ಬಿಗ್ ಬಾಸ್ ಪ್ರಣಯ ಪಕ್ಷಿಗಳ ಮದುವೆ ದಿನಾಂಕ ನಿಗದಿ
ಬಿಗ್ ಬಾಸ್ ಲವ್ ಬರ್ಡ್ಸ್ ಗಳಾದ ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಅವರ ಎಂಗೇಜ್ ಮೆಂಟ್ ಆದ ಬೆನ್ನಲ್ಲೆ ಈಗ ಮದುವೆ ದಿನಾಂಕ ಕೂಡ ನಿಗದಿಯಾಗಿದೆ.
ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಇಬ್ಬರು ಪರಸ್ಪರ ಸ್ಪರ್ಧಿಗಳಾಗಿದ್ದರು. ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿ, ಈಗ ದಾಂಪತ್ಯಕ್ಕೆ ಬಂದಿದೆ. ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನ ನಟಿ ಯುವಿಕಾ ಚೌಧರಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಯುವಿಕಾ, ನಿಶ್ಚಿತಾರ್ಥ ಕಾರ್ಯಕ್ರಮ ನನಗೂ ಸರ್ಪ್ರೈಸ್. ನನಗೆ ಯಾರೂ ಹೇಳಿಲ್ಲ. ಪ್ರಿನ್ಸ್ ಮತ್ತು ನಮ್ಮ ಮನೆಯವರು ಸೀಕ್ರೆಟ್ ಮಾತನಾಡಿಕೊಂಡಿದ್ದರು. ನನ್ನನ್ನ ಡಿನ್ನರ್ ಅಂತ ಕರೆದುಕೊಂಡು ಹೋದರು. ಆದ್ರೆ, ಅಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಕೇವಲ ಇದು ಕುಟುಂಬದವರು ಮಾತ್ರ ಭಾಗಿಯಾಗಿದ್ದರು ಎಂದು ತಿಳಿಸಿದರು.

ಇನ್ನು ಮದುವೆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಜೋಡಿ ಇದೇ ವರ್ಷ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ವರ್ಷಾಂತ್ಯಕ್ಕೆ ಇವರಿಬ್ಬರ ಮದುವೆ ನಡೆಯಲಿದೆ.
ಅಂದ್ಹಾಗೆ, ನಟಿ ಯುವಿಕಾ ಚೌಧರಿ ಕನ್ನಡದಲ್ಲೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











