ಬಾಡಿಗೆ ತಾಯ್ತನಕ್ಕೆ ಮುಂದಾದ ಪ್ರಿಯಾಂಕಾ ಚೋಪ್ರಾ-ನಿಕ್!
ಹೆಸರಾಂತ ಸಿನಿಮಾ ತಾರೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರ ಮತ್ತು ನಿಕ್ ಜೋನಸ್ ಜೋಡಿ ಕೂಡ ಒಂದು. ಈ ಜೋಡಿ ಮದುವೆ ಆದ ಬಳಿಕ ಅವರಿಗೆ ಸದಾ ಎದುರಾಗುತ್ತಿದ್ದದ್ದು ಒಂದೇ ಪ್ರಶ್ನೆ. ಮಗು ಯಾವಾಗ ಎನ್ನುವುದು. ಅದಕ್ಕೀಗ ಈ ಜೋಡಿ ಉತ್ತರ ಕೊಟ್ಟಿದೆ.
Recommended Video
ಹೌದು ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ತಂದೆ, ತಾಯಿ ಆಗಲು ನಿರ್ಧರಿದ್ದಾರೆ. ಈ ವಿಚಾರವನ್ನು ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟ ಮಾಡಿದ್ದಾರೆ.
ಪ್ರಿಯಾಂಕಾ ನಿಕ್ ಭಾರತದ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ಆದರು. ಬಳಿಕ ಪ್ರಿಯಾಂಕಾ ಭಾರತಕ್ಕಿಂದಲೂ ಹೆಚ್ಚಾಗಿ ವಿದೇಶದಲ್ಲಿಯೇ ವಾಸ ಮಾಡುತ್ತಿದ್ದಾರೆ. ಈಗ ಸಿಹಿ ಸುದ್ದಿ ನೀಡುವ ಮೂಲಕ ಸುದ್ದಿ ಆಗಿದ್ದಾರೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿರುವ ಪ್ರಿಯಾಂಕಾ!
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಪೋಷಕರಾಗುತ್ತಿದ್ದಾರೆ. ಹಾಗಂತ ನಟಿ ಪ್ರಿಯಾಂಕಾ ಚೋಪ್ರಾ ಗರ್ಭಧರಿಸಿಲ್ಲ. ಮಗುವಿಗಾಗಿ ಗರ್ಭಧರಿಸುವುದೂ ಇಲ್ಲ. ಬದಲಿಗೆ ಈ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದು ಕೊಂಡು ತಂದೆ, ತಾಯಿ ಆಗಲು ನಿರ್ಧರಿಸಿದೆ. ಈ ಬಗ್ಗೆ ಪ್ರಿಯಾಂಕಾ ಮತ್ತು ನಿಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇವರಗೆ ಶುಭವಾಗಲಿ ಎಂದು ಅಭಿಮಾನಿ ಬಳಗ ಆಶಿಸುತ್ತಿದೆ.
ಪ್ರಿಯಾಂಕಾ ಬರೆದ ಪೋಸ್ಟ್‌ನಲ್ಲಿ ಏನಿದೆ!
ಇನ್ನು ತಾನು ಬಾಡಿಗೆ ತಾಯ್ತನದ ಮೂಲಕ ತಾಯಿ ಆಗುತ್ತಿರುವ ಬಗ್ಗೆ ಪ್ರಿಯಾಂಕ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಪ್ರಿಯಾಂಕಾ ಹೀಗೆ ಬರೆದು ಕೊಂಡಿದ್ದಾರೆ. "ಬಾಡಿಗೆ ತಾಯ್ತನದ ಮೂಲಕ ನಮ್ಮ ಮಗುವನ್ನು ಸ್ವಾಗತಿಸುತ್ತಿದ್ದೇವೆ ಎನ್ನುವ ವಿಚಾರ ಹಂಚಿಕೊಳ್ಳಲು ಖುಷಿ ಆಗುತ್ತಿದೆ. ಈ ಸಮಯದಲ್ಲಿ ನಮ್ಮ ವೈಯಕ್ತಿಕ ವಿಚಾರವಾಗಿ ಸಮಯ ಕೊಡಿ ಎಂದು ಗೌರವಾನ್ವಿತವಾಗಿ ಕೇಳಿ ಕೊಳ್ಳುತ್ತೇವೆ ". ಎನ್ನುವ ಹೇಳಿಯನ್ನು ತಮ್ಮ ಪೋಸ್ಟ್‌ನಲ್ಲಿ ಪ್ರಿಯಾಂಕಾ ಬರೆದು ಕೊಂಡಿದ್ದಾರೆ.

