For Quick Alerts
  ALLOW NOTIFICATIONS  
  For Daily Alerts

  ಈ ವಿಚಾರದಲ್ಲಿ ಸಲ್ಮಾನ್ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿಸಿದ ಪ್ರಿಯಾಂಕಾ ಮತ್ತು ಸನ್ನಿ ಲಿಯೋನ್

  |

  ಆನ್ ಲೈನ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಭಾರತೀಯ ಸೆಲೆಬ್ರಿಟಿಗಳು ಯಾರು ಎನ್ನುವ ಪಟ್ಟಿ ಬಹಿರಂಗವಾಗಿದೆ. "ಗ್ಲೋಬಲ್ ಡಾಟಾ ಎಸ್ ಇ ಎಂ ರಶ್" ನಡೆಸಿರುವ ಸರ್ವೆಯಲ್ಲಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿ ರಿಲೀಸ್ ಮಾಡಿದೆ. ಈ ಪ್ರಕಾರ ಈ ವರ್ಷ 2020ರಲ್ಲಿ ಜನರು ಹೆಚ್ಚು ಹುಡುಕಿದ ಸೆಲೆಬ್ರಿಟಿ ಅಂದರೆ ಪ್ರಿಯಾಂಕಾ ಚೋಪ್ರಾ.

  Nick Jonas Celebrates First Holi with Priyanka Chopra

  ವಿಶೇಷ ಅಂದರೆ ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಮಹಿಳೆಯರೆ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ಅನ್ನು ಹೆಚ್ಚಾಗಿ ಸ್ಟಾರ್ ನಟರು ಆಳುತ್ತಾರೆ. ಆದರೆ ಇಂಟರ್ ನೆಟ್ ನಲ್ಲಿ ಮಹಿಳೆಯರೆ ಮೇಲುಗೈ ಸಾಧಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನಂತರದ ಸ್ಥಾನದಲ್ಲಿ ಯುವಕರ ಹಾಟ್ ಫೇವರಿಟ್ ಸನ್ನಿ ಲಿಯೋನ್ ಇದ್ದಾರೆ. ಇನ್ನೂ ಮೂರನೆ ಸ್ಥಾನದಲ್ಲಿ ಸಲ್ಮಾನ್ ಖಾನ್ ಜಾಗ ಪಡೆದುಕೊಂಡಿದ್ದಾರೆ. ಮುಂದೆ ಓದಿ..

  ನಂ.1 ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ

  ನಂ.1 ಸ್ಥಾನದಲ್ಲಿ ಪ್ರಿಯಾಂಕಾ ಚೋಪ್ರಾ

  ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ನಲ್ಲಿಯೂ ಖ್ಯಾತಿಗಳಿಸಿ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಈ ವರ್ಷದ ಆನ್ ಲೈನ್ ನಲ್ಲಿ ಹೆಚ್ಚು ಬಾರಿ ಹುಡುಕಲ್ಪಟ್ಟ ನಟಿ ಎನ್ನುವ ಖ್ಯಾತಿ ಗಳಿಸಿದ್ದಾರೆ. ಪ್ರಿಯಾಂಕಾ 39 ಲಕ್ಷ ಬಾರಿ ಪ್ರಿಯಾಂಕಾ ಹುಡುಕಲ್ಪಟ್ಟಿದ್ದಾರೆ. ಈ ವರ್ಷದ ಪ್ರಾರಂಭದಿಂದ ಅಂದರೆ ಜನವರಿ ಯಿಂದ ಏಪ್ರಿಲ್ ವರೆಗಿನ ಸರ್ವೆ ಇದಾಗಿದೆ.

  ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್

  ಎರಡನೇ ಸ್ಥಾನದಲ್ಲಿ ಸನ್ನಿ ಲಿಯೋನ್

  ಇನ್ನೂ ಎರಡನೆ ಸ್ಥಾನದಲ್ಲಿರುವ ನಟಿ ಸನ್ನಿ ಲಿಯೋನ್ ಅವರನ್ನು ಸಹ ಜನ ಸಾಕಷ್ಟು ಬಾರಿ ಸರ್ಚ್ ಮಾಡಿದ್ದಾರೆ. ಭಾರತೀಯ ಯುವಕರ ನಿದ್ದೆಗೆಡಿಸಿರುವ ಸನ್ನಿ ಒಟ್ಟು 31 ಲಕ್ಷ ಬಾರಿ ಹುಡುಕಲ್ಪಟ್ಟಿದ್ದಾರೆ. ನಟಿ ಕತ್ರೀನಾ ಕೈಫ್ ಸಹ ಹೆಚ್ಚು ಹುಡುಕಲ್ಪಟ್ಟ ನಟಿಯರ ಸಾಲಿನಲ್ಲಿ ಮೂರನೆ ಸ್ಥಾನದಲ್ಲಿದೆ. ಕತ್ರೀನಾ ಕೈಫ್ 19 ಲಕ್ಷ ಬಾರಿ ಹುಡುಕಲ್ಪಟ್ಟಿದ್ದಾರೆ.

  3ನೇ ಸ್ಥಾನದಲ್ಲಿ ಸಲ್ಮಾನ್ ಖಾನ್

  3ನೇ ಸ್ಥಾನದಲ್ಲಿ ಸಲ್ಮಾನ್ ಖಾನ್

  3ನೇ ಸ್ಥಾನದಲ್ಲಿ ನಟ ಸಲ್ಮಾನ್ ಇದ್ದಾರೆ. ಸಲ್ಲು 21 ಲಕ್ಷ ಬಾರಿ ಹುಡುಕಲ್ಪಟ್ಟಿದ್ದಾರೆ. ಇನ್ನೂ ಉಳಿದಂತೆ ಪುರುಷ ಸೆಲೆಬ್ರಿಟಿಗಳ ಲಿಸ್ಟ್ ನಲ್ಲಿ ವಿರಾಟ್ ಕೊಹ್ಲಿ 20 ಲಕ್ಷ ಬಾರಿ ಮತ್ತು ಹೃತಿಕ್ ರೋಷನ್ 13 ಲಕ್ಷ ಬಾರಿ ಹುಡುಕಲ್ಪಟ್ಟಿದ್ದಾರೆ. ಇನ್ನೂ ಉಳಿದಂತೆ ರೋಹಿತ್ ಶರ್ಮ, ಅಲ್ಲು ಅರ್ಜುನ್, ಶಾರುಖ್ ಖಾನ್, ವಿಜಯ್ ದೇವರಕೊಂಡ, ಎಂ.ಎಸ್ ದೋನಿ ಮತ್ತು ಮಹೇಶ್ ಬಾಬು ಸಹ ಲಿಸ್ಟ್ ನಲ್ಲಿದ್ದಾರೆ.

  ಹೆಚ್ಚು ಹುಡುಕಲ್ಪಟ್ಟ ಮಹಿಳೆಯರ ಲಿಸ್ಟ್

  ಹೆಚ್ಚು ಹುಡುಕಲ್ಪಟ್ಟ ಮಹಿಳೆಯರ ಲಿಸ್ಟ್

  ಅತೀ ಹೆಚ್ಚು ಹುಡುಕಲ್ಪಟ್ಟ ಮಹಿಳೆಯರ ಲಿಸ್ಟ್ ನಲ್ಲಿ ಪ್ರಿಯಾಂಕಾ, ಸನ್ನಿ ಲಿಯೋನ್ ಮತ್ತು ಕತ್ರೀನಾ ನಂತರ ದೀಪಿಕಾ ಪಡುಕೋಣೆ, ಅಲಿಯಾ ಭಟ್, ದಿಶಾ ಪಟಾನಿ, ಸಾರಾ ಅಲಿ ಖಾನ್, ಕರೀನಾ ಕಪೂರ್, ಶ್ರದ್ಧಾ ಕಪೂರ್ ಸಹ ಲಿಸ್ಟ್ ನಲ್ಲಿ ಇದ್ದಾರೆ.

  English summary
  Bollywood Actress Priyanka Chopra and Sunny Leone are most searched Indian Celebrity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X