twitter
    For Quick Alerts
    ALLOW NOTIFICATIONS  
    For Daily Alerts

    ಯಪ್ಪಾ.. ಪ್ರಿಯಾಂಕಾ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಇಷ್ಟೊಂದಾ..

    |

    ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕೆಲ ದಿನಗಳ ಹಿಂದೆ (ಜುಲೈ 17) ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ಬರ್ತ್ ಡೇ ಎಂದ ತಕ್ಷಣ ಕೇಕ್ ಇರಲೇಬೇಕು. ಹೀಗಾಗಿ ಪ್ರೀತಿಯ ಪತ್ನಿಗಾಗಿ ನಿಕ್ ಅದ್ದೂರಿ ಕೇಕ್ ಸಿದ್ಧ ಮಾಡಿಸಿದ್ದರು.

    ಪ್ರಿಯಾಂಕ ಚೋಪ್ರಾ ಬರ್ತ್ ಡೇ ಕೇಕ್ ಬೆಲೆ ಈಗ ಅಚ್ಚರಿಯ ವಿಷಯವಾಗಿದೆ. ಅದಂಹಾಗೆ, ನೀವು ಊಹಿಸಿ.. ಆ ಕೇಕ್ ಬೆಲೆ ಎಷ್ಟಿರಬಹುದು..? 50 ಸಾವಿರ.. 1 ಲಕ್ಷ.. ನೋ.... ಅದರ ಬೆಲೆ ಅದಕ್ಕಿಂತ ಹೆಚ್ಚಿದೆ.

    ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಪ್ರಿಯಾಂಕಾಗೆ ಇಷ್ಟೊಂದು ದುಡ್ಡು ಸಿಗುತ್ತಾ.! ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಪ್ರಿಯಾಂಕಾಗೆ ಇಷ್ಟೊಂದು ದುಡ್ಡು ಸಿಗುತ್ತಾ.!

    ಪ್ರಿಯಾಂಕ ಬರ್ತ್ ಡೇ ಕೇಕ್ ಬೆಲೆ 5 ಸಾವಿರ ಡಾಲರ್. ಅಂದರೆ, 3 ಲಕ್ಷದ 45 ಸಾವಿರ ರೂಪಾಯಿ ಆಗುತ್ತದೆ. ವೆನಿಲಾ ಹಾಗೂ ಚಾಕಲೇಟ್ ಫ್ಲೇವರ್ ನಲ್ಲಿ ಕೇಕ್ ಅನ್ನು ತಯಾರು ಮಾಡಲಾಗಿತ್ತು. ಕೇಕ್ ಐದು ಸ್ಟೆಪ್ಸ್ ಇತ್ತು.

    Priyanka Chopra Birthday Cake Cost Is 3.45 Lakh

    ಪ್ರಿಯಾಂಕ ಹುಟ್ಟುಹಬ್ಬಕ್ಕೆ ಕೆಂಪು ಮತ್ತು ಬಂಗಾರದ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಇದನ್ನು ಮೊದಲೇ ತಿಳಿದಿದ್ದ ನಿಕ್, ಅದೇ ಬಣ್ಣದ ಕೇಕ್ ಗೆ ಬುಕ್ ಮಾಡಿದ್ದರು. ಈ ಕೇಕ್ ಮೂಲಕ ಮಡದಿಗೆ ಸರ್ ಪ್ರೈಸ್ ನೀಡಿದರು. ಮತ್ತೊಂದು ವಿಶೇಷ ಅಂದರೆ, ಈ ಕೇಕ್ ತಯಾರು ಮಾಡಲು ಸತತ 24 ಗಂಟೆ ಆಗಿತಂತೆ.

    Priyanka Chopra Birthday Cake Cost Is 3.45 Lakh

    ಸ್ಮೋಕಿಂಗ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ ಸ್ಮೋಕಿಂಗ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ

    ತಮ್ಮ 37 ನೇ ಹುಟ್ಟುಹಬ್ಬವನ್ನು ಪ್ರಿಯಾಂಕ ಪತಿ ನಿಕ್ ಹಾಗೂ ತಾಯಿ ಮಧು ಜೊತೆಗೆ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕ ಸಂಬಂಧಿ ಪರಿಣಿತಿ ಚೋಪ್ರಾ ಕೂಡ ಭಾಗಿಯಾಗಿದ್ದರು.

    English summary
    Bollywood actress Priyanka Chopra cake cost is 3.45 lakh. Nick Jonas celebrated his wife birthday.
    Tuesday, July 30, 2019, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X