ಪ್ರಿಯಾಂಕಾ ಪತಿಯ ಹೆಸರು ಕೈ ಬಿಟ್ಟಿದ್ದು ದೊಡ್ಡ ಗಿಮಿಕ್: ಟೀಕೆಗೆ ಗುರಿ ಆದ ಹೊಸ ಪೋಸ್ಟ್!

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಈ ರೀತಿಯಾಗಿ ಸುದ್ದಿ ಹಬ್ಬಲು ಕಾರಣ ಆಗಿದ್ದು ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಹೆಸರಿನೊಂದಿಗೆ ಇದ್ದ ಪತಿ ನಿಕ್‌ ಹೆಸರು ಕೈ ಬಿಟ್ಟಿದ್ದು.

ಈಗ ಮತ್ತೆ ಈ ವಿಚಾರ ಸದ್ದು ಮಾಡುತ್ತಲಿದೆ. ಪ್ರಿಯಾಂಕಾ ಹೀಗೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹಾಗಾಗಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಅಷ್ಟಕ್ಕೂ ಪ್ರಿಯಾಂಕಾ ಪತಿಯ ಹೆಸರು ಕೈ ಬಿಟ್ಟಿದ್ದು ಯಾಕೆ? ಈಗ ಟೀಕೆಗೆ ಗುರಿ ಆಗಿರೋದು ಯಾಕೆ? ಎನ್ನುವುದನ್ನು ಮುಂದೆ ಓದಿ...

ನಿಕ್ ಜೊತೆಗಿನ ಪೋಟೊ ಹಾಕಿ ಟ್ರೋಲ್ ಆದ ಪ್ರಿಯಾಂಕಾ!

ನಿಕ್ ಜೊತೆಗಿನ ಪೋಟೊ ಹಾಕಿ ಟ್ರೋಲ್ ಆದ ಪ್ರಿಯಾಂಕಾ!

ನಟಿ ಪ್ರಿಯಾಂಕಾ ಪತಿ ಹೆಸರನ್ನು ತೆಗೆದು ಹಾಕುತ್ತಲೇ ಈ ಸುದ್ದಿ ಸಾಕಷ್ಟು ವೈರಲ್ ಆಯ್ತು. ಜೊತೆಗೆ ಪ್ರಿಯಾಂಕಾ ಚೋಪ್ರಾ ಕೂಡ ಸಮಂತಾ ರೀತಿಯೇ ಪತಿಯ ಹೆಸರು ಕೈ ಬಿಟ್ಟಿದ್ದಾರೆ, ಹಾಗಾಗಿ ಮುಂದೆ ವಿಚ್ಛೇದನದ ಸುದ್ದಿ ಕೊಡುತ್ತಾರೆ ಎನ್ನಲಾಗಿತ್ತು.

ಈ ವಿಚಾರವಾಗಿ ಪ್ರಿಯಾಂಕಾ ತಾಯಿ ಉತ್ತರಿಸಿದ್ದರು. ಮಗಳ ಸಂಸಾರ ಚೆನ್ನಾಗಿ ಇದೆ ಎಂದಿದ್ದರು. ಆದರೆ ಪ್ರಿಯಾಂಕಾ ಮಾತ್ರ ಈ ವಿಚಾರದ ಬಗ್ಗೆ ತುಟಿ ಬಿಚ್ಚರಲಿಲ್ಲ. ಆದರೆ ಈಗ ಪತಿಯೊಂದಿಗಿನ ಫೊಟೋವನ್ನು ಹಂಚಿಕೊಂಡು ವಿಚ್ಛೇದನ ಗಾಳಿ ಸುದ್ದಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

ಪ್ರಿಯಾಂಕಾ ಜನರನ್ನು ಫೂಲ್ ಮಾಡಿದರಾ?

ಪ್ರಿಯಾಂಕಾ ಜನರನ್ನು ಫೂಲ್ ಮಾಡಿದರಾ?

ಪತಿಯೊಂದಿಗಿನ ಫೊಟೋ ಹಂಚಿಕೊಂಡು ತನ್ನ ವಿಚ್ಛೇದನದ ಸುದ್ದಿಯನ್ನು ತಣ್ಣಗಾಗಿಸಲು ಪ್ರಿಯಾಂಕಾ ಯೋಜನೆ ಹಾಕಿದ್ದರು ಅಂತ ಕಾಣತ್ತೆ. ಆದರೆ ಆಗಿರೋದೇ ಬೇರೆ ಪ್ರಿಯಾಂಕಾ ಫೋಟೋ ಹಾಕುತ್ತಿದ್ದಂತೆಯೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಪ್ರಿಯಾಂಕಾ ಅವರ ಪೋಸ್ಟ್ ಟೀಕೆಗೆ ಗುರಿಯಾಗಿದೆ.

