twitter
    For Quick Alerts
    ALLOW NOTIFICATIONS  
    For Daily Alerts

    ಸಂಭಾವನೆ ವಿಷಯದಲ್ಲಿ ದೀಪಿಕಾ ದಾಖಲೆ ಮುರಿದ ನಟಿ ಪ್ರಿಯಾಂಕಾ.!

    By Harshitha
    |

    'ಪದ್ಮಾವತ್' ಚಿತ್ರಕ್ಕಾಗಿ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದ್ಮೇಲೆ, ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ದೀಪಿಕಾ ಪಡುಕೋಣೆ ಖ್ಯಾತಿ ಪಡೆದರು.

    ಆದ್ರೀಗ, ಬಾಲಿವುಡ್ ಅಂಗಳದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಅತಿ ಹೆಚ್ಚು ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.

    'ಭಾರತ್' ಎಂಬ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಹಾಗೂ ಪ್ರಿಯಾಂಕಾ ಛೋಪ್ರಾ ತೆರೆ ಹಂಚಿಕೊಳ್ಳುತ್ತಿರುವುದು ನಿಮಗೆಲ್ಲ ಗೊತ್ತಿರಲೇಬೇಕು. ಇದೇ ಚಿತ್ರಕ್ಕಾಗಿ ನಟಿ ಪ್ರಿಯಾಂಕಾ ಛೋಪ್ರಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ 12 ಕೋಟಿ.!

    ಬೆಡಗಿ ದೀಪಿಕಾ ಪಡುಕೋಣೆಗೆ ಎಂಟು ಕೋಟಿ ಆಫರ್ಬೆಡಗಿ ದೀಪಿಕಾ ಪಡುಕೋಣೆಗೆ ಎಂಟು ಕೋಟಿ ಆಫರ್

    Priyanka Chopra gets paid Rs 12 crore as Remuneration for Bharat

    ಹೌದು, 'ಭಾರತ್' ಚಿತ್ರಕ್ಕಾಗಿ 12 ಕೋಟಿ ರೂಪಾಯಿ ಸಂಭಾವನೆ ಪಡೆದು ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೆ ಸದ್ಯ ಪ್ರಿಯಾಂಕಾ ಛೋಪ್ರಾ ಪಾತ್ರರಾಗಿದ್ದಾರೆ.

    ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!ದೀಪಿಕಾ ಸಂಭಾವನೆ ಮುಂದೆ ಬಾಲಿವುಡ್ ಸ್ಟಾರ್ ನಟರು ಡಮ್ಮಿ ಆಗೋದ್ರು.!

    ಅಷ್ಟಕ್ಕೂ, 'ಭಾರತ್' ಚಿತ್ರಕ್ಕಾಗಿ ಪ್ರಿಯಾಂಕಾ ಛೋಪ್ರಾ ತಂಡ ಹದಿನಾಲ್ಕು ಕೋಟಿ ರೂಪಾಯಿ ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿತ್ತು. ಆದ್ರೆ, 12 ಕೋಟಿಗೆ ಡೀಲ್ ಫೈನಲ್ ಆಗಿದೆ.

    ಅಂದ್ಹಾಗೆ, 'ಭಾರತ್' ಚಿತ್ರಕ್ಕಾಗಿ ನಟ ಸಲ್ಮಾನ್ ಖಾನ್ ಪಡೆದಿರುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ಪ್ರಿಯಾಂಕಾ ಸಂಭಾವನೆ ಮಾತ್ರ ಎಲ್ಲೆಡೆ ಸದ್ದು ಮಾಡುತ್ತಿದೆ.

    English summary
    Bollywood Actress Priyanka Chopra gets paid Rs 12 crore as Remuneration for Salman Khan starrer 'Bharat'.
    Thursday, June 14, 2018, 18:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X