ಅಯ್ಯೋ ಬ್ಲೌಸ್ ಎಲ್ಲಿ ಪ್ರಿಯಾಂಕಾ? ನೆಟ್ಟಿಗರಿಂದ 'ದೇಸಿ ಗರ್ಲ್'ಗೆ ಪ್ರಶ್ನೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸದಾ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಮದುವೆಗೂ ಮೊದಲು ಅದ್ಭುತ ಸಿನೆಮಾಗಳನ್ನು ಮಾಡಿಕೊಂಡು, ತಮ್ಮ ಅದ್ಭುತವಾದ ಮೈಮಾಟದಿಂದ ರಸಿಕರ ಮನಗೆದ್ದಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಲಿಯಾಸ್ ಪೀಸೀ, ಮದುವೆಯಾದ ನಂತರ ಸಂಪೂರ್ಣ ಬದಲಾಗಿದ್ದಾರೆ, ಅವರ ವೇಷಭೂಷಣ, ನಡತೆಗಳು ಬದಲಾಗಿವೆ. ಕಾಲಾಯತಸ್ಮೈ ನಮಃ!

ಸದ್ಯ ಪಿಂಕಿಯ ಮತ್ತೊಂದು ಹೊಸ ಅವತಾರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನಿಕ್ ಜಾನ್ ಮದುವೆಯಾದ ನಂತರ ಪೀಸಿ ಬಾಲಿವುಡ್ ಕಡೆ ಮುಖ ಹಾಕಿಲ್ಲ. ಸಿನಿಮಾ ಮಾಡುವುದನ್ನು ಬಿಟ್ಟು ಓಡಾಡಿಕೊಂಡಿರುವ ಪ್ರಿಯಾಂಕಾ ಹೆಚ್ಚಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ನಿಕ್ ಪತ್ನಿ ಇತ್ತೀಚಿಗೆ ಬ್ಲೌಸ್ ಧರಿಸದೆ ಸೀರೆ ಉಟ್ಟು ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಪ್ರಿಯಾಂಕಾ ಕಾಸ್ಟ್ಯೂಮ್ ವಿಚಾರಗಳಿಗೆ ಸದ್ದು ಸುದ್ದಿ ಮಾಡುತ್ತಿದ್ದಾರೆ. ಸದ್ಯ ಬ್ಲೌಸ್ ಹಾಕದೆ ಹಿಪ್ ಹಾಪ್ ಸೀರೆ ಡ್ಯಾನ್ಸ್ ಮಾಡಿರುವ ಪ್ರಿಯಾಂಕಾ ಅವತಾರಕ್ಕೆ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಮುಂದೆ ಓದಿ..

ಬ್ಲೌಸ್ ಎಲ್ಲಿ ಪ್ರಿಯಾಂಕಾ?

ಬ್ಲೌಸ್ ಹಾಕದೆ ಸೀರೆ ಧರಿಸಿ ಪ್ರಿಯಾಂಕಾ ಚೋಪ್ರ ಸಖತ್ ಸ್ಟೆಪ್ ಹಾಕಿದ್ದಾರೆ. ಬೆತ್ತಲೆ ಬೆನ್ನು ತೋರಿಸುತ್ತ ಹಾಟ್ ಆಗಿ ಸೀರೆಯುಟ್ಟಿರುವ ಪ್ರಿಯಾಂಕಾಗೆ, ನೆಟ್ಟಿಗರು ಪ್ರಶ್ನೆಗಳ ಸುರಿಹರಿಸುತ್ತಿದ್ದಾರೆ. 'ಬ್ಲೌಸ್ ಎಲ್ಲಿ ಪ್ರಿಯಾಂಕಾ' ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು 'ಇದು ಭಾರತೀಯ ಸಂಸ್ಕೃತಿ ಅಲ್ಲ' ದೇಸಿ ಗರ್ಲ್ ಅವತಾರ ಇದಲ್ಲ ಎಂದು ಬುದ್ದಿವಾದ ಹೇಳುತ್ತಿದ್ದಾರೆ.

ಇನ್ ಸ್ಟೈಲ್ ಪತ್ರಿಕೆಯ ಫೋಟೋಶೂಟ್

ಇನ್ ಸ್ಟೈಲ್ ಪತ್ರಿಕೆಯ ಫೋಟೋಶೂಟ್

ಪ್ರಿಯಾಂಕಾ ಚೋಪ್ರಾ ಅಲಿಯಾಸ್ ಪ್ರಿಯಾಂಕಾ ಜೋನಾಸ್ ಅವರು, ಇತ್ತೀಚೆಗೆ ಇನ್ ಸ್ಟೈಲ್ ಎಂಬ ಪತ್ರಿಕೆಗೆ ನಡೆಸಲಾಗಿದ್ದ ಫೋಟೋಶೂಟ್ ನಲ್ಲಿ ಬೆತ್ತಲೆ ಬೆನ್ನು ತೋರಿಸುತ್ತಿರುವ ಸೀರೆಯುಟ್ಟು ಪೋಸ್ ನೀಡಿದ್ದಾರೆ. ಫೋಟೋ ಶೂಟ್ ಆದ್ರು ಸಹ ಈ ಚಿತ್ರ ಸಿಕ್ಕಾಪಟ್ಟೆ ಹಾಟ್ ಆಗಿರುವುದು ಮಾತ್ರವಲ್ಲದೆ, ಟ್ರೋಲ್ ಕೂಡ ಆಗಿದೆ.

