ಅಜಯ್ ದೇವಗನ್ ಚಿತ್ರಕ್ಕೆ ನಾಯಕಿಯಾದ ಪ್ರಿಯಾಮಣಿ!
ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿರುವ ತಾನಾಜಿ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ದೀಪಿಕಾ ಪಡುಕೋಣೆಯ ಚಪಾಕ್ ಸಿನಿಮಾವನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್ ನಲ್ಲೂ ನೂರು ಕೋಟಿ ಗಳಿಸಿ ಮುನ್ನುಗ್ಗುತ್ತಿದೆ.
ಈ ಸಿನಿಮಾದ ಬಳಿಕ ಅಜಯ್ ದೇವಗನ್ ಅಭಿಯಿಸುತ್ತಿರುವ ನಿರೀಕ್ಷೆಯ ಚಿತ್ರ ಮೈದಾನ್. ಪುಟ್ ಬಾಲ್ ಕುರಿತ ಈ ಚಿತ್ರ ಈಗಾಗಲೇ ಆರಂಭವಾಗಿದ್ದು, ಬಿಟೌನ್ನಲ್ಲಿ ಕುತೂಹಲ ಹೆಚ್ಚಿಸಿದೆ.
ಇದೀಗ, ಮೈದಾನ್ ಚಿತ್ರಕ್ಕೆ ಪ್ರಿಯಾಮಣಿ ಎಂಟ್ರಿಯಾಗಿದ್ದು, ಅಜಯ್ ದೇವಗನ್ ಗೆ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಪ್ರಿಯಾಮಣಿ ಮತ್ತೊಮ್ಮೆ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇತ್ತೀಚಿಗಷ್ಟೆ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಪ್ರಸಾರವಾಗಿದ್ದು 'ದಿ ಫ್ಯಾಮಿಲಿ ಶೋ' ವೆಬ್ ಸಿರೀಸ್ ನಲ್ಲಿ ಪ್ರಿಯಾಮಣಿ ನಟಿಸಿದ್ದರು. ಕಂಗನಾ ನಟಿಸುತ್ತಿರುವ ತಲೈವಿ ಚಿತ್ರದಲ್ಲಿ ಪ್ರಿಯಾಮಣಿ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಂದ್ಹಾಗೆ, ಈ ಚಿತ್ರವನ್ನು ರಾಷ್ಟ್ರಪ್ರಶಸ್ತಿ ನಿರ್ದೇಶಕ ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ. ನವೆಂಬರ್ 27 ರಂದು ಮೈದಾನ್ ಬಿಡುಗಡೆಯಾಗುತ್ತಿದೆ.


Click it and Unblock the Notifications