For Quick Alerts
  ALLOW NOTIFICATIONS  
  For Daily Alerts

  'ನನಗೆ ಸಿಗಬೇಕಾಗಿದ್ದ ಪಾತ್ರ ಪ್ರಿಯಾಂಕಾ ಚೋಪ್ರಾ ಪಾಲಾಯಿತು'

  |

  ಸಿನಿಮಾ ರಂಗದಲ್ಲಿ ಹೀಗೆ ಆಗುವುದು ಸಾಮಾನ್ಯ. ಯಾರೋ ಮಾಡಬೇಕಿದ್ದ ಪಾತ್ರ ಇನ್ಯಾರದ್ದೋ ಪಾಲಾಗುತ್ತದೆ. ಕೈಬಿಟ್ಟಿದ್ದ ಪಾತ್ರ ಇನ್ಯಾರಿಗೋ ಸಿಕ್ಕು ಆ ಸಿನಿಮಾ ಸೂಪರ್ ಹಿಟ್ ಆದಮೇಲೆ ಅವಕಾಶ ಕೈಬಿಟ್ಟಿದ್ದ ನಟ-ನಟಿಯರು ಕೈ-ಕೈ ಹಿಸುಕಿಕೊಳ್ಳುತ್ತಾರೆ.

  ಇದೀಗ ಬಾಲಿವುಡ್‌ ನಟಿ ಅಮೃತಾ ರಾವ್ ತಾವು ಎದುರಿಸಿದ ಅಂಥಹುದೇ ಸನ್ನಿವೇಶದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್‌ ಸಿನಿಮಾ ಸರಣಿಗಳಲ್ಲಿ ಜನಪ್ರಿಯ ಸರಣಿ 'ಕ್ರಿಶ್'. ಈ ಸರಣಿಯ ನಾಯಕಿ ಪ್ರಿಯಾಂಕಾ ಚೋಪ್ರಾ. ಆದರೆ ಈ ಅವಕಾಶ ಮೊದಲಿಗೆ ಬಂದಿದ್ದು ಅಮೃತಾ ರಾವ್‌ಗೆ.

  'ಕ್ರಿಶ್' ಸಿನಿಮಾ ನಿರ್ದೇಶನ ಮಾಡಿದ, ಹೃತಿಕ್ ರೋಷನ್ ತಂದೆಯೂ ಆದ ರಾಕೇಶ್ ರೋಷನ್ ಅವರೇ ಅಮೃತಾ ಅನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿದ್ದರು. ಅಮೃತಾ ರಾವ್ ಹಾಗೂ ಹೃತಿಕ್ ಅವರ ಫೊಟೊಶೂಟ್ ಸಹ ಮಾಡಿಸಲಾಗಿತ್ತು. ಆದರೆ ಅಂತಿಮ ಸಮಯದಲ್ಲಿ ನಾಯಕಿಯನ್ನು ಬದಲಿಸಲಾಯಿತು.

  ಹೃತಿಕ್ ರೋಷನ್‌ ಮುಂದೆ ಅಮೃತಾ ರಾವ್ ಚಿಕ್ಕವರಾಗಿ ಕಾಣುತ್ತಾರೆ ಎಂಬ ಕಾರಣಕ್ಕೆ ಅಮೃತಾ ರಾವ್ ಅನ್ನು ಕೈಬಿಟ್ಟು ಪ್ರಿಯಾಂಕಾ ಚೋಪ್ರಾಗೆ ಆ ಪಾತ್ರ ನೀಡಲಾಯಿತು. ಹೀಗೆಂದು ಅಮೃತಾ ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

  ವಿಶೇಷವೆಂದರೆ ಪ್ರಿಯಾಂಕಾ ಚೋಪ್ರಾ ಅವರು ಅಮೃತಾ ರಾವ್ ಅವರಿಗಿಂತಲೂ ಒಂದು ವರ್ಷ ಚಿಕ್ಕವರು. ಆದರೆ ಅವರನ್ನು ಅಂತಿಮವಾಗಿ ಹೃತಿಕ್ ಎದುರು ನಟಿಸಲು ಆಯ್ಕೆ ಮಾಡಲಾಯಿತು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿ, ಪ್ರಿಯಾಂಕಾ ಹಾಲಿವುಡ್ ಮಟ್ಟದ ನಟಿಯಾಗಿ ಬೆಳೆದಿದ್ದು ಇತಿಹಾಸ.

  'ಕ್ರಿಶ್ ಸಿನಿಮಾ ನನ್ನ ಕೈತಪ್ಪಿದ್ದಕ್ಕೆ ನನಗೆ ಬೇಸರವೇನೂ ಇಲ್ಲ. ವಿಧಿ ಏನು ಬಯಸಿರುತ್ತದೆಯೋ ಅದೇ ಆಗುತ್ತದೆ ಎಂದು ನಂಬಿದವಳು ನಾನು. ರಾಕೇಶ್ ರೋಷನ್ ಅವರು ನನ್ನ ಅಭಿಮಾನಿಯಾಗಿದ್ದರು. ರೋಷನ್ ಕುಟುಂಬದವರು ನನ್ನ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದರು ಎಂಬುದು ನನಗೆ ಸಾಕು' ಎಂದಿದ್ದಾರೆ ಅಮೃತಾ ರಾವ್.

  ರಾಗಿಣಿಯ ಪಾರ್ಟಿ ಹಾಲ್ ಈಗ ಅಡುಗೆಮನೆಯಾಗಿ ಬದಲಾವಣೆ | Filmibeat Kannada

  2002 ರಲ್ಲಿ ಬಾಲಿವುಡ್ ಪ್ರವೇಶಿಸಿದ ಅಮೃತಾ ರಾವ್ ವೃತ್ತಿ ಬದುಕಿನ ಆರಂಭದಲ್ಲಿಯೇ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದರು. 'ಮೈ ಹೂಂ ನಾ', 'ವಿವಾಹ', 'ಹೇಯ್ ಬೇಬಿ' ತೆಲುಗಿನಲ್ಲಿ ಮಹೇಶ್ ಬಾಬು ಜೊತೆಗೆ 'ಅತಿಥಿ' ಸಿನಿಮಾಗಳಲ್ಲಿ ಅಮೃತಾ ರಾವ್ ನಟಿಸಿದ್ದಾರೆ.

  English summary
  Actress Amritha Rao said i was the first choice for movie Krish opposite Hrithik Roshan we did photoshoot also but role went to Priyanka Chopra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X