For Quick Alerts
  ALLOW NOTIFICATIONS  
  For Daily Alerts

  ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಇಷ್ಟೊಂದು ಹಣ ಪಡೆಯುತ್ತಾರಾ ಪ್ರಿಯಾಂಕಾ ಚೋಪ್ರಾ?

  |

  ಸೆಲೆಬ್ರಿಟಿಗಳಿಗೆ ಸಾಮಾಜಿಕ ಮಾಧ್ಯಮ ಕೂಡ ಆದಾಯದ ಒಂದು ಮೂಲವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಇನ್ಸ್ಟಾಗ್ರಾಮ್ ಅನೇಕ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಆದಾಯ ತಂದುಕೊಡುತ್ತಿದೆ.

  ಸಿನಿ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಪೋಸ್ಟ್ ಗಳು ಎಲ್ಲವೂ ಉಚಿತವಾಗಿರುವುದಿಲ್ಲ. ಕೋಟಿ ಕೋಟಿ ಹಣ ಪಡೆದು ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿ ಸೈಲೆಂಟ್ ಆಗುತ್ತಾರೆ. ಆದರೆ ಫಾಲೋವರ್ಸ್ ಕಾಮೆಂಟ್, ಲೈಕ್ಸ್, ಟ್ರೋಲ್ ಮಾಡುವ ಮೂಲಕ ಅವರಿಗೆ ಗೊತ್ತಿಲ್ಲದೆ ಸೆಲೆಬ್ರಿಟಿಗಳ ಮೌಲ್ಯವನ್ನು ಜಾಸ್ತಿ ಮಾಡುತ್ತಿದ್ದಾರೆ.

  ಪ್ರಿಯಾಂಕಾ ಚೋಪ್ರಾ ತಾಯಿಯ ಟ್ವೀಟ್‌ಗೆ ಕೆಂಡವಾದ ದೀಪಿಕಾ ಅಭಿಮಾನಿಗಳುಪ್ರಿಯಾಂಕಾ ಚೋಪ್ರಾ ತಾಯಿಯ ಟ್ವೀಟ್‌ಗೆ ಕೆಂಡವಾದ ದೀಪಿಕಾ ಅಭಿಮಾನಿಗಳು

  ಸೋಶಿಯಲ್ ಮೀಡಿಯಾ ಕಂಪನಿ ಹಾಪರ್ ಹೆಚ್ ಕ್ಯೂ, ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಹಣ ಸಂಪಾದನೆ ಮಾಡುವ ಬಾಲಿವುಡ್ ಸ್ಟಾರ್ ಯಾರು ಎನ್ನುವುದನ್ನು ರಿವೀಲ್ ಮಾಡಿದೆ. ಇದರ ಅಂಕಿ ಅಂಶ ನೋಡಿದ್ರೆ ನಿಜಕ್ಕೂ ಅಚ್ಚರಿ ಆಗುತ್ತೆ. ಅಂಕಿ ಅಂಶದ ಪ್ರಕಾರ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣವನ್ನು ಪಡೆಯುತ್ತಿದ್ದಾರೆ.

  ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಬಾಲಿವುಡ್ ನಟಿ. 64 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಿಯಾಂಕಾ ಒಂದು ಪ್ರಮೋಷನಲ್ ಪೋಸ್ಟ್ ಗೆ ಬರೊಬ್ಬರಿ 1.80 ಕೋಟಿ ರೂ. ಪಡೆಯುತ್ತಾರಂತೆ.

  ಇನ್ನೂ ಹೆಚ್ಚು ಹಣ ಪಡೆಯುವ ಸ್ಟಾರ್ ಗಳಲ್ಲಿ ನಟ ಶಾರುಖ್ ಖಾನ್ ಏನು ಹಿಂದೆ ಬಿದ್ದಿಲ್ಲ. ಬ್ರ್ಯಾಂಡ್ ಪ್ರಮೋಷನ್ ಗೆ ಕಿಂಗ್ ಖಾನ್ ಇನ್ಸ್ಟಾಗ್ರಾಮ್ ನಿಂದ 80 ಲಕ್ಷ ರೂ. ಪಡೆಯುತ್ತಿದ್ದಾರೆ. ಇನ್ನು ಅಮಿತಾಬ್ ಕೂಡ ಇನ್ಸ್ಟಾಗ್ರಾಮ್ ನಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಅಮಿತಾಬ್ ಕೂಡ ಒಂದು ಪ್ರಮೋಷನಲ್ ಪೋಸ್ಟ್ ಗೆ 50 ಲಕ್ಷ ರೂ. ಪಡೆಯುತ್ತಾರೆ.

  ನಮ್ಮಂತ ಚಿಕ್ಕ ಆರ್ಟಿಸ್ಟ್ ಗಳನ್ನ ಯಾಕೆ ಟಾರ್ಗೆಟ್ ಮಾಡ್ತೀರಾ? | Chandu Gowda | Filmibeat Kannada

  ಇನ್ನೂ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯರಲ್ಲಿ ಅಲಿಯಾ ಕೂಡ ಒಬ್ಬರು. ಇನ್ಸ್ಟಾಗ್ರಾಮ್ ನಿಂದ ಅತೀ ಹೆಚ್ಚು ಹಣ ಸಂಪಾದಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಅಲಿಯಾ ಭಟ್ ಕೂಡ ಇದ್ದಾರೆ. ಅಲಿಯಾ ಬರೋಬ್ಬರಿ 1 ಕೋಟಿ ರೂ. ಪಡೆಯುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳು ಅತೀ ದೊಡ್ಡ ಮಟ್ಟದ ಹಣವನ್ನು ಸಾಮಾಜಿಕ ಜಾಲತಾಣದಿಂದ ಸಂಪಾದನೆ ಮಾಡುತ್ತಾರೆ.

  English summary
  How much Bollywood Celebs charge for Instagram post?. Priyanka chopra charge 1.80 crore for instagram post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X