For Quick Alerts
  ALLOW NOTIFICATIONS  
  For Daily Alerts

  ಬೀಚ್ ನಲ್ಲಿ ಬಿಕಿನಿ ಧರಿಸಿ ಓಡಾಡುತ್ತಿರುವ ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಇಬ್ಬರು ಬೇಸಿಗೆ ರಜೆಯನ್ನು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಪಿಗ್ಗಿ ಮತ್ತು ನಿಕ್ ಇಬ್ಬರು ಕುಟುಂಬದರ ಜೊತೆ ದಕ್ಷಿಣ ಫ್ಲೋರಿಡಾದ ಮಿಯಾಮಿ ಬೀಚ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

  ಸಿನಿಮಾಗಳಿಂದ ಕೊಂಚ ವಿರಾಮ ತೆಗೆದುಕೊಂಡು ಮಿಯಾಮಿ ಬೀಚ್ ಗೆ ತೆರಳಿರುವ ಪ್ರಿಯಾಂಕಾ ಈಗ ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಕಾರಣ ಬಿಕಿನಿ ಧರಿಸಿ ಪ್ರಿಯಾಂಕಾ ಬೀಚ್ ನಲ್ಲಿ ಓಡಾಡುತ್ತಿರುವ ಫೋಟೋಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಈ ಹಾಟ್ ವೆದರ್ ನಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಜೊತೆಗೆ ಪ್ರಿಯಾಂಕಾ ಕೆಲವು ವಾಟರ್ ಗೇಮ್ ಗಳನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

  'ನಾನು ನಿಕ್ ಜೋನಸ್ ಗೆ ಉತ್ತಮ ಪತ್ನಿ ಅಲ್ಲ': ಪ್ರಿಯಾಂಕಾ ಚೋಪ್ರಾ

  ಕಪ್ಪು ಹಸಿರು ಬಣ್ಣದ ಬಿಕಿನಿ ಧರಿಸಿರುವ ಪ್ರಿಯಾಂಕಾ ಫೋಟೋ ಅಭಿಮಾನಿಗಳ ನಿದ್ದೆಗೆಡಿಸಿವೆ. ಅದೇ ಬಿಕಿನಿ ಮೇಲೆ ಲೈಫ್ ಜಾಕೆಟ್ ಧರಿಸಿ ಪಿಗ್ಗಿ ಜೆಟ್ ಸ್ಕೈ ಆಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿವೆ.

  ಪ್ರಿಯಾಂಕಾ ದಂಪತಿ ಜೊತೆ ನಿಕ್ ಜೋನಸ್ ಫ್ಯಾಮಿಲಿ ಕೂಡ ಮಸ್ತ್ ಎಂಜಾಯ್ ಮಾಡಿದ್ದಾರೆ. ಪತಿಯ ಕುಟುಂಬದ ಜೊತೆ ಜಾಲಿ ಟ್ರಿಪ್ ಮಾಡುತ್ತಿರುವ ಪಿಗ್ಗಿ 'ಈ ದಿನಗಳು ನನ್ನ ಜೀವನದ ಅತ್ಯುತ್ತಮವಾದ ದಿನಗಳು' ಎಂದು ಹೇಳಿಕೊಂಡಿದ್ದಾರೆ.

  ಅಂದ್ಹಾಗೆ ಮಿಯಾಮಿ ಬೀಚ್ ಸೆಲೆಬ್ರೆಟ್ ಬೀಚ್ ಅಂತಾನೆ ಖ್ಯಾತಿ ಗಳಿಸಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸೆಲೆಬ್ರಿಟಿಗಳಿಗೂ ಮತ್ತು ಮಾಡೆಲ್ ಗಳಿಗೂ ಈ ಮಿಯಾಮಿ ಬೀಚ್ ಫೆವರೆಟ್.

  English summary
  Priyanka chopra enjoy holiday with her husband nick jonas. priyanka wear a two piece and walking around miami beach.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X