'ರಾಜಕುಮಾರ' ನಟಿ ಪ್ರಿಯಾ ಆನಂದ್ ದುಡ್ಡಿನ ಫೋಟೋಶೂಟ್ ವೈರಲ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ರಾಜಕುಮಾರ ಚಿತ್ರದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಮತ್ತೊಮ್ಮೆ ಅಣ್ಣಾವ್ರ ಮಗನ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಪಡೆದುಕೊಂಡಿದ್ದಾರೆ.
ಪುನೀತ್ ನಟಿಸುತ್ತಿರುವ ಜೇಮ್ಸ್ ಸಿನಿಮಾಗೂ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ನಡುವೆ ಪ್ರಿಯಾ ಆನಂದ್ ಅವರ ಹೊಸ ಫೋಟೋಶೂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
2000 ರೂಪಾಯಿಗಳ ನೋಟಿನ ಹಾರವನ್ನು ಕೊರಳಿಗೆ ಹಾಕಿಕೊಂಡಿರುವ ಪ್ರಿಯಾ ಆನಂದ್ ಫೋಟೋಗಳು ವೈರಲ್ ಆಗಿದೆ. ಅಂದ್ಹಾಗೆ, ಇದು ಹಿಂದಿಯ 'ಎ ಸಿಂಪಲ್ ಮರ್ಡರ್' ವೆಬ್ ಸಿರೀಸ್‌ನ ಫೋಟೋಗಳು ಎಂದು ತಿಳಿದು ಬಂದಿದೆ.

ಸೋನಿ ಲಿವ್ ಚಾಹಿನಿಯಲ್ಲಿ ಪ್ರದರ್ಶನ ಕಾಣಲಿರುವ 'ಎ ಸಿಂಪಲ್ ಮರ್ಡರ್' ಚಿತ್ರದ ಫೋಟೋಶೂಟ್ ಚಿತ್ರಗಳು. ಬ್ಲಾಕ್ ಕಾಮಿಡಿ ಜಾನರ್ ಸಿನಿಮಾ ಇದಾಗಿದ್ದು, ಸಚಿನ್ ಪತಾಕ್ ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ಮಿರ್ಚಿ ಶಿವ, ಯೋಗಿ ಬಾಬು ನಟಿಸಿರುವ ಸುಮೋ ಚಿತ್ರದಲ್ಲಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಈ ಕಡೆ ಸ್ಯಾಂಡಲ್ ವುಡ್‌ನಲ್ಲಿ ಪುನೀತ್ ಜೊತೆ ಜೇಮ್ಸ್ ಹಾಗೂ ಶಿವರಾಜ್ ಕುಮಾರ್ ಜೊತೆ ಆರ್‌ಡಿಎಕ್ಸ್ ಚಿತ್ರದಲ್ಲಿ ಪ್ರಿಯಾ ನಟಿಸಲಿದ್ದಾರೆ.


Click it and Unblock the Notifications











