For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಐಟಂ ಖಾತೆ ತೆರೆದ ಪ್ರಿಯಾಮಣಿ

  By Rajendra
  |

  ಕನ್ನಡದಲ್ಲಿ "ಕೋ ಕೋ" ಆಡಿದ ಬಳಿಕ ನಟಿ ಪ್ರಿಯಾಮಣಿ ಈಗ ಬಾಲಿವುಡ್ ನಲ್ಲಿ ಕುಂಟಾಬಿಲ್ಲೆಗೆ ಸಿದ್ಧವಾಗಿದ್ದಾರೆ. ಈ ಹಿಂದೆ ಮಣಿರತ್ನಂ ಅವರ ರಾವಣ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಗೆ ತಂಗಿಯಾಗಿ ಅಭಿನಯಿಸಿದ್ದರು. ಈಗ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಹೆಜ್ಜೆ ಹಾಕುತ್ತಿದ್ದಾರೆ.

  ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ತಮ್ಮ ಸೊಂಟ ಬಳುಕಿಸಿದ್ದಾರೆ. ಈ ಮೂಲಕ ಐಟಂ ಹಾಡಿನ ಖಾತೆಯನ್ನು ಹಿಂದಿ ಚಿತ್ರರಂಗದಲ್ಲಿ ತೆರೆದಂತಾಗಿದೆ. ಸದ್ಯಕ್ಕೆ ಉತ್ತರ ಭಾರತದಲ್ಲಿ ಪಾದ ಊರಲು ಶಾರುಖ್ ಜೊತೆ ಹೆಜ್ಜೆ ಹಾಕಿದ್ದಾರೆ.

  ಈ ಹಾಡು ದಕ್ಷಿಣ ಭಾರತ ಐಟಂ ಹಾಡಿನ ಶೈಲಿಯಲ್ಲಿರುತ್ತದಂತೆ. ಪ್ರಭುದೇವ ಅವರ ಅಣ್ಣ ರಾಜು ಸುಂದರಂ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದ ಕಥಾ ಹಂದರದಲ್ಲಿ ದಕ್ಷಿಣ ಭಾರತದಕ್ಕೂ ಕೊಂಚ ಲಿಂಕ್ ಇದೆಯಂತೆ.

  ಹಾಗಾಗಿ ಚಿತ್ರದ ನಿರ್ದೇಶಕರು ದಕ್ಷಿಣದ ಬೆಡಗಿಯೊಬ್ಬರನ್ನು ಹುಡುಕಿದ್ದರು. ಅವರ ಕಣ್ಣಿಗೆ ಮೊದಲು ಬಿದ್ದವರೇ ನಯನತಾರಾ. ಆಕೆ ನೋ ಎಂಬ ಬಳಿಕ ಪ್ರಿಯಾಮಣಿಗೆ ಗಾಳ ಹಾಕಿದ್ದಾರೆ. ಮೊದಲ ಗಾಳಕ್ಕೆ ಸುಲಭವಾಗಿ ಸಿಕ್ಕಿದ್ದಾರೆ ಪ್ರಿಯಾಮಣಿ.

  ಪ್ರಿಯಾಮಣಿ ಈಗ ಸ್ಲಿಮ್ ಆಗಿದ್ದು ತಮ್ಮ ಸೊಂಟದ ಸುತ್ತಳತೆಯಲ್ಲಿ ಸಿಕ್ಕಾಪಟ್ಟೆ ಬದಲಾಯಿಸಿಕೊಂಡಿದ್ದಾರೆ. ಡುಮ್ಮಗಿದ್ದ ಮೈಯನ್ನು ಅಂಕುಡೊಂಕು ಮಾಡಿಕೊಂಡಿದ್ದಾರೆ. ಬಹುಶಃ ಪ್ರಿಯಾಮಣಿ ಬಾಲಿವುಡ್ ಮಂದಿಗೂ ಇಷ್ಟವಾಗಬಹುದೇನೋ. (ಏಜೆನ್ಸೀಸ್)

  English summary
  South Indian beauty Priyamani has done a catchy item song with Shah Rukh Khan in Rohit Shetty’s Chennai Express. The song has the beat and the rhythm of a typical south dance number, choreographed by Raju Sundaram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X