2018ರಲ್ಲಿ ಮದುವೆ ಆದ ನಿಕ್ ಮತ್ತು ಪ್ರಿಯಾಂಕಾ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರರಂಗದಲ್ಲೂ ಉತ್ತಮ ಹೆಸರು ಮಾಡಿದ್ದಾರೆ. ಅಂತರಾಷ್ಟ್ರೀಯ ಗಾಯಕ ನಿಕ್ ಜೊತೆಗೆ ಪ್ರಿಯಾಂಕ ಚೋಪ್ರ ಅವರು 2018ರಲ್ಲಿ ಮದುವೆ ಆದರು. ಪ್ರಿಯಾಂಕ ಮತ್ತು ನಿಕ್ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಈಗ ಮಗು ಪಡೆದು ತಮ್ಮ ಕುಟುಂಬದನ್ನು ಬೆಳೆಸಲು ಮುಂದಾಗಿದ್ದಾರೆ.
ಇನ್ನು ಈ ಜೋಡಿ ಇತ್ತೀಚೆಗೆ ವಿಚ್ಛೇದನದ ವಿಚಾರದಲ್ಲೂ ಕೂಡ ಸುದ್ದಿ ಆಗಿತ್ತು. ನಟಿ ಪ್ರಿಯಾಂಕಾ ಚೋಪ್ರ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ನಿಕ್ ಹೆಸರನ್ನು ಕೈ ಬಿಟ್ಟಿದ್ದರು. ಹಾಗಾಗಿ ಈ ಜೋಡಿ ವಿಚ್ಛೇದನ ಪಡೆದು ಕೊಳ್ಳುತ್ತದೆ ಎನ್ನುವ ಸುದ್ದಿ ಹಬ್ಬಿತ್ತು. ಬಳಿಕ ಈ ಜೋಡಿ ಫೋಟೊ ಹಂಚಿಕೊಳ್ಳುವ ಮೂಲಕ ಗಾಸಿಪ್‌ಗಳಿಗೆ ಬ್ರೇಕ್ ಹಾಕಿತ್ತು. ಆಗ ಇಬ್ಬರು ಟ್ರೋಲ್‌ಗೂ ತುತ್ತಾಗಿದ್ದರು. ಈಗ ಸಿಹಿ ಸುದ್ದಿ ಹಂಚಿಕೊಂಡಿದೆ ಈ ಜೋಡಿ. ಸಿನಿಮಾ ರಂಗದ ಸ್ನೇಹಿತರಿಂದಲೂ ಕೂಡ ಪ್ರಿಯಾಂಕಾ ನಿಕ್ ಜೋನಸ್‌ಗೆ ಶುಭಾಶಯ ಹರಿದು ಬರುತ್ತಿವೆ.

ಬಾಡಿಗೆ ತಾಯ್ತನದ ಮೊರೆ ಹೋದ ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಶಾರು ಕ್ ದಂಪತಿ!
ಇತ್ತೀಚೆಗೆ ಈ ಬಾಡಿಗೆ ತಾಯ್ತನ ಎನ್ನುವುದು ಸಹಜ ಎನ್ನುವಂತಾಗಿದೆ. ಅದರಲ್ಲೂ ಸಿನಿಮಾ ತಾರೆಯರು ಹೆಚ್ಚಾಗಿ ಬಾಡಿಗೆ ತಾಯ್ತನಕ್ಕೆ ಮುಂದಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾ ತಾರೆಯರು ಈ ಲಿಸ್ಟ್‌ನಲ್ಲಿ ಇದ್ದಾರೆ. ನಟಿ ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಎಕ್ತಾ ಕಪೂರ್, ಆಮಿರ್ ಖಾನ್ ದಂಪತಿ, ಶಾರುಕ್ ಖಾನ್ ದಂಪತಿಗಳು ಕೂಡ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆ.


Click it and Unblock the Notifications











