ದುಡ್ಡೇ ದೊಡ್ಡಪ್ಪ ; ಬಾಲಿವುಡ್ ಮಂದಿ 'ತಿರುಪೆ ಶೋಕಿ'ಯ ಕಥೆ ಹೇಳಿದ ಕೃಷ್ಣ ಸುಂದರಿ ಪ್ರಿಯಾಮಣಿ..!

ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಮೊನ್ನೆ ಕೃಷ್ಣ ಸುಂದರಿ ಪ್ರಿಯಾಮಣಿ ಕಿಡಿ ಕಾರಿದ್ದು ಇದೇ ವಿಚಾರಕ್ಕೆ.

ಹೌದು, ನೀವು ಗಮನಿಸಿರಬಹುದು. ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಹಿಂದಿ ಉದ್ಯಮದವರ ದಿನ ನಿತ್ಯದ ಚಲನ-ವಲನ, ಹಾವ-ಭಾವ ಎಲ್ಲವೂ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಾವೆ. ಅವರು ಕುಂತರೂ ಸುದ್ದಿ. ನಿಂತರೂ ಸುದ್ದಿ.

Priyamani attacks Bollywood PR tactics

ಕಸರತ್ತು ಮಾಡಲು ಜಿಮ್ ಗೆ ತೆರಳಿದರೂ ಕೂಡ ಅಲ್ಲಿಯೂ ಇವರಿಗೆ ಎದುರಾಗುವುದು ಕ್ಯಾಮರಾಗಳೇ. ಇನ್ನೂ ರೆಸ್ಟೋರೆಂಟ್ ಗೆ ಹೋದರು ಕೂಡ ಕ್ಯಾಮರಾ ಇವರನ್ನೇ ಹಿಂಬಾಲಿಸುತ್ತೆ. ಪಾಪ ಅವರು ತುತ್ತು ಇನ್ನೂ ತಿಂದೇ ಇರಲ್ಲ, ಆಗಲೇ ರಪಕ್ ಅಂತ ವಿಡಿಯೋ ಯುಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುತ್ತೆ.

ಈ ಕಾರಣಕ್ಕೆ ಇದೆಲ್ಲ ಹೇಗೆ ಸಾಧ್ಯ ಎಂಬ ಜಿಜ್ಞಾಸೆ ಬಹುತೇಕರಲ್ಲಿದೆ. ಬಾಲಿವುಡ್ ಸೆಲೆಬ್ರಿಟಿಗಳು ಓಡಾಡುವ ಜಾಗದಿಂದ ಹಿಡಿದು, ಓಲಾಡುವ ಜಾಗದವರೆಗಿನ ಮಾಹಿತಿ ಕ್ಯಾಮರಾಗೆ ರವಾನೆ ಆಗುವುದು ಹೇಗೆ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಇನ್ನೂ..ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಖಾಸಗಿ ಬದುಕೇ ಇಲ್ಲದಂತಾಗಿದೆಯಲ್ಲ ಎಂಬ ಭಾವನೆ ಬಹುತೇಕರಲ್ಲಿ ಮೂಡಿದ್ದು ಇದೆ. ಆದರೆ.. ಇದೆಲ್ಲವೂ ಪ್ರೀ ಪ್ಲಾನ್ಡ್ ಎಂಬ ವಿಚಾರವನ್ನ ಪ್ರಿಯಾಮಣಿ ಜಗಜ್ಜಾಹೀರು ಮಾಡಿದ್ದಾರೆ.

Priyamani attacks Bollywood PR tactics

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಮಣಿ, ಬಾಲಿವುಡ್ ನವರ ಬದುಕು ತುಂಬಾನೇ ಕೃತಕವಾದದ್ದು ಅಂದಿದ್ದಾರೆ. ದಿನನಿತ್ಯ ನೀವೂ ಹಾಗೂ ನಾವು ನೋಡುವ ವಿಡಿಯೋಗಳೆಲ್ಲವೂ ಪಬ್ಲಿಸಿಟಿಯ ಒಂದು ಭಾಗವೆಂದಿದ್ದಾರೆ.

