For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಿಯಾಮಣಿಗೆ 300 ರು. ಕೊಟ್ಟಿದ್ದ ಶಾರುಖ್ ಖಾನ್

  |

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ವಾಣಿಜ್ಯ ಹಾಗೂ ಕಲಾತ್ಮಕ ಎರಡೂ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಇತ್ತೀಚೆಗೆ ಪ್ರಿಯಾಮಣಿಗೆ ನಾಯಕ ನಟಿ ಪಾತ್ರಗಳು ಕಡಿಮೆ ಆಗಿವೆ. ನಿಧಾನಕ್ಕೆ ಅವರು ಪೋಷಕ ಪಾತ್ರಗಳತ್ತ ಹೊರಳಿಕೊಳ್ಳುತ್ತಿದ್ದಾರೆ.

  ದಕ್ಷಿಣ ಭಾರತದ ದೊಡ್ಡ ಸ್ಟಾರ್‌ ನಟರೊಟ್ಟಿಗೆ ನಟಿಸಿರುವ ಪ್ರಿಯಾಮಣಿ ಬಾಲಿವುಡ್‌ನ ಕೆಲ ನಟರೊಂದಿಗೂ ತೆರೆ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದವರು ಬಾಲಿವುಡ್‌ ಬಾದ್‌ಷಾ ಶಾರುಖ್ ಖಾನ್.

  'ಚೆನ್ನೈ ಎಕ್ಸ್‌ಪ್ರೆಸ್' ಸಿನಿಮಾದ ಹಾಡೊಂದರಲ್ಲಿ ಶಾರುಖ್ ಖಾನ್ ಹಾಗೂ ಪ್ರಿಯಾಮಣಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಶಾರುಖ್ ಖಾನ್ ತಮಗೆ 300 ರು. ಹಣ ಕೊಟ್ಟಿದ್ದನ್ನು ಪ್ರಿಯಾಮಣಿ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

  ಹೆಸರಿಗೆ ತಕ್ಕಂತ ವ್ಯಕ್ತಿತ್ವ ಶಾರುಖ್ ಅವರದ್ದು: ಪ್ರಿಯಾಮಣಿ

  ಹೆಸರಿಗೆ ತಕ್ಕಂತ ವ್ಯಕ್ತಿತ್ವ ಶಾರುಖ್ ಅವರದ್ದು: ಪ್ರಿಯಾಮಣಿ

  ''ಮಹಾರಾಷ್ಟ್ರದ ವಾಯಿನಲ್ಲಿ ಐದು ರಾತ್ರಿಗಳ ಕಾಲ ಆ ಹಾಡನ್ನು ನಾವು ಚಿತ್ರೀಕರಿಸಿದೆವು. ಅದೊಂದು ಅದ್ಭುತ ಅನುಭವ. ಸುಮ್ಮನೇ ಶಾರುಖ್ ಅನ್ನು ಬಾಲಿವುಡ್ ಬಾದ್‌ಷಾ ಎಂದು ಕರೆಯುವುದಿಲ್ಲ. ಆ ಹೆಸರಿಗೆ ತಕ್ಕುದಾದ ವ್ಯಕ್ತಿತ್ವವನ್ನು ಶಾರುಖ್ ಹೊಂದಿದ್ದಾರೆ'' ಎಂದಿದ್ದಾರೆ ಪ್ರಿಯಾಮಣಿ.

  ನಮ್ಮನ್ನು ಬಹಳ ಕಾಳಜಿಯಿಂದ ನೋಡಿಕೊಂಡರು: ಪ್ರಿಯಾಮಣಿ

  ನಮ್ಮನ್ನು ಬಹಳ ಕಾಳಜಿಯಿಂದ ನೋಡಿಕೊಂಡರು: ಪ್ರಿಯಾಮಣಿ

  ''ಚಿತ್ರೀಕರಣ ಪ್ರಾರಂಭವಾಗುವ ಒಂದು ದಿನ ಮುಂಚಿತವಾಗಿಯೇ ನಾನು ಅಲ್ಲಿಗೆ ಹೋಗಿ ತಲುಪಿದ್ದೆ. ಶಾರುಖ್ ಸಹ ಇದ್ದರು. ಅಲ್ಲಿಂದ ಐದು ದಿನ ಮುಗಿಯುವವರೆಗೂ ನಮ್ಮೊಂದಿಗೆ ಬಹಳ ಆತ್ಮೀಯವಾಗಿ ವರ್ತಿಸಿದರು. ನಮ್ಮನ್ನೆಲ್ಲ ಬಹಳ ಕಾಳಜಿ ಮಾಡುತ್ತಿದ್ದರು ಶಾರುಖ್ ಖಾನ್'' ಎಂದು ನೆನಪಿಸಿಕೊಂಡಿದ್ದಾರೆ ಪ್ರಿಯಾಮಣಿ.

  ನನಗೆ 300 ರುಪಾಯಿ ನೀಡಿದ್ದರು: ಪ್ರಿಯಾಮಣಿ

  ನನಗೆ 300 ರುಪಾಯಿ ನೀಡಿದ್ದರು: ಪ್ರಿಯಾಮಣಿ

  ''ಬಿಡುವಿನ ಸಮಯದಲ್ಲಿ ನಾವುಗಳು 'ಕೌನ್ ಬನೇಗ ಕರೋಡ್‌ಪತಿ' ಆಡುತ್ತಿದ್ದೆವು. ಆ ಆಟದಲ್ಲಿ ನಾನು ಕೆಲವು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ್ದೆ. ಹಾಗಾಗಿ ನನಗೆ 300 ರು.ಗಳನ್ನು ಶಾರುಖ್ ಖಾನ್ ಕೊಟ್ಟಿದ್ದರು. ಆ 300 ರು. ಈಗಲೂ ನನ್ನ ಬಳಿ ಹಾಗೆಯೇ ಇದೆ'' ಎಂದಿದ್ದಾರೆ ಪ್ರಿಯಾಮಣಿ.

  ಎಂಟು ಸಿನಿಮಾಗಳು ಬಿಡುಗಡೆಗೆ ತಯಾರು

  ಎಂಟು ಸಿನಿಮಾಗಳು ಬಿಡುಗಡೆಗೆ ತಯಾರು

  ಬೆಂಗಳೂರಿನ ಚೆಲುವೆ ಪ್ರಿಯಾಮಣಿ ನಟನೆ ಆರಂಭಿಸಿದ್ದು ಮಾತ್ರ 2003ರಲ್ಲಿ ಬಿಡುಗಡೆ ಆದ ತೆಲುಗಿನ 'ಯವರೀ ಆಟಗಾಡು' ಸಿನಿಮಾ ಮೂಲಕ. 'ಪರುತ್ತಿವೀರನ್' ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ಪ್ರಿಯಾಮಣಿ. ಕನ್ನಡಕ್ಕೆ ತುಸು ತಡವಾಗಿ 2009ರಲ್ಲಿ ಬಿಡುಗಡೆ ಆದ 'ರಾಮ್' ಸಿನಿಮಾದ ಮೂಲಕ ಕಾಲಿಟ್ಟರು. ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಪ್ರಿಯಾಮಣಿ ನಟಿಸಿರುವ ತೆಲುಗು, ಕನ್ನಡ, ತಮಿಳಿನ ಒಟ್ಟು ಎಂಟು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  English summary
  Actress Priyamani remembers Sharukh Khan gave her 300 rs. She said we use to play KBC on set in that time he gave me money for winning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X