For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಛೋಪ್ರಾ ಬಳಿ ಇರುವ ಹೀಲ್ಸ್ ಕಲೆಕ್ಷನ್ ಬಗ್ಗೆ ಗೊತ್ತಾದ್ರೆ ಕಣ್ಣರಳಿಸುತ್ತೀರಾ.!

  |

  ಪ್ರಿಯಾಂಕಾ ಛೋಪ್ರಾ ಈಗ ಬಾಲಿವುಡ್ ನಟಿ ಮಾತ್ರ ಅಲ್ಲ.. ಆಕೆ ಗ್ಲೋಬಲ್ ಐಕಾನ್ ಮತ್ತು ಫ್ಯಾಶನ್ ಡೀವಾ. ಹಾಲಿವುಡ್ ನಲ್ಲಿಯೇ ಹೆಚ್ಚು ಮಿನುಗುತ್ತಿರುವ ಪ್ರಿಯಾಂಕಾ ಛೋಪ್ರಾ ಫ್ಯಾಶನ್ ಸೆನ್ಸ್ ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಅಭಿಮಾನಿಗಳಿದ್ದಾರೆ.

  ರೆಡ್ ಕಾರ್ಪೆಟ್ ಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಪ್ರಿಯಾಂಕಾ ಛೋಪ್ರಾ ಧರಿಸುವ ಫುಟ್ ವೇರ್ ಮೇಲೆ ಕೆಲವರ ಕಣ್ಣು ಬೀಳಬಹುದು. ಸೂಪರ್ ಸ್ಟೈಲಿಶ್ ಹೀಲ್ಸ್ ಗಳನ್ನೇ ಪ್ರಿಯಾಂಕಾ ಛೋಪ್ರಾ ಸದಾ ಧರಿಸುತ್ತಾರೆ. ಪ್ರಿಯಾಂಕಾ ಛೋಪ್ರಾ ಬಳಿ ಅಂದಾಜು ಎಷ್ಟು ಹೀಲ್ಸ್ ಇರಬಹುದು ಅಂತ ಊಹೆ ಮಾಡಿ... 10.. 20..?

  ಒಂದು ವರದಿಯ ಪ್ರಕಾರ, ಹಾಲಿವುಡ್ ನಲ್ಲಿ ಬೇಡಿಕೆ ಕಂಡುಕೊಂಡಿರುವ ಪ್ರಿಯಾಂಕಾ ಛೋಪ್ರಾ ಬಳಿ 80 ಕ್ಕೂ ಹೆಚ್ಚು ಹೀಲ್ಸ್ ಇವೆ.! ಎಲ್ಲವೂ ಪ್ರಖ್ಯಾತ ಬ್ರ್ಯಾಂಡ್ ಗಳದ್ದು.! ಒಂದೊಂದು ಹೀಲ್ಸ್ ನ ಮೊತ್ತ ಏನಿಲ್ಲ ಅಂದ್ರೂ ಐದು ಅಂಕಿ ಮುಟ್ಟುತ್ತದೆ. ಬರೀ ಹೀಲ್ಸ್ ಗಾಗಿಯೇ ಪ್ರಿಯಾಂಕಾ ಛೋಪ್ರಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.

  ಸಾಮಾನ್ಯ ಹೆಣ್ಣು ಮಕ್ಕಳಾಗಿದ್ದರೆ ಅದೇ ದುಡ್ಡಲ್ಲಿ ಚಿನ್ನ-ವಜ್ರ ಖರೀದಿ ಮಾಡ್ತಿದ್ರೇನೋ.. ಆದ್ರೆ, ಪ್ರಿಯಾಂಕಾ ಛೋಪ್ರಾಗೆ ದುಡ್ಡಿಗೆ ಬರವೆಲ್ಲಿ.? ಪ್ರತಿ ದಿನ ಹೊರಗೆ ಹೊರಟಾಗ ಆಕೆಯನ್ನ ಸೆರೆಹಿಡಿಯಲು ಕ್ಯಾಮರಾ ಕಣ್ಣುಗಳು ಕಾಯುತ್ತಿರುತ್ತವೆ. ಹೀಗಾಗಿ, ತಮ್ಮ ಸ್ಟೈಲ್ ಬಗ್ಗೆ ಪ್ರಿಯಾಂಕಾ ಗಮನ ಹರಿಸಲೇ ಬೇಕು ಅಲ್ಲವೇ.!

  ಹೊಸ ಮನೆ ಖರೀದಿಸಿದ ಪ್ರಿಯಾಂಕಾ ದಂಪತಿ: ಬೆಲೆ ಕೇಳಿದರೆ ಅಚ್ಚರಿ ಪಡುತ್ತೀರಿಹೊಸ ಮನೆ ಖರೀದಿಸಿದ ಪ್ರಿಯಾಂಕಾ ದಂಪತಿ: ಬೆಲೆ ಕೇಳಿದರೆ ಅಚ್ಚರಿ ಪಡುತ್ತೀರಿ

  ಅಂದ್ಹಾಗೆ, ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಲಾಸ್ ಏಂಜಲೀಸ್ ನಲ್ಲಿ ಇತ್ತೀಚೆಗಷ್ಟೇ 144 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದರು.

  ಈ ವಿಚಾರದಲ್ಲಿ ಸನ್ನಿ ಲಿಯೋನನ್ನೇ ಮೀರಿಸಿದ ನಟಿ ಪ್ರಿಯಾಂಕಾ ಚೋಪ್ರಾಈ ವಿಚಾರದಲ್ಲಿ ಸನ್ನಿ ಲಿಯೋನನ್ನೇ ಮೀರಿಸಿದ ನಟಿ ಪ್ರಿಯಾಂಕಾ ಚೋಪ್ರಾ

  ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ, 'ವೀ ಕ್ಯಾನ್ ಬಿ ಹೀರೋಸ್' ಎಂಬ ಚಿತ್ರದ ಚಿತ್ರೀಕರಣದಲ್ಲಿ ಪ್ರಿಯಾಂಕಾ ಛೋಪ್ರಾ ಬಿಜಿಯಾಗಿದ್ದಾರೆ.

  English summary
  Bollywood and Hollywood Actress Priyanka Chopra has over 80 pairs of Heels

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X