ಇದಕ್ಕಾಗಿಯೇ ಅಲ್ಲಿ ಅಣಬೆಯಂತೆ ಏಜೆನ್ಸಿಗಳೂ ಹುಟ್ಟಿಕೊಂಡಿವೆ ಎಂದಿರುವ ಪ್ರಿಯಾಮಣಿ, ಅವಶ್ಯಕತೆಯ ಆಧಾರದ ಮೇಲೆ ದರಪಟ್ಟಿಯನ್ನ ನಿಗದಿ ಮಾಡಲಾಗಿರುತ್ತೆ ಎಂದಿದ್ದಾರೆ. ಹಿಂದಿ ಚಿತ್ರರಂಗದ ಅನೇಕ ತಾರೆಯರು, ಇಂಥಹ ಏಜೆನ್ಸಿಗಳನ್ನ ತಲೆ ಮೇಲೆ ಹೊತ್ತು ಮೆರೆಸುತ್ತಿದ್ದಾರೆ ಎಂದಿದ್ದಾರೆ. ಸೋ ಕಾಲ್ಡ್ ಪಾಪರಾಜಿಗಳಿಗೆ ಹಣವನ್ನೂ ಈ ಸೆಲೆಬ್ರಿಟಿಗಳು ಕೊಡ್ತಾರೆ ಎಂದು ಕಿಡಿ ಕಾರಿದ್ದಾರೆ

Priyamani attacks Bollywood PR tactics

ಇನ್ನೂ ಜವಾನ್ ಚಿತ್ರದ ನಂತರ ಅಲ್ಲಿನ ಕಾಸ್ಟಿಂಗ್ ಡೈರೆಕ್ಟರ್ ಒಬ್ಬರು, ನನಗೂ ಈ ಸೇವೆಯ ಮಹತ್ವ ತಿಳಿಸಲು ಬಂದಿದ್ದರು ಎಂದು ಕೂಡ ಹೇಳಿರುವ ಪ್ರಿಯಾಮಣಿ ನಮ್ಮ ಕೆಲಸ ಮಾತನಾಡಬೇಕೆ ಹೊರತು, ನಮ್ಮ ತಮಟೆಯನ್ನ ನಾವೇ ಹೊಡೆಯಬಾರದು ಅಂದಿದ್ದಾರೆ. ತಿರುಪೆ ಶೋಕಿ ಎಲ್ಲ ನನಗೆ ಬೇಡವೆಂದಿದ್ದಾರೆ

ಸದ್ಯಕ್ಕೆ ಪ್ರಿಯಾಮಣಿ ಅವರ ಈ ಅಂತರಂಗದ ನುಡಿ, ಕಿಡಿ ಹಚ್ಚಿಸುವ ಲಕ್ಷಣ ಕಂಡು ಬರುತ್ತಿದೆ. ಪ್ರಿಯಾಮಣಿ ಅವರ ಈ ಹೇಳಿಕೆಗಳಿಂದ ಬಾಲಿವುಡ್ ನವರ ಕಣ್ಣು ಕೆಂಪಾಗಿದೆ. ಯಾಕೆಂದರೆ ಹಿಂದಿ ಚಿತ್ರರಂಗ ಸದಾ ಹೊಗಳಿಕೆಯನ್ನು ಬಯುಸುತ್ತೆ. ಅಂಥದ್ದರಲ್ಲಿ ಮಾಡಿದ ತಪ್ಪನ್ನು ಅಥವಾ ಇದ್ದದ್ದನ್ನು ಇದ್ದ ಹಾಗೆ ಹೇಳಿದಾಗ ಎದೆಗೆ ಒದೆಯಲು ಬರದೇ ಇರುತ್ತಾ..?

More from Filmibeat

English summary
Well Known Actress Priyamani attacks Bollywood PR tactics. Actress shared insights into the intriguing world of Bollywood’s paparazzi culture during the promotion of her upcoming film, Bhama Kalapam 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X