತ್ ಹತ್ರ 23 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಯುವಿಕಾ ಕಿರುತೆರೆಯಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ''ಅಸ್ತಿತ್ವ-ಏಕ್ ಪ್ರೇಮ್ ಕಹಾನಿ''.. ''ಡರ್ ಸಬ್ಕೋ ಲಗ್ತಾ ಹೈ'' ಸೇರಿ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ಧಾರೆ.
ಇಂಥಾ ಯುವಿಕಾ ಚೌಧರಿ 2015ರಲ್ಲಿ ''ಬಿಗ್ ಬಾಸ್'' ಮನೆಗೆ ಹೋಗಿದ್ದರು. ಸ್ಫರ್ಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸೀಸನ್‌ನಲ್ಲಿ ಪ್ರಿನ್ಸ್ ನರುಲಾ ಕೂಡ ಭಾಗವಹಿಸಿದ್ದರು. ಈ ಪ್ರಿನ್ಸ್ ನರುಲಾಗೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದೇ ಕೆಲಸ. ರಿಯಾಲಿಟಿ ಶೋ ಮೂಲಕವೇ ಸೆಲೆಬ್ರಿಟಿ ಸ್ಥಾನಕ್ಕೇರಿದವರು ಇವರು.
ಹೀಗಾಗಿ ಇವರನ್ನು ರಿಯಾಲಿಟಿ ಶೋ ಸ್ಟಾರ್ ಎಂದೇ ಹಲವರು ಕರೆಯುತ್ತಾರೆ. ಈ ರಿಯಾಲಿಟಿ ಶೋ ಸ್ಟಾರ್ ಪ್ರಿನ್ಸ್ ನರುಲಾ ಮೇಲೆ ಯುವಿಕಾಗೆ ''ಬಿಗ್ ಬಾಸ್'' ಮನೆಯಲ್ಲಿ ಯುವಿಕಾಗೆ ಪ್ರೇಮಾಂಕುರವಾಗಿತ್ತು.ಆ ನಂತರ ಮನೆಯಿಂದ ವಿಜೇತರಾಗಿ ಹೊರ ಬಂದ ಪ್ರಿನ್ಸ್ ನರುಲಾ 2018ರಲ್ಲಿ ಯುವಿಕಾ ಜೊತೆ ಮದುವೆಯಾದರು. 2024ರಲ್ಲಿ ಇಬ್ಬರು ತಮ್ಮ ಮಗುವನ್ನು ಸ್ವಾಗತಿಸಿದರು. ಅಕ್ಟೋಬರ್ 19-2024ರಂದು ಜನಿಸಿದ ಹೆಣ್ಣು ಮಗುವಿಗೆ ಎಕ್ಲೀನ್ ಎಂದು ಇಬ್ಬರು ಹೆಸರನ್ನಿಟ್ಟಿದ್ದಾರೆ. ಆದರೆ ಈಗ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಮತ್ತದೇ ಸೋಶಿಯಲ್ ಮೀಡಿಯಾ ಆಕ್ಟಿವಿಟಿ
ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡ ಜೋಡಿ
ಯುವಿಕಾ ಚೌಧರಿ ಮತ್ತು ಪ್ರಿನ್ಸ್ ನರುಲಾ ಪರಸ್ಪರ ಅನ್‌ಫಾಲೋ ಮಾಡಿಕೊಂಡಿರುವ ವಿಚಾರದ ಸದ್ಯ ಇವರ ಅಭಿಮಾನಿಗಳ ಗಮನಕ್ಕೆ ಬಂದಿದೆ. ಇವರ ಈ ನಡೆ ಸದ್ಯ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕೆಲವರ ಆತಂಕಕ್ಕೆ ಕೂಡ ಕಾರಣವಾಗಿದೆ. ಇಬ್ಬರ ವಿಚ್ಚೇದನದ ಸುದ್ದಿಗೆ ಕೂಡ ಕಾರಣವಾಗಿದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಹೆಸರು ಟ್ರೆಂಡಿಂಗ್‌ನಲ್ಲಿದೆ. 8 ವರ್ಷದ ಸಾಂಸಾರಿಕ ಜೀವನದ ನಂತರ ಇಬ್ಬರು ಡಿವೋರ್ಸ್‌ನತ್ತ ಮುಖ ಮಾಡಿದ್ಧಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಆದರೆ, ಗಮನಿಸಬೇಕಾದ ಅಂಶ ಅಂದರೆ ಎಲ್ಲರಂತೆ ಇಬ್ಬರು ಜೊತೆಗಿರುವ ತಮ್ಮ ಫೋಟೊ ಮತ್ತು ವಿಡಿಯೋಗಳನ್ನು ಡಿಲೀಟ್ ಅಥವಾ ಹೈಡ್ ಮಾಡಿಲ್ಲ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿನ ಈ ಒಂದೇ ಒಂದು ಬದಲಾವಣೆಯನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
ಹಿಂದೆಯೂ ಕೇಳಿ ಬಂದಿತ್ತು ಡಿವೋರ್ಸ್ ಸುದ್ದಿ
ಯುವಿಕಾ ಮತ್ತು ಪ್ರಿನ್ಸ್ ನರುಲಾ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಹೊಸದೇನು ಅಲ್ಲ. ಕಳೆದ ವರ್ಷ ಕೂಡ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪೂರಕವಾಗಿ ಯುವಿಕಾ ಗಂಡನ ಮನೆಯಿಂದ ಹೊರ ಬಂದಿದ್ದರು. ಆದರೆ, ಆ ನಂತರ ನೀಡಿದ ಸಂದರ್ಶನವೊಂದರಲ್ಲಿ ವಿಚ್ಚೇದನದ ವದಂತಿಯನ್ನು ತಳ್ಳಿ ಹಾಕಿದ್ದರು.
E ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಯುವಿಕಾ, ನಾನು ನನ್ನ ಗಂಡನ ಮನೆಯಿಂದ ಹೊರ ಬಂದಿದ್ದು ನಿಜಾ ಹಾಗಂಥ ನಮ್ಮ ನಡುವೆ ಸಮಸ್ಯೆ ಇದೆ ಎಂದು ಅರ್ಥ ಅಲ್ಲ ಎಂದು ಹೇಳಿದ್ದರು. ಗಂಡ-ಹೆಂಡತಿ ಅಂದ ಮೇಲೆ ಸರಸ-ವಿರಸ ಇದ್ದಿದ್ದೇ ಎಂದಿರುವ ಯುವಿಕಾ ಚೌಧರಿ ನಮ್ಮ ಮನೆಯನ್ನು ನಾವು ರೀನೋವೆಟ್ ಮಾಡುತ್ತಿದ್ದೇವೆ, ಅಲ್ಲಿ ಕೆಲಸ ನಡೆಯುತ್ತಿದೆ ಹೀಗಾಗಿ ನಾನು ನನ್ನ ಮಗಳ ಜೊತೆ ನಾನು ನನ್ನ ತಾಯಿಯ ಮನೆಯಲ್ಲಿ ಬಂದು ವಾಸ ಮಾಡುತ್ತಿದ್ದೇನೆ ಎಂದಿದ್ದರು.
ಇಷ್ಟೇ ಅಲ್ಲ ನನ್ನ ಸಾಂಸಾರಿಕ ಬದುಕಿನ ಬಗ್ಗೆ, ವ್ಯೆಯಕ್ತಿಕ ಜೀವನದ ಬಗ್ಗೆ ಯಾರಿಗೂ ಸ್ಪಷ್ಟನೆ ನೀಡುವ ಅವಶ್ಯಕತೆ ನನಗೆ ಇಲ್ಲ ಹೀಗಾಗಿಯೇ ನಾನು ಈ ಗಾಳಿ ಸುದ್ದಿಗಳಿಗೆ ಇಲ್ಲಿಯವರೆಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಕೂಡ ಯುವಿಕಾ ಚೌಧರಿ ಹೇಳಿದ್ದರು.
ಈ ಬಾರಿಯ ವದಂತಿಯೂ ಸುಳ್ಳಾಗುತ್ತಾ..? ನಿಜಾ ಆಗುತ್ತಾ..?
ಈಗ ವರ್ಷದ ನಂತರ ಮತ್ತೆ ಯುವಿಕಾ ಚೌಧರಿ ಮತ್ತು ಪ್ರಿನ್ಸ್ ನರುಲಾ ದಾಂಪತ್ಯ ಜೀವನ ಮುನ್ನೆಲೆಗೆ ಬಂದಿದೆ. ಚರ್ಚೆಗೀಡಾಗಿದೆ. ಈ ಬಾರಿ ಹಬ್ಬಿರುವ ವದಂತಿ ಸುಳ್ಳಾಗುತ್ತಾ..? ಅಥವಾ ನಿಜಕ್ಕೂ ದಾಂಪತ್ಯ ಜೀವನ ಮುರಿದು ಬೀಳುತ್ತಾ ಎನ್ನುವುದಕ್ಕೆ ಉತ್ತರ ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರು, ಸದ್ಯ ಇಬ್ಬರು ತಮ್ಮ ಕುರಿತು ಹಬ್ಬಿರುವ ಈ ಸುದ್ದಿಗೆ ಪ್ರತಿಕ್ರಿಯೆಯನ್ನು ನೀಡಿಲ್ಲ. ಹೀಗಾಗಿ ಅಧಿಕೃತ ಮಾಹಿತಿ ಹೊರಬರುವವರೆಗೆ ಈ ವಿಷಯವನ್ನು ಊಹಾಪೋಹದ ದೃಷ್ಟಿಯಿಂದಲೇ ನೋಡುವುದು ಸೂಕ್ತ.
🚨 Trouble in paradise? 👀
— 𝐃𝐚𝐢𝐥𝐲 𝐃𝐫𝐚𝐦𝐚 𝐃𝐨𝐬𝐞 (@The_Drama_Dose) July 4, 2026
Fans have noticed that #PrinceNarula and #YuvikaChaudhary are no longer following each other on Instagram, sparking fresh speculation online. Is it just a social media cleanup or is there more to the story? 🤔
What do you think? 👇#PrinceNarula… pic.twitter.com/buDY9bd7Rt


Click it and Unblock the Notifications