ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಪ್ರಿಯಾಂಕಾಗೆ ಇಷ್ಟೊಂದು ದುಡ್ಡು ಸಿಗುತ್ತಾ.!
ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಹಾಗು ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ ಅದಕ್ಕೆ ಲೈಕ್ ಬಂದಿಲ್ವಾ, ಕಾಮೆಂಟ್ ಬಂದಿಲ್ವಾ ಎಂದು ಕಾಯ್ತಾರೆ ಜನರು. ಆದರೆ, ಒಂದು ಪೋಸ್ಟ್ ಹಾಕಿದ್ರೆ ಆ ಸೋಶಿಯಲ್ ಮೀಡಿಯಾದವರೇ ಲಕ್ಷ, ಕೋಟಿಗಟ್ಟಲೆ ದುಡ್ಡು ಕೊಡ್ತಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ.
ಇದೀಗ, ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಗೆ ಅತಿ ಹೆಚ್ಚು ಗಳಿಕೆ ಮಾಡುವ ಸ್ಟಾರ್ ಗಳ ಪಟ್ಟಿ ಬಿಡುಗಡೆಯಾಗಿದ್ದು, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಭಾರಿ ಮೊತ್ತವನ್ನ ಪಡೆಯುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಹೌದು, ಇನ್ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಚೋಪ್ರಾ ಒಂದು ಪೋಸ್ಟ್ ಹಾಕಿದ್ರೆ ಬರೋಬ್ಬರಿ 1.87 ಕೋಟಿ ಹಣ ಸಿಗುತ್ತಂತೆ. ಈ ಸುದ್ದಿ ಕೇಳಿ ಇಡೀ ಬಾಲಿವುಡ್ ದಂಗಾಗಿದೆ. ಯಾಕಂದ್ರೆ, ಬಾಲಿವುಡ್ ಅಥವಾ ಭಾರತದಲ್ಲಿ ಯಾವ ಸಿನಿ ಸ್ಟಾರ್ ಗೂ ಇಷ್ಟೊಂದು ಹಣ ಕೊಡ್ತಿಲ್ಲ.

ಪ್ರಿಯಾಂಕಾ ಚೋಪ್ರಾ ಹಾಕುವ ಖಾಸಗಿ ಪೋಸ್ಟ್ ಗೆ ದುಡ್ಡು ಕೊಡಲ್ಲ. ಯಾವುದಾದರೂ ಕಮರ್ಷಿಯಲ್ ಉದ್ದೇಶದಿಂದ, ಪ್ರಚಾರಕ್ಕಾಗಿ ಹಾಕುವ ಪೋಸ್ಟ್ ಗೆ ಹಣ ನೀಡಲಾಗುತ್ತೆ. ಪ್ರಿಯಾಂಕಾ 43.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಅಂದ್ಹಾಗೆ, ಭಾರತೀಯರ ಪೈಕಿ ಅತಿ ಹೆಚ್ಚು ಹಣ ಪಡೆಯುವ ಅಥವಾ ಶ್ರೀಮಂತ ಇನ್ಸ್ಟಾಗ್ರಾಂ ಬಳಕೆದಾರರ ಪೈಕಿ ಪ್ರಿಯಾಂಕಾ ಚೋಪ್ರಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾತ್ರ ಇದ್ದಾರೆ. ಕೊಹ್ಲಿ ಒಂದು ಪೋಸ್ಟ್ ಗೆ 1.35 ಕೋಟಿ ತೆಗೆದುಕೊಳ್ಳುತ್ತಾರಂತೆ.


Click it and Unblock the Notifications