ಯಾಕೆಂದರೆ ಪ್ರಿಯಾಂಕಾ ತನ್ನ ಹೆಸರು ಬದಲಾಯಿಸಿರುವುದು ದೊಡ್ಡ ಗಿಮಿಕ್ ಎಂದು ಸಾಕಷ್ಟು ಜನ ಪ್ರಿಯಾಂಕಾ ಅವರ ಪೋಸ್ಟ್‌ಗೆ ಟೀಕೆ ಮಾಡಿದ್ದಾರೆ. ಪ್ರಚಾರಕ್ಕಾಗಿ ಪ್ರಿಯಾಂಕಾ ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಪ್ರಿಯಾಂಕಾ -ನಿಕ್‌ ಅವರನ್ನೂ ಟ್ರೋಲ್‌ ಮಾಡಲಾಗುತ್ತಿದೆ.

ಪತಿಯ ಪ್ರಚಾರಕ್ಕೆ ಪತಿಯ ಹೆಸರೇ ಕೈ ಬಿಟ್ಟ ನಟಿ?

ಪ್ರಿಯಾಂಕಾ ಚೋಪ್ರಾ ತನ್ನ ಪತಿಯ ಹೆಸರನ್ನು ಕೈ ಬಿಟ್ಟಿದ್ದು ಕೇವಲ ಪ್ರಚಾರಕ್ಕಾಗಿ ಎನ್ನಲಾಗುತ್ತಿದೆ. ಯಾಕೆಂದರೆ ಪ್ರಿಯಾಂಕಾ ತನ್ನ ಹೆಸರು ಬದಲಿಸಿದ ಮರು ದಿನವೇ ಪತಿಯ ಹೊಸ ಕಾರ್ಯಕ್ರಮ 'ಫ್ಯಾಮಿಲಿ ರೋಸ್ಟ್‌'ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಿಕ್‌ ಜೊತೆಗೆ ಅವರ ಇಬ್ಬರು ಸಹೋದರರೂ ಕೂಡ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪತಿಯನ್ನು ರೋಸ್ಟ್‌ ಮಾಡಿದ ಪ್ರಿಯಾಂಕಾ ಹಾಸ್ಯಾಸ್ಪದವಾಗಿ ಕುಟುಂಬದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಇಬ್ಬರು ಈ ಕಾರ್ಯಕ್ರಮದಲ್ಲಿ ಒಟ್ಟಿಗೆ ಇದ್ದಾರೆ ಅವರು ಬೇರೆ ಎನ್ನುವ ಸುದ್ದಿಗಳು ಬಂದಿವೆ.


ಇದು ನಿಕ್ ಮತ್ತು ಅವರ ಸಹೋದರರ ಹೊಸ ಕಾರ್ಯಕ್ರಮ ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಪ್ರಿಯಾಂಕಾ ಪತಿಯ ಹೆಸರು ಬದಲಿಸಿ ಸುದ್ದಿ ಆಗಿದ್ದರು ಎನ್ನಲಾಗುತ್ತಿದೆ. ಹಾಗಾಗಿ ಈಗ ಪ್ರಿಯಾಂಕಾ ಹಾಕಿರುವ ಫೊಟೋಗೆ ಟೀಕೆಗಳು ವ್ಯಕ್ತವಾಗುತ್ತಿವೆ.

ವಿವಾದದ ಬಗ್ಗೆ ತುಟಿ ಬಿಚ್ಚದ ಪ್ರಿಯಾಂಕಾ!

ವಿವಾದದ ಬಗ್ಗೆ ತುಟಿ ಬಿಚ್ಚದ ಪ್ರಿಯಾಂಕಾ!

ಎಲ್ಲೆಡೆ ಪ್ರಿಯಾಂಕಾ ಹೆಸರು ಬದಲಾವಣೆಯ ಬಗ್ಗೆ ಸುದ್ದಿ ಹಬ್ಬಿದ್ದರೂ, ಪ್ರಿಯಾಂಕಾ ಮಾತ್ರ ಆ ಬಗ್ಗೆ ಮಾತನಾಡದೆ ನಿಕ್ ಜೊತೆಗಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ತನ್ನ ಹಾಲಿವುಡ್ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದರು.


ಕಡೆ ಪಕ್ಷ ವಿವಾದದ ಬಗ್ಗೆ ಪ್ರತಿ ಕ್ರಿಯೆಕೊಟ್ಟು ನಂತರ ಪತಿಯೊಂದಿಗಿನ ಫೋಟೊ ಹಾಕಿದ್ದರೆ ಟೀಕೆಗಳಿಂದ ಪಿಗ್ಗಿ ತಪ್ಪಿಸಿ ಕೊಳ್ಳಬಹುದಿತ್ತು. ಆದರೆ ಪ್ರಿಯಾಂಕಾ ಹಾಗೆ ಮಾಡಿಲ್ಲ ಹಾಗಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೊಡ್ಡ ಸೆಲೆಬ್ರೆಟಿ ಆಗಿ ಈ ರೀತಿ ಗಿಮಿಕ್ ಬಳಸಿದ್ದಾರೆ ಎನ್ನುವುದರ ಜೊತೆಗೆ, ಹಲವರು ಇದು ಚೀಪ್ ಗಿಮಿಕ್ ಎಂದು ಕಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Is Priyanka Chopra Getting Trolled For Fooling Netizens,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X