ವಾವ್! ಪ್ರಿಯಾಂಕಾ ಚೋಪ್ರಾ ಅವರ ಈ ಡೆಡಿಕೇಶನ್ ಗೆ ಮೆಚ್ಚಲೇಬೇಕು.!
ಬಾಲಿವುಡ್ ಸಿನಿಮಾರಂಗದ ಟ್ಯಾಲೆಂಟೆಡ್ ನಟಿ ಪ್ರಿಯಾಂಕಾ ಚೋಪ್ರಾ. ಒಂದು ಸಿನಿಮಾಗಾಗಿ ಒಂದು ಪಾತ್ರಕ್ಕಾಗಿ ಪ್ರಿಯಾಂಕಾ ಏನು ಬೇಕಾದರೂ ಮಾಡುತ್ತಾರೆ. ಒಬ್ಬ ನಟಿಯಾಗಿ ಒಂದು ಪಾತ್ರಕ್ಕೆ ಅವರು ಮಾಡುವ ಡೆಡಿಕೇಶನ್ ತುಂಬ ದೊಡ್ಡದು.
ಸದ್ಯ ಈಗ ಪ್ರಿಯಾಂಕಾ ತಮ್ಮ ಹಾಲಿವುಡ್ ಸಿನಿಮಾಗಾಗಿ ಒಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ, ಪ್ರಿಯಾಂಕಾ ಚೋಪ್ರಾ ಈಗ 6 ಪ್ಯಾಕ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಮ್ಮ ಎರಡನೇ ಹಾಲಿವುಡ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಯೋಗ ಟೀಚರ್ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರದಲ್ಲಿ ತುಂಬಾ ಫಿಟ್ ಆಗಿ ಕಾಣಿಸಿಕೊಳ್ಳಬೇಕು ಎಂದು ಪ್ರಿಯಾಂಕಾ 6 ಪ್ಯಾಕ್ ಮಾಡಲು ಮುಂದಾಗಿದ್ದಾರೆ.

ಜೊತೆಗೆ, ಈ ಪಾತ್ರಕ್ಕಾಗಿ ವ್ಯಾಯಾಮ ಮತ್ತು ಮಿತ ಆಹಾರವನ್ನು ಪ್ರಿಯಾಂಕಾ ಸೇವಿಸುತ್ತಿದ್ದಾರಂತೆ. ಇನ್ನು ಈ ಹಿಂದೆ 'ಮೇರಿ ಕೋಮ್' ಚಿತ್ರಕ್ಕಾಗಿಯೂ ಪ್ರಿಯಾಂಕಾ ಇದೇ ರೀತಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು.
English summary
Bollywood Actress 'Priyanka Chopra' is doing 6 pack for her upcoming Hollywood film.


Click it and Unblock the Notifications