ಮನೀಶ್ ಮಲ್ಹೋತ್ರ ಕಂಡು ಮೂತಿ ತಿರುಗಿಸಿದ್ಯಾಕೆ ನಟಿ ಪ್ರಿಯಾಂಕಾ ಛೋಪ್ರಾ.?
Recommended Video
ಗೆಳೆತನ ಇದ್ದ ಕಡೆ ಕೋಪ, ಮುನಿಸು ಸಹಜ. ಸ್ನೇಹಿತರ ನಡುವೆ ಸಣ್ಣ-ಪುಟ್ಟ ಕಿತ್ತಾಟ ನಡೆಯುವುದು ಸಾಮಾನ್ಯ. ಚಿಕ್ಕ ಮ್ಯಾಟರ್ ಗೆ ಮುಖ ಊದಿಸಿಕೊಳ್ಳುವ ಎಷ್ಟೋ ಸ್ನೇಹಿತರನ್ನ ನೋಡಿಲ್ವಾ ಹೇಳಿ.? ಹಾಗೇ, ಫ್ರೆಂಡ್ಸ್ ಆಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮತ್ತು ಖ್ಯಾತ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರ ನಡುವೆಯೂ ಮನಸ್ತಾಪ ಮೂಡಿದ್ಯಾ.?
ಹೀಗೊಂದು ಅನುಮಾನಕ್ಕೆ ಕಾರಣವಾಗಿದ್ದು ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಉಮಂಗ್ ಕಾರ್ಯಕ್ರಮದಲ್ಲಾದ ಒಂದು ಘಟನೆ.
ಮುಂಬೈ ಪೊಲೀಸರಿಗಾಗಿ ಪ್ರತಿ ವರ್ಷ ಉಮಂಗ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಂತೆ ಈ ವರ್ಷ ನಡೆದ ಉಮಂಗ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್, ಶಿಲ್ಪಾ ಶೆಟ್ಟಿ ಕುಂದ್ರಾ, ಕತ್ರಿನಾ ಕೈಫ್, ಟಬು, ಪ್ರಿಯಾಂಕಾ ಛೋಪ್ರಾ ಜೋನಸ್, ಮನೀಶ್ ಮಲ್ಹೋತ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮಕ್ಕೆ ಎಂಟ್ರಿಕೊಡುತ್ತಿದ್ದಂತೆಯೇ, ನಟಿ ಪ್ರಿಯಾಂಕಾ ಛೋಪ್ರಾ ಮುಂದಿನ ಸಾಲಿನಲ್ಲಿ ಕುಳಿತಿದ್ದ ಎಲ್ಲಾ ಸೆಲೆಬ್ರಿಟಿಗಳನ್ನು ಮಾತನಾಡಿಸಿ, ತಬ್ಬಿಕೊಳ್ಳುತ್ತಾರೆ. ಆದ್ರೆ, ಅಲ್ಲೇ ಪಕ್ಕದಲ್ಲಿ ಇದ್ದ ಮನೀಶ್ ಮಲ್ಹೋತ್ರ ರನ್ನು ಮಾತ್ರ ಪ್ರಿಯಾಂಕಾ ಚೋಪ್ರಾ ಅವಾಯ್ಡ್ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ಟಬು ರನ್ನ ತಬ್ಬಿಕೊಳ್ಳುವ ಪ್ರಿಯಾಂಕಾ ಛೋಪ್ರಾ, ಪಕ್ಕದಲ್ಲಿ ಮನೀಶ್ ಮಲ್ಹೋತ್ರ ಇದ್ದರೂ ಕ್ಯಾರೇ ಎನ್ನಲಿಲ್ಲ. ಮನೀಶ್ ಮಲ್ಹೋತ್ರ ಕುಳಿತಿರುವುದನ್ನು ನೋಡಿಯೂ ನೋಡದಂತೆ ಪ್ರಿಯಾಂಕಾ ಛೋಪ್ರಾ ಮೂತಿ ತಿರುಗಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮನೀಶ್ ಮಲ್ಹೋತ್ರ ಮತ್ತು ಪ್ರಿಯಾಂಕಾ ಛೋಪ್ರಾ ನಡುವೆ ಅಂಥದ್ದೇನಾಯ್ತು ಅಂತ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಹಾಗ್ನೋಡಿದ್ರೆ, ಇವರಿಬ್ಬರು ಕ್ಲೋಸ್ ಫ್ರೆಂಡ್ಸ್. ಪ್ರಿಯಾಂಕಾ ಛೋಪ್ರಾ ರವರ ಎಷ್ಟೋ ಡ್ರೆಸ್ ಗಳನ್ನು ಇದೇ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ್ದಾರೆ.
2018 ರಲ್ಲಿ ನಿಶ್ಚಿತಾರ್ಥವೊಂದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಇಟಲಿಗೆ ತೆರಳಿದ್ದಾಗ ಲಗೇಜ್ ಬ್ಯಾಗ್ ಕಳೆದುಕೊಂಡಿದ್ದರು. ಆಗ ಇಬ್ಬರಿಗೂ ಉಡುಗೆಗಳ ವಿಚಾರದಲ್ಲಿ ಸಹಾಯ ಮಾಡಿದ್ದು ಇದೇ ಮನೀಶ್ ಮಲ್ಹೋತ್ರ.
ಈಗ ಇದೇ ಮನೀಶ್ ಮಲ್ಹೋತ್ರ ಮೇಲೆ ಪ್ರಿಯಾಂಕಾ ಛೋಪ್ರಾ ಮುನಿಸಿಕೊಂಡಿದ್ದಾರಾ.? ಖಚಿತ ಮಾಹಿತಿ ಇಲ್ಲ. ಆದ್ರೆ, ಇಬ್ಬರ ನಡುವಿನ ಸ್ನೇಹ ಗಟ್ಟಿಯಾಗಿದ್ದರೆ, ಪ್ಯಾಚಪ್ ಆಗುವುದು ಖಂಡಿತ.


Click it and Unblock the Notifications











