ಪ್ರಿಯಾಂಕಾ ಜೊತೆ ಭಾರತಕ್ಕೆ ಬಂದ ನಿಕ್ ಜೊನಾಸ್: ಏನು ವಿಶೇಷ.?

By Harshitha

ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವಿನ ಸ್ನೇಹ ಎಕ್ಸ್ಟ್ರಾ ಸ್ಪೆಷಲ್ ಆಗಿದೆ... ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದೆ... ಎಂಬ ಗುಸು ಗುಸು ಹೊಸದೇನಲ್ಲ.

ಈಗಾಗಲೇ ಹಲವಾರು ಕಡೆ ಒಟ್ಟಿಗೆ ಕಾಣಿಸಿಕೊಂಡು ಗಾಸಿಪ್ ಗೆ ಗ್ರಾಸವಾಗಿರುವ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಿನ್ನೆ ಮುಂಬೈನಲ್ಲಿ ಪ್ರತ್ಯಕ್ಷವಾದರು.

ಹೌದು, ಪ್ರಿಯಾಂಕಾ ಛೋಪ್ರಾ ಜೊತೆಗೆ ನಿಕ್ ಜೊನಾಸ್ ನಿನ್ನೆ ಕೈಕೈ ಹಿಡಿದುಕೊಂಡು ಮುಂಬೈ ಹೋಟೆಲ್ ನಿಂದ ಹೊರಬರುವಾಗ ಕ್ಯಾಮರಾ ಕಣ್ಣುಗಳು ಸೆರೆ ಹಿಡಿದಿವೆ. ಫೋಟೋಗಳು ಇಲ್ಲಿವೆ ನೋಡಿರಿ....

ಗೃಹಪ್ರವೇಶ ಸಂಭ್ರಮ

ಗೃಹಪ್ರವೇಶ ಸಂಭ್ರಮ

ಮುಂಬೈನ ಕಡಲ ಕಿನಾರೆಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಒಂದು ಬಂಗಲೆ ಖರೀದಿ ಮಾಡಿದ್ದಾರೆ. ಆ ಬಂಗಲೆಯ ಗೃಹಪ್ರವೇಶ ಸಮಾರಂಭಕ್ಕೆ ನಿಕ್ ಜೊನಾಸ್ ಕೂಡ ಪಾಲ್ಗೊಂಡಿದ್ದರು.

ಕುಟುಂಬಕ್ಕೆ ನಿಕ್ ಜೊನಾಸ್ ಪರಿಚಯ

ಕುಟುಂಬಕ್ಕೆ ನಿಕ್ ಜೊನಾಸ್ ಪರಿಚಯ

ಈಗಾಗಲೇ ಪ್ರಿಯಾಂಕಾ ರನ್ನ ತಮ್ಮ ತಂದೆ-ತಾಯಿಗೆ ನಿಕ್ ಜೊನಾಸ್ ಪರಿಚಯ ಮಾಡಿಕೊಟ್ಟಿದ್ದಾಗಿದೆ. ಇದೀಗ ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ನಿಕ್ ರನ್ನ ಪರಿಚಯಿಸಿದ್ದಾರೆ.

ಕುಟುಂಬದ ಜೊತೆಗೆ ಔತಣಕೂಟ

ಕುಟುಂಬದ ಜೊತೆಗೆ ಔತಣಕೂಟ

ಗೃಹಪ್ರವೇಶ ಸಮಾರಂಭದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರಿಗಾಗಿ ಮುಂಬೈನ ಹೋಟೆಲ್ ವೊಂದರಲ್ಲಿ ಪ್ರಿಯಾಂಕಾ ಛೋಪ್ರಾ ಔತಣಕೂಟ ಏರ್ಪಡಿಸಿದ್ದರು. ಈ ಔತಣಕೂತದಲ್ಲಿ ಪ್ರಿಯಾಂಕಾ ತಾಯಿ ಜೊತೆಗೆ ನಿಕ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮದುವೆ ಮಾತುಕತೆ.?

ಮದುವೆ ಮಾತುಕತೆ.?

ತಮ್ಮ ಪ್ರೀತಿಯ ಬಗ್ಗೆ ಸೀರಿಯಸ್ ಆಗಿರುವ ಜೋಡಿ ಮದುವೆ ಬಗ್ಗೆ ಪ್ಲಾನ್ ಮಾಡುತ್ತಿರಬಹುದು ಎಂಬ ಉಹಾಪೋಹ ಶುರುವಾಗಿದೆ. ಇಷ್ಟೆಲ್ಲ ಗಾಳಿಸುದ್ದಿ ಹರಿದಾಡುತ್ತಿದ್ದರೂ, ನಟಿ ಪ್ರಿಯಾಂಕಾ ಮಾತ್ರ ಯಾವುದಕ್ಕೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.

More from Filmibeat

English summary
Bollywood Actress Priyanka Chopra and Nick Jonas walk hand in hand in Mumbai. Take a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X