ಹೊಸ ಮನೆ ಖರೀದಿಸಿದ ಪ್ರಿಯಾಂಕಾ ದಂಪತಿ: ಬೆಲೆ ಕೇಳಿದರೆ ಅಚ್ಚರಿ ಪಡುತ್ತೀರಿ

ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಬಳಿ ಸಿನಿಮಾಗಳಿಲ್ಲದಿದ್ದರು ಆಗಾಗ ಸದ್ದು ಮಾಡುತ್ತಲೆ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಸುದ್ದಿ ಮಾಡುತ್ತಿರುವ ಪ್ರಿಯಾಂಕಾ ಈಗ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಪ್ರಿಯಾಂಕಾ ಈ ಬಾರಿ ಎಲ್ಲರ ಗಮನ ಸೆಳೆದಿರುವುದು ದುಬಾರಿ ಮನೆಯ ವಿಚಾರದಲ್ಲಿ.

ಪ್ರಿಯಾಂಕಾ ಮತ್ತು ನಿಕ್ ದಂಪತಿ ಹೊಸ ಮನೆ ಖರೀದಿ ಮಾಡಿದ್ದಾರೆ. ಈ ಮನೆಯ ಬೆಲೆ ಕೇಳಿದರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಹೌದು, ಪ್ರಿಯಾಂಕಾ ಹೊಸ ಮನೆಯ ಬೆಲೆ ಬರೋಬ್ಬರಿ 144 ಕೋಟಿ. ಇಬ್ಬರ ಈ ಕನಸಿನ ಐಷಾರಾಮಿ ಮನೆ ಲಾಸ್ ಏಂಜಲೀಸ್ ನಲ್ಲಿದೆ.

ಈ ಐಷಾರಾಮಿ ಮನೆಯಲ್ಲಿ 7 ಬೆಡ್ ರೂಮ್ ಗಳು, 11 ಸ್ನಾನದ ಕೋಣೆಗಳು ಇದೆಯಂತೆ. ಜೊತೆಗೆ ಹೊರಾಂಗಣ ತುಂಬ ವಿಸ್ತಾರವಾಗಿದ್ದು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆಯಂತೆ. ಎನ್ಸಿನೋ ಎಂಬ ಎಸ್ಟೇಟ್ ನಲ್ಲಿ ಈ ಮನೆಯಿದೆ. ಇದರ ವಿಸ್ತಾರ 20,000 ಚದರ ಅಡಿ. ನಿಕ್ ಸಹೋದರ ಜೋ. ಜೋನಸ್ ಮನೆ 14.1 ಮಿಲಿಯನ್ ಡಾಲರ್ ಅಂತೆ. ಅವರ ಮನೆ ಚಿಕ್ಕದಾಗಿದ್ದರು ಹೆಚ್ಚು ಬೆಡ್ ರೂಮ್ ಗಳು ಇದೆಯಂತೆ.

Priyanak Chopra And Nick Jonas Purchased Luxury House

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಿದ್ದರು. ಆನಂತರ ಇಬ್ಬರು ಬಾಡಿಗೆ ಮನೆಯಲ್ಲಿಯೆ ವಾಸಿಸುತ್ತಿದ್ದರು. ಕನಸಿನ ಮನೆಗಾಗಿ ಇಬ್ಬರು ಹುಡುಕಾಟ ನಡೆಸುತ್ತಿದ್ದರು. ಸುಮಾರು ವರ್ಷಗಳಿಂದ ಹುಡುಕುತ್ತಿದ್ದ ಪ್ರಿಯಾಂಕಾ ದಂಪತಿಗೆ ಈಗ ಮನೆ ಸಿಕ್ಕಿದ್ದು ಇಬ್ಬರು ಖುಷಿಯಾಗಿದ್ದಾರೆ.

ಈ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ ದಂಪತಿ, ಮೊದಲು ಮನೆ ಖರೀದಿಸಬೇಕು ನಂತರ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದರು. ಇನ್ನು ಪ್ರಿಯಾಂಕಾ 'ಸ್ಕೈ ಈಸ್ ಪಿಂಕ್' ಚಿತ್ರದ ಮೂಲಕ ಬಾಲಿವುಡ್ ಗೆ ವಾಪಸ್ ಬಂದಿದ್ದರು. ಆದರೆ ಆ ನಂತರ ಮತ್ತೆ ಪ್ರಿಯಾಂಕಾ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಪ್ರಿಯಾಂಕಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

English summary
Bollywood actress Priyanak Chopra and Nick Jonas purchased luxury house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X