ಫೋಟೋದಲ್ಲಿ ಮುದ್ದು ಮುದ್ದಾಗಿರುವ ಈ ಪುಟಾಣಿ ಯಾರು ಗೊತ್ತೆ?
ಸೆಲಬ್ರಿಟಿಗಳು ತಮ್ಮ ಮಕ್ಕಳ ಮುಖವನ್ನು ಮಾಧ್ಯಮಗಳಿಗೆ ಮತ್ತು ಸಾರ್ವಜನಿಕವಾಗಿ ಹಮಚಿಕೊಳ್ಳುವುದು ಕಡಿಮೆ. ಸಾರ್ವಜನಿಕವಾಗಿ ಮಕ್ಕಳ ಮುಖ ತೋರಿಸಲು ಕನಿಷ್ಠ ಒಂದು ವರ್ಷವಾದರೂ ದಾಟಬೇಕು ಎಂಬ ನಂಬಿಕೆಯಲ್ಲಿ ಹಲವು ತಾರೆಯರಿದ್ದಾರೆ. ಮತ್ತೆ ಕೆಲವರು ತಮ್ಮ ಮಕ್ಕಳಿಗೆ ಈಗಲೇ ಇಂತಹ ಸೆಲಬ್ರಿಟಿ ಪಟ್ಟ ಬೇಡ ಎನ್ನುವವರು ಇದ್ದಾರೆ.
ಇತ್ತೀಚೆಗೆ ಕ್ರಿಸ್‌ಮಸ್ ವೇಳೆಯಲ್ಲಿ ಮಗಳು ರಹಾ ಮುಖ ತೋರಿಸಿದ್ದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಹಾಗೆ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಮಗಳಿಗೆ ವರ್ಷವಾಗುವವರೆಗೂ ಸಾರ್ವಜನಿಕವಾಗಿ ಮುಖ ತೋರಿಸಿರಲಿಲ್ಲ. ಈಗ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿಯ ಮಗಳು 'ಮಾಲ್ತಿ ಮೇರಿ ಚೋಪ್ರಾ ಜೋನಾಸ್'ಗೆ ಎರಡು ವರ್ಷ ತುಂಬಿದೆ. ಇದೇ ಖುಷಿಯಲ್ಲಿ ದಂಪತಿ ಹಿಂದೂ ದೇವಾಲಯದಲ್ಲಿ ಪೂಜೆ ಮಾಡಿಸಿದ್ದಾರೆ.

ಮಾಲ್ತಿಗೆ ಎರಡು ವರ್ಷ: ಹಿಂದೂ ದೇವಾಲಯದಲ್ಲಿ ವಿಶೇಷ ಪೂಜೆ
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ಪುತ್ರಿ ಮಾಲ್ತಿ ತಮ್ಮ 2 ನೇ ಹುಟ್ಟುಹಬ್ಬವನ್ನು ಕ್ಯಾಪಿಫೋರ್ನಿಯಾದಲ್ಲಿ ಆಚರಿಸಿಕೊಂಡಿದ್ದಾರೆ. ನಿಕ್ ಪುಟ್ಟ ಮಗುವಿನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅಭಿಮಾನಿಗಳನ್ನು ಕೂಡ ಕರೆದಿದ್ದರು. ಇನ್ನು, ನಟಿ ಪ್ರಿಯಾಂಕಾ ಛೋಪ್ರಾ ಕುಟುಂಬವು ತಮ್ಮ ಮುದ್ದು ಮಗಳ ವಿಶೇಷ ದಿನಕ್ಕೆ ವಿಶೇಷ ಪೂಜೆಯನ್ನು ಮಾಡಿಸಿ, ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮಾಲ್ತಿ ಮೇರಿಯ ಹುಟ್ಟುಹಬ್ಬದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ , ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ತಾಯಿ ಡಾ ಮಧು ಚೋಪ್ರಾ ಕೂಡ ಕುಟುಂಬ ಸಮೇತರಾಗಿ ದೇವಾಲಯದಲ್ಲಿ ಪೂಜೆ ಮಾಡಿಸಿ, ದೇವರ ಆಶೀರ್ವಾದ ಪಡೆದಿದ್ದಾರೆ. ಈ ಫೋಟೋಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ಮೆಚ್ಚುಗೆ ವ್ಯಕ್ತವಾಗಿವೆ.

ಪ್ರಿಯಾಂಕಾ ಚೋಪ್ರಾ ಅವರ ಮಗಳು ಮಾಲ್ತಿ
ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಮೊದಲ ಫೋಟೋದಲ್ಲಿ, ಮಾಲ್ತಿ ಮೇರಿ ಚೋಪ್ರಾ ಜೋನಾಸ್ ತನ್ನ ಕುತ್ತಿಗೆಗೆ ದೊಡ್ಡ ಹೂವಿನ ಹಾರ ಹಾಖಿರುವುದು, ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಹಣೆಗೆ ಬೊಟ್ಟು ಇಟ್ಟ ಪುಟ್ಟ ಮಾಲ್ತಿ, ದೇವತೆಯಂತೆ ಕಾಣುತ್ತಿದ್ದರು. ದೇವಸ್ಥಾನದಿಂದ ಬರ್ತ್‌ಡೇ ಪಾರ್ಟಿಗೆ ತೆರಳಿ ಅಲ್ಲೂ ಸಕತ್ ಲುಕ್ ಕೊಟ್ಟಿದ್ದಾರೆ.
ಮಾಲ್ತಿ ಬರ್ತ್‌ಡೇಗೆ ಬೀಚ್ ಪಾರ್ಟಿ
ಪ್ರಿಯಾಂಕಾ ಚೋಪ್ರಾ ಕುಟುಂಬವು ಮಾಲ್ತಿಯ ಹುಟ್ಟುಹಬ್ಬವನ್ನು ಬೀಚ್‌ನಲ್ಲಿ ಆತ್ಮೀಯರೊಂದಿಗೆ ಆಚರಿಸಿದೆ. ಬೀಚ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅವರ ಮತ್ತು ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಫೋಟೋಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಸಕತ್ ವೈರಲ್ ಆಗುತ್ತಿವೆ.
ಫೋಟೋಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, "ಈಕೆ ನಮ್ಮ ಮಿರಾಕಲ್...ಇವಳಿಗೆ 2 ವರ್ಷ" ಎಂದು ಹಾರ್ಟ್ ಎಮೋಜಿ ಜೊತೆಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವಾರು ಸೆಲೆಬ್ರಿಟಿಗಳು ಕಾಮೆಂಟ್ ವಿಭಾಗದಲ್ಲಿ ಮಾಲ್ತಿಗೆ ಶುಭ ಹಾರೈಸಿದ್ದಾರೆ. "ನಮ್ಮ ಪುಟ್ಟ ದೇವತೆಗೆ ಎರಡು ವರ್ಷ" ಎಂದು ನಿಕ್ ಜೋನಸ್ ಕೂಡ ಈ ಹಿಂದೆ ಪೋಸ್ಟ್ ಮಾಡಿದ್ದರು.


Click it and Unblock the Notifications











