ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಕಣ್ಸನ್ನೆ ಹುಡುಗಿಗೆ ಇನ್ನೊಂದು ಆಸೆ ಇದೆಯಂತೆ.!

By Bharath Kumar

Recommended Video

ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಪ್ರಿಯಾಗೆ ಇನ್ನೊಂದು ಆಸೆ ಇದೆಯಂತೆ | Filmibeat Kannada

ಕೇವಲ ಕಣ್ಸನ್ನೆ ಮೂಲಕ ಇಡೀ ಇಂಟರ್ ನೆಟ್ ವಲಯದಲ್ಲೇ ಸಂಚಲನ ಸೃಷ್ಟಿಸಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಒಂದೇ ಒಂದು ಟೀಸರ್ ಮೂಲಕ ರಾತ್ರೋರಾತ್ರಿ 'ಸ್ಟಾರ್' ಪಟ್ಟ ಮುಡಿಗೇರಿಸಿಕೊಂಡ ಈಕೆ ಈಗ ಸಾಮಾಜಿಕ ಜಾಲತಾಣದ ಫೆವರೇಟ್.

ಈಕೆಯ ಫೋಟೋಗಳು, ಒರು ಆದಾರ್ ಲವ್ ಚಿತ್ರದ ವಿಡಿಯೋಗಳು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ. ಇಷ್ಟೆಲ್ಲಾ ಸದ್ದು ಮಾಡಿದ್ದ ನಟಿಯ ವಿರುದ್ಧ ಕೆಲವಯ ಮುಸ್ಲಿಂ ಸಮುದಾಯ ಎಫ್.ಐ.ಆರ್ ದಾಖಲು ಮಾಡಿದ್ದರು. ಅದನ್ನ ಸುಪ್ರೀಂಕೋರ್ಟ್ ತಡೆ ನೀಡಿತ್ತು.

ಹೀಗೆ, ಪಡ್ಡೆ ಹುಡುಗರಿಂದ ಹಿಡಿದು, ಯುವಕರು, ಮುದುಕರು ಎಲ್ಲರ ನಿದ್ದೆ ಕದ್ದಿರುವ ಪ್ರಿಯಾಗೆ ಇನ್ನೊಂದು ಆಸೆ ಇದೆಯಂತೆ. ಹೀಗಂತಾ ಸಂದರ್ಶನವೊಂದರಲ್ಲಿ ಪ್ರಿಯಾ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಆಸೆ ಏನು? ಮುಂದೆ ಓದಿ.....

ಬಾಲಿವುಡ್ ಸಿನಿಮಾ ಮಾಡ್ಬೇಕು

ಬಾಲಿವುಡ್ ಸಿನಿಮಾ ಮಾಡ್ಬೇಕು

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ 'ಒರು ಆದಾರ್ ಲವ್' ಚಿತ್ರದ ಟೀಸರ್ ಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಲು ಪ್ರಿಯಾಗೆ ಆಫರ್ ನೀಡಲಾಗುತ್ತಿದೆಯಂತೆ. ಈ ಮಧ್ಯೆ ಪ್ರಿಯಾ ಕೂಡ ಬಾಲಿವುಡ್ ನಲ್ಲಿ ನಟಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ.

ಶಾರೂಖ್ ಜೊತೆ ಅಭಿನಯಿಸಬೇಕು

ಶಾರೂಖ್ ಜೊತೆ ಅಭಿನಯಿಸಬೇಕು

ಬಾಲಿವುಡ್ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂದು ಹೇಳಿಕೊಂಡಿರುವ ಪ್ರಿಯಾ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಜೊತೆ ಅಭಿನಯಿಸಬೇಕು ಎಂಬ ಬಯಕೆ ಹೊರಹಾಕಿದ್ದಾರೆ.

ರಣ್ವೀರ್ ಮತ್ತು ಸಿದ್ಧಾರ್ಥ್ ಕಂಡ್ರೆ ಇಷ್ಟ

ರಣ್ವೀರ್ ಮತ್ತು ಸಿದ್ಧಾರ್ಥ್ ಕಂಡ್ರೆ ಇಷ್ಟ

ಶಾರೂಖ್ ಖಾನ್ ನಂತರ ರಣ್ವೀರ್ ಸಿಂಗ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆಯೂ ತೆರೆ ಹಂಚಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಕಂಡ್ರೆ ಲವ್

ದೀಪಿಕಾ ಪಡುಕೋಣೆ ಕಂಡ್ರೆ ಲವ್

ಪದ್ಮಾವತ್ ರಾಣಿ ದೀಪಿಕಾ ಪಡುಕೋಣೆ ಅಂದ್ರೆ ಕಣ್ಸನ್ನೆ ಹುಡುಗಿಗೆ ಒಂಥರಾ ಲವ್ ಅಂತೆ. ಹಿಂದಿ ಸಿನಿ ಲೋಕದ ನಟಿಮಣಿಯರಲ್ಲಿ ದೀಪಿಕಾ ಅವರನ್ನ ಅತಿ ಹೆಚ್ಚು ಇಷ್ಟ ಪಡ್ತಾರಂತೆ.

More from Filmibeat

English summary
Priya Prakash Varrier saying that she'd love to work in Bollywood and it's her dream to star alongside Shahrukh Khan, Ranveer Singh and Sidharth Malhotra. She said about receiving offers from Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X