For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಿಯಾಂಕಾ ಛೋಪ್ರಾಗೆ ಪಿತೃ ವಿಯೋಗ

  By Mahesh
  |

  ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಛೋಪ್ರಾ ಅವರ ತಂದೆ ಡಾ. ಅಶೋಕ್ ಛೋಪ್ರಾ ಅವರು ಸೋಮವಾರ(ಜೂ.10) ಕೊನೆಯುಸಿರೆಳೆದಿದ್ದಾರೆ.

  ಮುಂಬೈನ ಕೋಕಿಲಾಬೇನ್ ಅಂಬಾನಿ ಆಸ್ಪತ್ರೆಯಲ್ಲಿ ಬಹುಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. 2008ರಿಂದ ಕ್ಯಾನ್ಸರ್ ಪೀಡಿತರಾಗಿದ್ದ ಅಶೋಕ್ ಅವರಿಗೆ ವಿವಿಧ ರೀತಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಯಾವುದೇ ರೀತಿ ಚಿಕಿತ್ಸೆ ಫಲಕಾರಿಯಾಗಲಿಲ್ಲ.

  ಕಳೆದ ರಾತ್ರಿಯೇ ವೈದ್ಯರು ಪ್ರಿಯಾಂಕಾ ಛೋಪ್ರಾ ತಾಯಿ ಮಧು ಹಾಗೂ ಸೋದರನಿಗೆ ಅಶೋಕ್ ಅವರ ದೇಹಾರೋಗ್ಯ ಹದಗೆಟ್ಟಿದ್ದು 48 ಗಂಟೆಗಳಲ್ಲಿ ಉಳಿದರೆ ಹೆಚ್ಚು ಎಂದು ಹೇಳಿದ್ದರು ಎಂಬ ಸುದ್ದಿಯಿದೆ.

  ಅಪ್ಪನ ಮಗಳು: ಹಿಂದಿ ಚಿತ್ರರಂಗದ ಬಹು ಜನಪ್ರಿಯ ತಾರೆಯಾಗಿರುವ ಪ್ರಿಯಾಂಕಾ ಛೋಪ್ರಾ ತನ್ನ ಮಾಡೆಲ್ ದಿನಗಳಿಂದ ಇಲ್ಲಿ ತನಕ ಎಲ್ಲಾ ಕಾರ್ಯಕ್ರಮಕ್ಕೆ ತನ್ನ ಅಪ್ಪನನ್ನು ಕರೆ ತರುತ್ತಿದ್ದರು. ವಿಶ್ವಸುಂದರಿ ಪಟ್ಟ, ಬಾಲಿವುಡ್ ನಲ್ಲಿ ಯಶಸ್ಸು ಎಲ್ಲವೂ ನನ್ನ ತಂದೆಗೆ ಅರ್ಪಿತ ಎಂದು ಹಲವು ಬಾರಿ ಘೋಷಿಸಿದ್ದರು. ಅಪ್ಪ ಎಂದರೆ ತುಂಬಾ ಇಷ್ಟಪಡುವ ಪ್ರಿಯಾಂಕಾ ಅವರು ಆಘಾತಕ್ಕೊಳಗಾಗಿದ್ದಾರೆ.

  English summary
  Bollywood actress Priyanka Chopra father Dr Ashok Chopra died at at the Kokilaben Dhirubhai Ambani Hospital, Mumbai, after suffering from cancer for years. As per the recent reports, Priyanka Chopra's dad passed away this afternoon.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X