ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಪತಿಯ ಭಾವನಾತ್ಮಕ ಪೋಸ್ಟ್
Recommended Video
ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ತನಗಿರುವ ಕಾಯಿಲೆ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ನಿಕ್ ಜೋನಸ್ ಚಿಕ್ಕ ವಯಸ್ಸಿನಲ್ಲಿಯೆ ಅಂದರೆ ಸುಮಾರು 13 ವರ್ಷದವರಾಗಿದ್ದಾಗಲೆ ಅನಾರೋಗ್ಯಕ್ಕೆ ತುತ್ತಾಗಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಿಕ್ ಜೋನಸ್ 13 ವರ್ಷದವರಾಗಿರುವಾಗಲೆ ಟೈಪ್-1 ಡಯಾಬಿಟಿಸ್ ನಿಂದ ಬಳಲುತ್ತಿದ್ದರಂತೆ. ಈ ವಿಚಾರವನ್ನು ಈಗ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. "14 ವರ್ಷದ ಹಿಂದೆ ಇದೆ ತಿಂಗಳು ನನಗೆ ಟೈಪ್-1 ಡಯಾಬಿಟಿಸ್ ಇರುವುದು ಗೊತ್ತಾಯಿತು. ಇದರಿಂದ ನನಗೆ ನನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದು ಗೊತ್ತಾಯಿತು. ಚೆನ್ನಾಗಿ ವರ್ಕೌಟ್ ಮಾಡುವುದು, ಚೆನ್ನಾಗಿ ತಿನ್ನುವುದು ಮತ್ತು ರಕ್ತದಲ್ಲಿ ಸಕ್ಕರೆ ಅಂಶ ಮತ್ತು ಇನ್ಸುಲಿನ್ ಅಗತ್ಯದ ಬಗ್ಗೆ ಗಮನ ಕೊಡುವುದು" ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

"ಈ ರೋಗ ಬೇರೆಯವರಿಗೆ ಕಾಣದಿದ್ದರು, ನನಗೆ ಏಕಾಂಗಿತನದ ಭಾವನೆ ಕಾಡುತ್ತಿತ್ತು. ಹಾಗಾಗಿ ನಾನು 2015ರಲ್ಲಿ BeyondType1 ಸಂಸ್ಥೆಯನ್ನು ಪ್ರಾರಂಭಿಸಿದೆ. ಈ ಸಂಸ್ಥೆ ನಿಮಗೆ ಧೈರ್ಯ ತುಂಬುವ ಕೆಲಸ ಮತ್ತು ಈ ಕಾಯಿಲೆ ವಿರುದ್ಧ ಹೇಗೆ ಹೋರಾಡಬೇಕು ಎನ್ನುವುದನ್ನು ಹೇಳಲಾಗುತ್ತೆ. ನವೆಂಬರ್ ತಿಂಗಳು ಡಯಾಬಿಟಿಸ್ ಜಾಗೃತಿ ತಿಂಗಳಾಗಿ ಆಚರಿಸಲಾಗುತ್ತಿದೆ. ನೀವು ಕೂಡ ಕೈ ಜೋಡಿಸಿ" ಎಂದು ಹೇಳಿದ್ದಾರೆ.
ಇತ್ತೀಚಿಗೆ ನಿಕ್ ಪತ್ನಿ ಪ್ರಿಯಾಂಕಾ ಚೋಪ್ರಾ ಅಸ್ತಮ ಇರುವ ಬಗ್ಗೆ ಬಹಿರಂಗ ಪಡಿಸಿದ್ದರು. ಈಗ ಪತಿ ತನಗಿರುವ ಕಾಯಿಲೆ ಬಗ್ಗೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ನಿಕ್ ಗಾಯಕರಾಗಿದ್ದು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2108ರಲ್ಲಿ ನಿಕ್ ಬಾಲಿವುಡ್ ನಟಿ ಪ್ರಿಯಾಂಕಾ ಕೈ ಹಿಡಿದಿದ್ದಾರೆ.


Click it and Unblock the Notifications











