For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ v/s ಶಾಹಿದ್ ಕಪೂರ್; ಬಾಕ್ಸ್ ಆಫೀಸ್ ನಲ್ಲಿ ಮೆಗಾ ವಾರ್

  |

  2021ರಲ್ಲಿ ಸಿನಿಮಾ ಸಂಭ್ರಮ ಜೋರಾಗಿದೆ. ಈ ವರ್ಷ ರಿಲೀಸ್ ಆಗಬೇಕಿದ್ದ ಸಿನಿಮಾಗಳ ಜೊತೆಗೆ ಕಳೆದ ವರ್ಷ ರಿಲೀಸ್ ಆಗದೆ ಪೋಸ್ಟ್ ಪೋನ್ ಆಗಿದ್ದ ಸಿನಿಮಾಗಳು ಸಹ ತೆರೆಗೆ ಬರುತ್ತಿದೆ. ಹಾಗಾಗಿ ಈ ವರ್ಷ ರಿಲೀಸ್ ಆಗುವ ಸಿನಿಮಾಗಳ ಸಂಖ್ಯೆ ಜಾಸ್ತಿ ಇದೆ ಎಂದರೂ ತಪ್ಪಾಗಲ್ಲ.

  ಹೆಚ್ಚು ಸಂಖ್ಯೆಯ ಸಿನಿಮಾಗಳ ಜೊತೆಗೆ ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗುವ ಮೂಲಕ ಬಾಕ್ಸ್ ಆಫೀಸ್ ವಾರ್ ಗೂ ಕಾರಣವಾಗುತ್ತಿದೆ. ವಿಶೇಷ ಎಂದರೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ 5 ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಒಟ್ಟಿಗೆ ಘೋಷಣೆ ಮಾಡಿ ಅಚ್ಚರಿ ಮೂಡಿಸಿದೆ. ಇದರಲ್ಲಿ ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ಕೂಡ ಒಂದು.

  ಒಂದೇ ದಿನ 5 ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ ಯಶ್ ರಾಜ್ ಫಿಲಂಸ್ಒಂದೇ ದಿನ 5 ಚಿತ್ರಗಳ ಬಿಡುಗಡೆ ದಿನಾಂಕ ಘೋಷಿಸಿದ ಯಶ್ ರಾಜ್ ಫಿಲಂಸ್

  ಪೃಥ್ವಿರಾಜ್ ಸಿನಿಮಾ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟ ಶಾಹಿದ್ ಕಪೂರ್ ನಟನೆಯ ಬಹುನಿರೀಕ್ಷೆಯ ಜರ್ಸಿ ಸಿನಿಮಾ ಬಿಡುಗಡೆಯ ದಿನದಂತೆ ತೆರೆಗೆ ಬರುತ್ತಿದೆ. ಈ ಎರಡು ಸಿನಿಮಾಗಳು ಈ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತಿದೆ.

  ಕೊರೊನಾ ಕಾರಣದಿಂದ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾಗಿದೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷೆಯ ಪೃಥ್ವಿರಾಜ್ ಸಿನಿಮಾ ಜರ್ಸಿ ಜೊತೆ ಚಿತ್ರಮಂದಿರಕ್ಕೆ ಬರ್ತಿರುವುದು ಜರ್ಸಿ ತಂಡಕ್ಕೆ ಆತಂಕ ತಂದಿದೆ. ಈ ಎರಡು ಸಿನಿಮಾಗಳ ಜೊತೆ ಅಪ್ನೆ-2 ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

  ಇನ್ನೂ ಮೂಲಗಳ ಪ್ರಕಾರ ಅಲಿಯಾ ಭಟ್ ನಟನೆಯ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಕೂಡ ಅದೇ ದಿನ ತೆರೆಗೆ ಬರಲು ಸಿದ್ಧವಾಗಿತ್ತು ಎನ್ನಲಾಗಿದೆ. ಆದರೀಗ ಪ್ರಮುಖ ಸಿನಿಮಾಗಳು ದೀಪಾವಳಿಗೆ ತೆರೆಗೆ ಬರುತ್ತಿರುವ ಕಾರಣ ಗಂಗೂಬಾಯಿ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

  ಪೃಥ್ವಿರಾಜ್ ಮತ್ತು ಜರ್ಸಿ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇರುವ ಸಿನಿಮಾಗಳಾಗಿರುವುದರಿಂದ ಬಾಕ್ಸ್ ಆಫೀಸ್ ವಾರ್ ಪಕ್ಕ ಎನ್ನುತ್ತಿದ್ದಾರೆ ಸಿನಿಮಾ ವಿಶ್ಲೇಶಕರು. ಇನ್ನು ಅಭಿಮಾನಿಗಳು ಯಾವ ಸಿನಿಮಾಗೆ ಮಣೆ ಹಾಕಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Akshay kumar starrer Prithviraj movie clash with Shahid kapoor's Jersey at the box office this deepawali.
  Thursday, February 18, 2021, 19:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X