ಈ ಜಗತ್ತನ್ನು ಕೊಂಚ ಬದಲಿಸಬಯಸುತ್ತೇನೆ

ಈ ಜಗತ್ತನ್ನು ಕೊಂಚ ಬದಲಿಸಬಯಸುತ್ತೇನೆ

ಇಟ್ಸ್ ಗೆಟಿಂಗ್ ಹಾಟ್ ಎಂಬ ಶೀರ್ಷಿಕೆ ನೀಡಲಾಗಿದ್ದು, ಐ ವಾಂಟು ಚೇಂಜ್ ದಿ ವರ್ಲ್ಡ್ ಲಿಟ್ಲ್ ಬಿಟ್ (ನಾನು ಈ ಜಗತ್ತನ್ನು ಕೊಂಚ ಬದಲಿಸಬಯಸುತ್ತೇನೆ) ಎಂದು ಪ್ರಿಯಾಂಕಾ ಸ್ಟೇಟ್ಮೆಂಟ್ ನೀಡಿದ್ದಾರೆ. ಬೇಸಿಗೆಯಲ್ಲಿ ಬೆತ್ತಲಾಗಲೇಬೇಕಾ? ಅದೇನು ಬದಲಾಯಿಸುತ್ತಾರೋ ಆ ದೇವರೇ ಬಲ್ಲ. ಇರಲಿ, ಅವರ ದಿರಿಸು, ಅವರ ಬದುಕು, ಅವರ ಆಯ್ಕೆ.

 ಮೆಟ್ ಗಾಲಾದಲ್ಲಿ ಟ್ರೋಲ್ ಆದ ಪ್ರಿಯಾಂಕಾ

ಮೆಟ್ ಗಾಲಾದಲ್ಲಿ ಟ್ರೋಲ್ ಆದ ಪ್ರಿಯಾಂಕಾ

ಮೆಟ್ ಗಾಲಾ ಶೋ ನಲ್ಲಿ ಬಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ರು. ವಿಚಿತ್ರವಾದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಪಿಗ್ಗಿಯನ್ನು ನೆಟ್ಟಿಗರು ಗೇಲಿ ಮಾಡುತ್ತಿದ್ರು. ಗುಂಗುರು ಕೂದಲು ಮಾಡಿಕೊಂಡು ವಿಚಿತ್ರ ಮೇಕಪ್ ಹಾಕಿ, ಸಿಲ್ವರ್ ಬಣ್ಣದ ಗೌನ್ ನಲ್ಲಿ ಮಿಂಚಿದ್ದ ಪ್ರಿಯಾಂಕಾ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು.

ಕಪ್ಪು ಬಣ್ಣದ ಕಾಸ್ಟ್ಯೂಮ್ ಧರಿಸಿದ್ದ ಪಿಂಕಿ

ಕಪ್ಪು ಬಣ್ಣದ ಕಾಸ್ಟ್ಯೂಮ್ ಧರಿಸಿದ್ದ ಪಿಂಕಿ

ಇತ್ತೀಚಿಗಷ್ಟೆ ಕಪ್ಪು ಬಣ್ಣದ ನೆಕ್ ಲೆಸ್ ಕಾಸ್ಟ್ಯೂಮ್ ಧರಿಸಿ, ಸಖತ್ ಹಾಟ್ ಆಗಿ ನಿಕ್ ಜಾನ್ ಜೊತೆ ಕಾಣಿಸಿಕೊಂಡಿದ್ದ ಪ್ರಿಯಾಂಕಾ ಅವರನ್ನು ಅಲ್ಲಿಯೂ ಬಿಟ್ಟಿರಲಿಲ್ಲ ಟ್ರೋಲ್ ಪೇಜ್. ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ಪದೇ ಪದೇ ಟ್ರೋಲ್ ಆಗುತ್ತಲೆ ಇದ್ದಾರೆ. ಆದ್ರೆ ಇದ್ಯಾವದಕ್ಕು ತಲೆ ಕೆಡಿಸಿಕೊಳ್ಳುತ್ತಿಲ್ಲ. ನಿಜ್ ಜಾನ್ ಜೊತೆ ಆರಾಮಾಗಿ ಸುತ್ತಾಡಿಕೊಂಡು ಕಾಲಕಳೆಯುತ್ತಿದ್ದಾರೆ.

More from Filmibeat

English summary
Bollywood actress Priyanka Chopra bare back picture in a saree become a heavy trolling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X